Sunday, May 16, 2021
Homeಕ್ರೈಂ ನ್ಯೂಸ್ಅಂಗನವಾಡಿ ಕಾರ್ಯಕರ್ತೆಯಿಂದಲೇ ಅಂಗನವಾಡಿಯ ಪೌಷ್ಠಿಕ ಆಹಾರ ಕಳ್ಳಸಾಗಾಣೆ!

ಇದೀಗ ಬಂದ ಸುದ್ದಿ

ಅಂಗನವಾಡಿ ಕಾರ್ಯಕರ್ತೆಯಿಂದಲೇ ಅಂಗನವಾಡಿಯ ಪೌಷ್ಠಿಕ ಆಹಾರ ಕಳ್ಳಸಾಗಾಣೆ!

ವಿಜಯಪುರ : ಜಿಲ್ಲೆಯ ಇಂಡಿ ತಾಲ್ಲೂಕಿನಲ್ಲಿ ಮಕ್ಕಳಿಗೆ ನೀಡಬೇಕಾದ ಪೌಷ್ಠಿಕ ಆಹಾರ ಸೇವನೆ ಪದಾರ್ಥಗಳನ್ನು ಅಕ್ರಮವಾಗಿ ಸಾಗಿಸುತ್ತಿರುವ ವಾಹನವನ್ನು ಗ್ರಾಮಸ್ಥರೇ ಹಿಡಿದು ಅಧಿಕಾರಿಗಳಿಗೆ ಒಪ್ಪಿಸಿದ್ದಾರೆ.  

ಇಂಡಿ ತಾಲೂಕಿನ ತಾಂಬಾ ಸಮೀಪದ ಬಂಥನಾಳ ಗ್ರಾಮದಲ್ಲಿ ಅಂಗನವಾಡಿ ಕ್ರಮ ಸಂಖ್ಯೆ 3ರ ಕಾರ್ಯಕರ್ತೆ ಸುವರ್ಣ ರಾಂಪುರ ಎಂಬುವವರು ಅಕ್ರಮವಾಗಿ ಧವಸ ಧಾನ್ಯಗಳನ್ನು ವಾಹನ ಸಂಖ್ಯೆ KA 28 M 0979 ಟಾಟಾ ಸುಮೊ ವಾಹನದಲ್ಲಿ ಸಾಗಾಣಿಕೆ ಮಾಡುತ್ತಿದ್ದರು. ಆಗ ಇದನ್ನು ಗಮನಿಸಿದ ಗ್ರಾಮಸ್ಥರು ರಾತ್ರಿ 11 ಘಂಟೆ ವೇಳೆಯಲ್ಲಿ ಆ ನಂಬರಿನ ಟಾಟಾಸುಮೊ ವಾಹನವನ್ನು ಹಿಡಿದರು. ಆಗ ಟಾಟಾ ಸುಮೊವನ್ನು ಹಿಡಿದ ಗ್ರಾಮಸ್ಥರು ಅದನ್ನು ಒಳತೆಗೆದು ನೋಡಿದಾಗ 61 ಹಾಲಿನ ಪ್ಯಾಕೆಟ್ ಗಳು,18 ಸಕ್ಕರೆ ಪ್ಯಾಕೆಟ್ ಗಳು ಸಿಕ್ಕಿವೆ. ತಕ್ಷಣ ಸಿಕ್ಕ ಹಾಲಿನ ಪ್ಯಾಕೇಟ್ ಗಳು,ಸಕ್ಕರೆ ಪ್ಯಾಕೇಟ್ ಗಳನ್ನು ಗ್ರಾಮಸ್ಥರು ಅಧಿಕಾರಿಗಳಿಗೆ ಒಪ್ಪಿಸಿದ್ದಾರೆ.

ಬಳಿಕ ಸುದ್ದಿ ತಿಳಿದು ಘಟನಾ ಸ್ಥಳಕ್ಕೆ ಭೇಟಿ ನೀಡಿದ ಸಿಡಿಪಿಓ ಅಧಿಕಾರಿ ಎಸ್.ಸಿ.ಮ್ಯಾಗೇರಿ ಅವರು ಸೂಕ್ತವಾಗಿ ಪರಿಶೀಲಿಸಿ ಅಂಗನವಾಡಿ ಕಾರ್ಯಕರ್ತೆ ಮೇಲೆ ಕ್ರಮ ಕೈಗೊಳ್ಳುವುದಾಗಿ ಹೇಳಿದರು.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img