Saturday, November 28, 2020
Home ಕ್ರೈಂ ನ್ಯೂಸ್ ಹೊಸದೊಂದು ತಿರುವು ಪಡೆದ ನವಲುಗುಂದ ಪ್ರೇಮ ವಿವಾಹ ವಿವಾದ..!

ಇದೀಗ ಬಂದ ಸುದ್ದಿ

ಶೀಘ್ರದಲ್ಲೇ ಗೋಹತ್ಯೆ ನಿಷೇಧ ಕಾಯ್ದೆ ಮಂಡನೆ

ಬೆಂಗಳೂರು : ಪಕ್ಷದ ಚುನಾವಣೆ ಪ್ರಣಾಳಿಕೆಯಲ್ಲಿ ನೀಡಿದ ಭರವಸೆ ಪ್ರಕಾರ ರಾಜ್ಯದಲ್ಲಿ ಗೋಹತ್ಯೆ ನಿಷೇಧ ಜಾರಿಗೆ ತರಲು ಬಿಜೆಪಿ ಸರ್ಕಾರ ಬದ್ಧವಾಗಿದ್ದು, ಮುಂದಿನ ಅಧಿವೇಶನದಲ್ಲಿ ಮಸೂದೆ ಮಂಡಿಸಲಾಗುತ್ತದೆ ಎಂದು ಪಶು...

ಮುಂಬೈ ರೈಲುಗಳಲ್ಲಿ ಮಕ್ಕಳಿಗೆ ಪ್ರಯಾಣ ನಿರ್ಬಂಧ

ಮುಂಬೈ: ಸ್ಥಳೀಯ ರೈಲುಗಳಲ್ಲಿ ಪ್ರಯಾಣಿಸುವಾಗ ಪೋಷಕರು ತಮ್ಮ ಮಕ್ಕಳನ್ನು ಜೊತೆಯಲ್ಲಿ ಕರೆದುಕೊಂಡು ಬಾರದಿರುವಂತೆ ಮುಂಬೈ ರೈಲ್ವೆ ನಿರ್ಭಂದ ಹೇರಿದೆ. ಮಹಾರಾಷ್ಟ್ರದಲ್ಲಿ ಕೋವಿಡ್19 ಸೋಂಕಿನ ಪ್ರಮಾಣ ದಿನೇ ದಿನೇ...

ನೌಕಾಪಡೆಯ ಮಿಗ್ 29 ತರಬೇತಿ ವಿಮಾನ ...

ನವದೆಹಲಿ.ನ.27 : ಭಾರತೀಯ ನೌಕಾ ಪಡೆಯ ಮಿಗ್ 29 ಕೆಯುಬಿ ತರಬೇತಿ ಯುದ್ಧ ವಿಮಾನ ಪತನವಾಗಿದ್ದು, ಘಟನೆಯಲ್ಲಿ ಪೈಲಟ್ ಒಬ್ಬನನ್ನು ರಕ್ಷಿಸಲಾಗಿದ್ದು, ಮತ್ತೊಬ್ಬ ಪೈಲಟ್ ನಾಪತ್ತೆಯಾಗಿದ್ದಾರೆ.ಗೋವಾ ಬಂದರಿವನಲ್ಲಿರುವ ಐಎನ್‌ಎಸ್ ವಿಕ್ರಾಮಾಧಿತ್ಯ...

ತುಳು ಅಭಿವೃದ್ಧಿಗೆ ಪ್ರತ್ಯೇಕ ಪ್ರಾಧಿಕಾರ ರಚಿಸಿ: ಬಿ.ಕೆ.ಹರಿಪ್ರಸಾದ್...

ಮಂಗಳೂರು: ತುಳು ಅಭಿವೃದ್ಧಿಗೆ ಪ್ರತ್ಯೇಕ ಪ್ರಾಧಿಕಾರ ರಚನೆ ಮಾಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಆಗ್ರಹಿಸಿದರು. ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ...

ಅರ್ನಬ್‌ ಗೋಸ್ವಾಮಿಗೆ ಮಧ್ಯಂತರ ಜಾಮೀನು ಮುಂದುವರಿಕೆ: ಸುಪ್ರೀಂ...

ನವದೆಹಲಿ: ಆತ್ಮಹತ್ಯೆ ಪ್ರಚೋದನೆ ಪ್ರಕರಣದಲ್ಲಿ ರಿಪಬ್ಲಿಕ್‌ ಟಿ.ವಿ ಸಂಪಾದಕ ಅರ್ನಬ್ ಗೋಸ್ವಾಮಿ ಮತ್ತು ಇತರೆ ಇಬ್ಬರ ಅರ್ಜಿಗಳನ್ನು ಬಾಂಬೆ ಹೈಕೋರ್ಟ್‌ ವಿಲೇವಾರಿ ಮಾಡುವವರೆಗೂ, ಅವರಿಗೆ ನೀಡಿರುವ ಮಧ್ಯಂತರ ಜಾಮೀನು ಮುಂದುವರಿಯಲಿದೆ ಎಂದು...

ಹೊಸದೊಂದು ತಿರುವು ಪಡೆದ ನವಲುಗುಂದ ಪ್ರೇಮ ವಿವಾಹ ವಿವಾದ..!

ಹುಬ್ಬಳ್ಳಿ : ಕಳೆದ ಮೂರು ದಿನಗಳ ಹಿಂದೆ ನವಲುಗುಂದದ ಜೋಡಿ ತಿರುಪತಿಯಲ್ಲಿ ಮದುವೆ ವಿವಾದಕ್ಕೆ ಸಿಲುಕಿತ್ತು. ಮದುವೆಯಾದ ಮೂರು ದಿನಗಳಿಗೇ ಯುವಕ ತನಗೆ ವಂಚಿಸಿ ಹೋಗದ್ದಾನೆಂದು ಮದುವೆಯಾಗಿದ್ದ ಯುವತಿ ಆಕ್ರೋಶ ವ್ಯಕ್ತಪಡಿಸಿದ್ದಳು, ಇದೀಗ ಈ ಸ್ಟೋರಿಗೆ ಹೊಸ ಟ್ವಿಸ್ಟ್ ಟ್ವಿಸ್ಟ್ ಸಿಕ್ಕಿದೆ.

ತನ್ನನ್ನು ಪ್ರೀತಿಸಿ ತಿರುಪತಿಯಲ್ಲಿ ಮದುವೆಯಾದ ಯುವಕ ವಂಚಿಸಿ ಪರಾರಿಯಾಗಿದ್ದಾನೆಂದು ನವಲುಗುಂದದ ಯುವತಿಯೊಬ್ಬರು ಆರೋಪಿಸಿ ಸಾಮಾಜಿಕ ಜಾಲತಾಣಗಳಲ್ಲೂ ನನ್ನ ಗಂಡನನ್ನು ಹುಡುಕಿಕೊಡುವಂತೆ ಮನವಿ ಮಾಡಿದ ಪ್ರಕರಣ ಈಗ ಹೊಸ ತಿರುವು ಪಡೆದುಕೊಂಡಿದೆ.

ಸಾಮಾಜಿಕ ಜಾಲತಾಣಗಳಲ್ಲೂ ಸುದ್ದಿ ಹೆಚ್ಚು ವೈರಲ್ ಆಗಿತ್ತು. ಆದರೆ ಮಂಗಳವಾರ ತಡರಾತ್ರಿ ಯುವತಿ ಕಾವೇರಿ ನವಲಗುಂದ ಪೊಲೀಸ್ ಠಾಣೆಗೆ ಬಂದು ವರದಕ್ಷಿಣೆ ಕಿರುಕುಳ ಆರೋಪ ಮಾಡಿ ದೂರು ದಾಖಲಿಸಿದ್ದಾರೆ. ದೂರಿನಲ್ಲಿ ಯುವತಿ ನಾನು ಮತ್ತು ಕಲ್ಮೇಶ ಬೋರಶೆಟ್ಟಿ ಪ್ರೀತಿಸಿ ಮದುವೆಯಾಗಿದ್ದೆವು. ಆದರೆ ಅವರ ತಾಯಿ ಶಿವಲೀಲಾ ಬೋರಶೆಟ್ಟರ್ ಹಾಗೂ ತಂದೆ ಬಸವರಾಜ ಅವರಿಗೆ ಈ ಮದುವೆ ಇಷ್ಟವಿರಲಿಲ್ಲ, ಇದು ವಿವಾದಕ್ಕೆ ಕಾರಣವಾಗಿ ದೂರವಾಣಿಯಲ್ಲಿ ಬೆದರಿಕೆ ಹಾಕಿದರು. ನನ್ನ ಗಂಡ ಕಲ್ಮೇಶನಿಗೆ ನೀನು ಸಾಕಷ್ಟು ಓದಿದ್ದೀಯಾ ನಿನಗೆ ಹೆಚ್ಚು ವರದಕ್ಷಿಣೆ ಕೊಟ್ಟು ಮದುವೆಯಾಗುವವರಿದ್ದಾರೆ. ಅವಳನ್ನು ಬಿಟ್ಟು ಬಾ,ಮನೆಗೆ ಆಕೆಯನ್ನು ಕರೆದುಕೊಂಡು ಬರುವುದಾದರೆ ಸಾಕಷ್ಟು ವರದಕ್ಷಿಣೆ ತೆಗೆದುಕೊಂಡು ಬಂದರೆ ಮಾತ್ರ ಮನೆಗೆ ಕರೆದುಕೊಳ್ಳುತ್ತೇವೆಂದು ಬೆದರಿಕೆ ಹಾಕಿದರು. ತಾಯಿ ಮಾತನ್ನು ಕೇಳಿದ ಕಲ್ಮೇಶ ನನ್ನನ್ನು ಹುಬ್ಬಳ್ಳಿಗೆ ಕರೆದುಕೊಂಡು ಬಂದು ಹೊಸ ಬಸ್ ನಿಲ್ದಾಣದ ಬಳಿ ನನ್ನನ್ನು ನಿಂದನೆ ಮಾಡಿದ. ವರದಕ್ಷಿಣೆ ಕೊಡಲಾಗದ ಜನರು ನೀವು ಎಂದು ಮಾನಸಿಕವಾಗಿ ಆವಾಚ್ಯ ಶಬ್ದಗಳಿಂದ ನಿಂದನೆ ಮಾಡಿ ನನ್ನನ್ನು ವಂಚಿಸಿ ಪರಾರಿಯಾಗಿದ್ದು ಕಾನೂನು ರೀತಿ ಸೂಕ್ತ ಕ್ರಮ ಕೈಗೊಳ್ಳುವಂತೆ ನವಲಗುಂದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.

ಬಹುಷಃ ನನ್ನ ವಿರುದ್ಧ ದೂರು ದಾಖಲಿಸಿರುವ ಸುದ್ದಿ ತಿಳಿದ ಕಲ್ಮೇಶ ಬುಧವಾರ ಮಧ್ಯಾಹ್ನ ನವಲಗುಂದ ಪೊಲೀಸ್ ಠಾಣೆಗೆ ಬಂದು ನಾನು ಅವಳನ್ನು ಪ್ರೀತಿಸಿ ಮದುವೆಯಾಗಿದ್ದು ನಿಜ. ನಾನು ಅವಳ ಜೊತೆ ಸಂಸಾರ ನಡೆಸಲು ಸಿದ್ಧನಾಗಿದ್ದೇನೆ. ನಾನು ಅವಳನ್ನು ವಂಚಿಸಿ ಎಲ್ಲಿಯೂ ಪರಾರಿಯಾಗಿರಲಿಲ್ಲ. ಆದರೆ ಜೂನ್ 8 ರಂದು ರಾತ್ರಿ ನಾವಿಬ್ಬರು ಮದುವೆ ಮಾಡಿಕೊಂಡು ಹುಬ್ಬಳ್ಳಿಗೆ ಬಂದಿರುವ ಸುದ್ದಿ ತಿಳಿದುಕೊಂಡ ಕಾವೇರಿಯ ತಂದೆ ಬಸಯ್ಯ ಹಿರೇಮಠ,ಸಹೋದರಿ ಲಕ್ಷ್ಮೀ ಹಿರೇಮಠ,ಇನ್ನೊಬ್ಬ ಸಹೋದರಿ ಸುಧಾ ಹಿರೇಮಠ ಎಂಬುವರು ಮೂವರು ರೌಡಿಗಳೊಂದಿಗೆ ಆಗಮಿಸಿ ನನ್ನ ಮೇಲೆ ಹಲ್ಲೆ ನಡೆಸಿದರು. ನನ್ನ ಮೊಬೈಲ್ ಒಡೆದು ಹಾಕಿ ನಮ್ಮ ಜಾತಿ ನಿಮ್ಮ ಜಾತಿ ಬೇರೆಯದಾಗಿದ್ದು ಈ ಮದುವೆ ನಮಗೆ ಇಷ್ಟವಿಲ್ಲ. ನೀವು ಗ್ರಾಮಕ್ಕೆ ಬಂದರೆ ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲವೆಂದು ಜೀವ ಬೆದರಿಕೆ ಹಾಕಿದ ಕಾರಣ ನಾನು ಹೆದರಿಕೊಂಡು ಬೆಂಗಳೂರಿಗೆ ಹೋಗಿದ್ದೆ ಹೊರತು ಕಾವೇರಿಯನ್ನು ವಂಚಿಸಿ ಹೋಗಿರಲಿಲ್ಲವೆಂದು ಕಲ್ಮೇಶ ಹೇಳಿಕೆ ನೀಡಿದ್ದಾನೆ. ಈಗಲೂ ನಾನು ಕಾವೇರಿ ಜೊತೆ ಸಂಸಾರ ಮಾಡಲು ಸಿದ್ದನಿದ್ದೇನೆ.

ಕಾವೇರಿಯನ್ನು ಹುಡುಕಿಕೊಡುವಂತೆ ಮತ್ತು ನಮಗೆ ರಕ್ಷಣೆ ಕೊಡುವಂತೆ ನವಲಗುಂದ ಪೊಲೀಸ್ ಠಾಣೆಗೆ ದೂರು ನೀಡಲು ಬಂದಿದ್ದೇನೆ. ನಮ್ಮ ಕುಟುಂಬದವರ ಜೊತೆ ಆಗಲಾರದವರು ನನ್ನ ತಾಯಿಯ ಹೆಸರು ಕೆಡಿಸಲು ರಾಜಕೀಯ ಮಾಡುತ್ತಿದ್ದಾರೆಂದು  ಕಲ್ಮೇಶ ಆರೋಪಿಸಿ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾನೆ.

TRENDING