ಬೆಂಗಳೂರು: ಲೂಸಿಯಾ ಫಿಲ್ಮ್ಗೆ ಹೋಲಿಕೆಯಾಗೋ ಮಾತ್ರೆಯೊಂದು ಬೆಂಗಳೂರಿಗೆ ಕಾಲಿಟ್ಟಿದ್ದು, ಟೆಕ್ಕಿ ಮತ್ತು ಕಾಲೇಜ್ ಸ್ಟೂಡೆಂಟ್ಗಳೇ ಈ ಗುಳಿಗೆ ಮಾರಾಟಗಾರರ ಟಾರ್ಗೆಟ್ ಆಗಿದ್ದಾರೆ.
ವಿದೇಶದಿಂದ ಬರುವ ಈ ಟ್ಯಾಬ್ಲೆಟ್ ಮೂಲ ಬರ್ಮಾ. ಈ ಟ್ಯಾಬ್ಲೆಟ್ ತಗೊಂಡ್ರೆ ಮತ್ತಲ್ಲೇ ಇಡೀ ದಿನ ಕನಸಿನ ಲೋಕದಲ್ಲಿ ವಿಹರಿಸಬಹುದಂತೆ. 8 ರಿಂದ 12 ಗಂಟೆ ಕೆಲಸ ಮಾಡುವ ಈ ಒಂದು ಟ್ಯಾಬ್ಲೆಟ್ನ ಬೆಲೆ 1000 ರೂಪಾಯಿ.
ಇನ್ನು ಇಲ್ಲಿನ ಪೊಲೀಸರು ಪಶ್ಚಿಮ ಬಂಗಾಳ ಮೂಲದ ಓರ್ವ ವ್ಯಕ್ತಿಯನ್ನು ಬಂಧಿಸಿದ್ದು, ಈ ಮೂಲಕ ಲೂಸಿಯಾ(ಮೆಥಾಂಪ್ಟಮೈನ್) ಟ್ಯಾಬ್ಲೆಟ್ ಮಾರಾಟ ಜಾಲ ಬೆಳಕಿಗೆ ಬಂದಿದೆ. ನಗರದಲ್ಲಿರುವ ಪಶ್ಚಿಮ ಬಂಗಾಳ ಮೂಲದವರೇ ಈತನ ಟಾರ್ಗೆಟ್ ಆಗಿದ್ದು, ಸಿಸಿಬಿ ಪೊಲೀಸರು ಡ್ರಗ್ಸ್ ಮಾರಾಟ ಜಾಲದ ಬೇರುಗಳ ಬೆನ್ನತ್ತಿದ್ದಾರೆ.