Saturday, July 31, 2021
Homeಜಿಲ್ಲೆಧಾರವಾಡ ಕೃಷಿ ವಿ.ವಿಯ 32ನೇ ಘಟಿಕೋತ್ಸವ

ಇದೀಗ ಬಂದ ಸುದ್ದಿ

ಧಾರವಾಡ ಕೃಷಿ ವಿ.ವಿಯ 32ನೇ ಘಟಿಕೋತ್ಸವ

ಧಾರವಾಡ : ಧಾರವಾಡ ನಗರದ ಕೃಷಿ ವಿಶ್ವವಿದ್ಯಾಲಯದ 32ನೇ ಘಟಿಕೋತ್ಸವು ಕೃಷಿ ವಿ.ವಿಯ ರೈತರ ಜ್ಞಾನಾಭಿವೃದ್ಧಿ ಭವನದಲ್ಲಿ ಇಂದು ನಡೆಯಿತು.

ಕೃಷಿಸಚಿವರು ಹಾಗೂ ವಿಶ್ವವಿದ್ಯಾಲಯದ ಸಹಕುಲಾಧಿಪತಿ ಎನ್.ಹೆಚ್.ಶಿವಶಂಕರರೆಡ್ಡಿ ಅವರು ಪದವಿ ಮತ್ತು ಪ್ರಶಸ್ತಿಗಳನ್ನು ಪ್ರದಾನ ಮಾಡಿದರು. ಮುಖ್ಯಅತಿಥಿ ಭಾಷಣವನ್ನು ಕೃಷಿ ವಿ.ವಿ ಕುಲಪತಿ ಡಾ.ಎಂ.ಬಿ.ಚೆಟ್ಟಿ ಮಾಡಿದರು. ಕೇಂದ್ರ ಸರ್ಕಾರದ ಕೃಷಿ ಮತ್ತು ಗ್ರಾಮೀಣ ಶಿಕ್ಷಣ ಇಲಾಖೆಯ ಕಾರ್ಯದರ್ಶಿ ಡಾ.ತ್ರಿಲೋಚನ ಮಹಾಪಾತ್ರ ಅವರು ಘಟಿಕೋತ್ಸವ ಭಾಷಣ ಮಾಡಿದರು.

632 ಸ್ನಾತಕ ಪದವಿಗಳು,321 ಸ್ನಾತಕೋತ್ತರ ಪದವಿಗಳನ್ನು ಹಾಗೂ 76 ಪಿ.ಎಚ್‌.ಡಿ ಪದವಿಗಳನ್ನು ಹಾಗೂ 43 ಸ್ವರ್ಣ ಪದಕಗಳನ್ನು ಪ್ರದಾನ ಮಾಡಿದರು. ಸ್ನಾತಕ ಪದವಿಗಳಲ್ಲಿ ಸಿದ್ದು ಬಸವರಾಜ ಚಿಂದಿ,ಎಚ್.ಅಜಯಕುಮಾರ್,ನಿಖಿತಾ,ಮಾರುತಿ ಭೋವಿ,ಟಿ.ಹರೀಶ,ವರುಣ ಅರಸ್,ಕೆ.ಜೆ.ಅನುಷಾ ಸ್ವರ್ಣ ಪದಕಗಳನ್ನು ಪಡೆದರು. ಮಾನಸಾ ರಾಮನಾತ ಹೆಗಡೆ,ಪ್ರಿಯಾಂಕ ಸಿ.ಹೊನ್ನಳ್ಳಿ ನಗದು ಪುರಸ್ಕಾರ ನೀಡಿದರು.

ಸ್ನಾತಕೋತ್ತರ ಪದವಿಗಳಲ್ಲಿ ಗಣೇಶಪ್ರಸಾದ,ವೈ.ಆರ್.ಹರ್ಷಿತಾ,ಟಿನು ಥಾಮಸ್,ವೈಷ್ಣವಿ ಸಂಗಮ್,ಚಿತ್ರಾ ದಾಸ್,ಅಪರ್ಣಾ ಗೋಕುಲ,ಶಹಾನಾ ಬೇಗಂ,ಟಿ.ವನಿತಾ,ಎಸ್.ಸೀಮಾ,ದೊಡ್ಡಮನಿ,ವಿ.ವೇಣುಗೋಪಾಲ,ನೀನು ಅಗಸ್ಟಿನ್,ಅಲ್‌ಫೋನ್ಸಾ ಜೇಮ್ಸ್,ಪೋತನೂರು ಸಂತೋಷಕುಮಾರ,ದೇವಿಕಾ ಹಿರೇಮಠ,ಐಶ್ವರ್ಯ,ವಿಜಯಕುಮಾರ ಪಾಟೀಲ,ಪ್ರಿಯದರ್ಶಿನಿ ಸಾಹು,ಕೃಷ್ಣಕುಮಾರಿ,ರೌನಕ್ ಕೀರ್ತಿ ಸ್ವರ್ಣ ಪದಕಗಳನ್ನು ಪಡೆದು ಜಯಶ್ರೀ ಅವರ ನಗದು ಪುರಸ್ಕಾರಕ್ಕೆ ಭಾಜನರಾದರು.

ಪಿಹೆಚ್‌ಡಿ ಪದವಿಗಳಲ್ಲಿ ಬಸಮ್ಮ ಹಾದಿಮನಿ,ಶಿಲ್ಪಾ ಚೋಗಟಾಪುರ,ಕರ್ತೂರಿಸಾಯಿ ಸಂತೋಷ,ವೃಂದಾ ಜೋಷಿ,ವಿ.ಎಸ್.ರಾಧಿಕಾ,ಮಧುರಿಮಾ ವಿನೋದ,ನೀಲಮ್ಮ ಆರ್.ಕೋಲಗೇರಿ,ವಿ.ಹರ್ಷವರ್ಧನಗೌಡ,ಶೋಭಾ ಹುಯಿಲಗೋಳ,ಸುಪ್ರಿಯಾ ಪಿ.ಪಾಟೀಲ,ಪವಿತ್ರ ಭಟ್ ಅವರು ಸ್ವರ್ಣಪದಕಗಳು ಹಾಗೂ ನಗದು ಪುರಸ್ಕಾರಕ್ಕೆ ಪಡೆದರು. ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಸದಸ್ಯ ಈಶ್ವರಚಂದ್ರ ಹೊಸಮನಿ,ಕುಲಸಚಿವ ಪಿ.ಯು.ಕೃಷ್ಣರಾಜ,ಸಂಶೋಧನಾ ನಿರ್ದೇಶಕ ಡಾ.ಹೆಚ್.ಎಲ್.ನದಾಫ್,ವಿಸ್ತರಣಾ ನಿರ್ದೇಶಕ ಎಚ್.ವೆಂಕಟೇಶ ಸೇರಿ ನೂರಾರು ವಿದ್ಯಾರ್ಥಿಗಳು ಉ

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img