Sunday, May 16, 2021
Homeಜಿಲ್ಲೆಜಮಖಂಡಿ ಮಾಜಿ ಶಾಸಕ ಸಿದ್ದು ಭೀ.ನ್ಯಾಮಗೌಡರ ಪ್ರಥಮ ಪುಣ್ಯಸ್ಮರಣೆ

ಇದೀಗ ಬಂದ ಸುದ್ದಿ

ಜಮಖಂಡಿ ಮಾಜಿ ಶಾಸಕ ಸಿದ್ದು ಭೀ.ನ್ಯಾಮಗೌಡರ ಪ್ರಥಮ ಪುಣ್ಯಸ್ಮರಣೆ

ಬಾಗಲಕೋಟ : ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಹೀರೆಪಡ್ಡಸಲಗಿ ಗ್ರಾಮದ ಜಮಖಂಡಿ ಶುಗರ್ ಆವರಣದಲ್ಲಿ ಇಂದು ಅಮರಚೇತನ,ಕೃಷ್ಣಾ ತೀರದ ರತ್ನ ಲಿಂಗೈಕ್ಯ ಮಾಜಿ ಶಾಸಕ ಸಿದ್ದು ಭೀ.ನ್ಯಾಮಗೌಡರವರ ಪ್ರಥಮ ಪುಣ್ಯಸ್ಮರಣೆಯನ್ನು — ಪರಮಪೂಜ್ಯ ಶ್ರೀ ಸಿದ್ಧೇಶ್ವರ ಮಹಾಸ್ವಾಮಿಜಿಯವರಿಂದ ಪುಣ್ಯಸ್ಮರಣೆ ಕಾರ್ಯಕ್ರಮ ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು.

ಈ ಕಾರ್ಯಕ್ರಮದಲ್ಲಿ ಮುಂಜಾನೆಯ ಸಿದ್ದು ನ್ಯಾಮಗೌಡರ ಸಮಾಧಿಗೆ ಅಭಿಷೇಕ ಮಾಡಿ ನಂತರ ಪೂಜೆ ಸಲ್ಲಿಸಿ ಫಲಪುಷ್ಪಗಳಿಂದ ಶೃಂಗಾರಗೊಳಿಸಲಾಯಿತು. ಸಕಲ ಪೂಜ್ಯರಿಂದ ಮತ್ತು ರಾಜಕೀಯ ಮುಖಂಡರು ಮತ್ತು ರೈತರು ಮತ್ತು ಅಭಿಮಾನಿಗಳು ಮತ್ತು ಅವರ ಕುಟುಂಬದ ಸದಸ್ಯರು ಭಾಗವಹಿಸಿ ಅಕ್ಷತಾ ರೂಪನ ಮತ್ತು ಪುಷ್ಪಗಳಿಂದ ನಮನ ಸಲ್ಲಿಸಿದರು.

ಈ ಕಾರ್ಯಕ್ರಮದಲ್ಲಿ ವಿಶೇಷವಾಗಿ ಅವಿಭಕ್ತ ಕುಟುಂಬದ ಹಿರಿಯ 21 ಸದಸ್ಯರಿಗೆ ಪೂಜ್ಯರು ರಾಜಕೀಯ ಮುಖಂಡರು ಸೇರಿ  ಸನ್ಮಾನ ಮಾಡಿದರು.

ಈ ಕಾರ್ಯಕ್ರಮದಲ್ಲಿ ಸುತ್ತಮುತ್ತಲಿನ ಬೇರೆ ಬೇರೆ ಜಿಲ್ಲೆಯ ಮತ್ತು ತಾಲ್ಲೂಕಿನ ಕೃಷ್ಣಾತೀರದ ರೈತರು ಮತ್ತು ಅಭಿಮಾನಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಈ ಕಾರ್ಯಕ್ರಮದಲ್ಲಿ ವಿಜಯಪುರ ಯೋಗಾಶ್ರಮದ ಪರಮಪೂಜ್ಯ ಶ್ರೀ ಸಿದ್ಧೇಶ್ವರ ಮಹಾಸ್ವಾಮಿಗಳು,ಕೊಲ್ಲಾಪುರ ಕನ್ಯೇರಿ ಮಠದ ಅದೃಶ್ಯ ಕಾಡಸಿದ್ಧೇಶ್ವರ ಮಹಾಸ್ವಾಮಿಗಳು,ಜಮಖಂಡಿ ಶಾಸಕ ಆನಂದ ಸಿದ್ದು ನ್ಯಾಮಗೌಡ,ಮಾಜಿ ವಿಧಾನಪರಿಷತ್ ಸದಸ್ಯ ಜಿ.ಎಸ್. ನ್ಯಾಮಗೌಡ ಉಪಸ್ಥಿತರಿದ್ದರು.

ಕಾರ್ಯಕ್ರಮ ಮುಗಿದ ನಂತರ ಬಂದ ರೈತರಿಗೆ ಮತ್ತು ಅಭಿಮಾನಿಗಳಿಗೆ ಸಕ್ಕರೆಯ ಕಾರ್ಖಾನೆಯ ಆವರಣದಲ್ಲಿ ಊಟದ ವ್ಯವಸ್ಥೆ ಮಾಡಲಾಯಿತು.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img