Thursday, November 26, 2020
Home ಆರೋಗ್ಯ ಕೊಲ್ಕತ್ತಾದಲ್ಲಿ ವೈದ್ಯರ ಮೇಲಿನ ಹಲ್ಲೆ ಖಂಡಿಸಿ ನಾಳೆ ರಬಕವಿ-ಬನಹಟ್ಟಿ ವೈದ್ಯರಿಂದ ಓಪಿಡಿ ಬಂದ್

ಇದೀಗ ಬಂದ ಸುದ್ದಿ

ಮಹಾಮಾರಿ ಕೊರೊನಾಗೆ ಸುಡಾನ್ ಮಾಜಿ ಪ್ರಧಾನಿ `ಸಾದಿಕ್...

ಜಗತ್ತನ್ನೇ ನರಳಿಸುತ್ತಿರುವ ಕೊರೊನಾ ಸೋಂಕಿನ ಎದುರು ಎಂತಹ ನಾಯಕನಾದರೂ ಮಂಡಿಯೂರಬೇಕು ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಸುಡಾನ್‌ನ ಮಾಜಿ ಪ್ರಧಾನಿ ಸಾದಿಕ್ ಅಲ್-ಮೆಹ್ದಿ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ. 84 ವರ್ಷದ ಮೆಹ್ದಿ...

ಸ್ಟೀಮರ್​ ಬೋಟ್​ನಿಂದ 8 ಟ್ರಕ್ ನದಿ ಪಾಲು

ಕೋಲ್ಕತ: ಸೋಮವಾರ ದೊಡ್ಡ ಸ್ಟೀಮರ್​ ಬೋಟ್​ನಿಂದ ಆಕಸ್ಮಿಕವಾಗಿ ನದಿ ಪಾಲಾಗಿದ್ದ ಕಾರ್ಮಿಕರು ಮತ್ತು 8 ಟ್ರಕ್​ಗಳಲ್ಲಿ ಈವರೆಗೆ ಎರಡು 3 ಟ್ರಕ್​ ಅನ್ನು ಹೊರತೆಗೆಯಲಾಗಿದ್ದು, ಕಾರ್ಮಿಕನೊಬ್ಬನ ಮೃತದೇಹ ಪತ್ತೆಯಾಗಿದೆ.

ಕೆನರಾ ಬ್ಯಾಂಕ್ ನೇಮಕಾತಿ: ಸ್ಪೆಷಲಿಸ್ಟ್ ಅಧಿಕಾರಿ ಹುದ್ದೆಗೆ...

 ಬೆಂಗಳೂರು : ಉದ್ಯೋಗಾಕಾಂಕ್ಷಿಗಳಿಗೆ ಕೆನೆರಾ ಬ್ಯಾಂಕ್ ಸಿಹಿಸುದ್ದಿ ನೀಡಿದ್ದು, 220 ಕೆನರಾ ಬ್ಯಾಂಕ್ ಸ್ಪೆಷಲಿಸ್ಟ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಹುದ್ದೆ ಹೆಸರು: ಕೆನರಾ ಬ್ಯಾಂಕ್ ಸ್ಪೆಷಲಿಸ್ಟ್...

ಫೋಟೋ ವೈರಲ್ : ಮಗಳ ಜೊತೆ ಹೆಜ್ಜೆ...

 'ತಾಯಿಗೆ ತಕ್ಕ ಮಗ' ಚಿತ್ರದ ಬಳಿಕ ಅಜಯ್ ರಾವ್ ನಟನೆಯ ಯಾವ ಚಿತ್ರವೂ ಇನ್ನು ಥಿಯೇಟರ್‌ಗೆ ಬಂದಿಲ್ಲ. ಸಾಲು ಸಾಲು ಚಿತ್ರಗಳಲ್ಲಿ ಬ್ಯುಸಿಯಿದ್ದು, ಚಿತ್ರೀಕರಣ ಮಾಡುವುದರಲ್ಲಿ ತೊಡಗಿಕೊಂಡಿದ್ದಾರೆ.

‘ಪ್ಲಾಸ್ಮಾ’ ದಾನ ಮಾಡಿ 350 ರೋಗಿಗಳ ಜೀವ...

ನವದೆಹಲಿ: ಇವರು ಮಾಡಿರುವ ಕೆಲಸ ಹೊಗಳಿಕೆಗೂ ಮೀರಿದ್ದು, ಏಕೆಂದರೆ ದೆಹಲಿ ಪೊಲೀಸ್ ಸಿಬ್ಬಂದಿ ತಮ್ಮ ಪ್ಲಾಸ್ಮಾ ದಾನ ಮಾಡುವ ಮೂಲಕ 350 ಮಂದಿಯ ಜೀವ ಉಳಿಸಿದ್ದಾರೆ. 42...

ಕೊಲ್ಕತ್ತಾದಲ್ಲಿ ವೈದ್ಯರ ಮೇಲಿನ ಹಲ್ಲೆ ಖಂಡಿಸಿ ನಾಳೆ ರಬಕವಿ-ಬನಹಟ್ಟಿ ವೈದ್ಯರಿಂದ ಓಪಿಡಿ ಬಂದ್

ಬಾಗಲಕೋಟ : ಪಶ್ಚಿಮ ಬಂಗಾಳದ ಕೊಲ್ಕತ್ತದಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಸರಕಾರದ ಗೂಂಡಾ ವರ್ತನೆ ತೋರಿ ಎನ್.ಆರ್.ಎಸ್ ಸಂಸ್ಥೆಯ ಹಿರಿಯ ವೈದ್ಯರ ಮೇಲೆ ಹಲ್ಲೆ ನಡೆಸಿದೆ ಎಂದು ತೀವ್ರವಾಗಿ ಖಂಡಿಸಿರುವ ಬಾಗಲಕೋಟ ಜಿಲ್ಲೆಯ ರಬಕವಿ ಬನಹಟ್ಟಿ ವೈದ್ಯರು ನಾಳೆ 24 ಗಂಟೆ ಹೊರರೋಗಿಗಳ ಓಪಿಡಿ ಬಂದ್ ಕರೆ ನೀಡಿದ್ದಾರೆ.  

ರೋಗಿಗಳ ಪ್ರಾಣವನ್ನು ಉಳಿಸುವ ವೈದ್ಯರ ಮೇಲೆ ಹಲ್ಲೆ ಪಶ್ಚಿಮ ಬಂಗಾಳದ ಕೊಲ್ಕತ್ತದಲ್ಲಿ ಸರಕಾರ ಗೂಂಡಾ ವರ್ತನೆ ತೋರಿದೆ ಎಂದು ರಬಕವಿ ಬನಹಟ್ಟಿ ವೈದ್ಯರು ನಾಳೆ ಮುಷ್ಕರ ನಡೆಸಲು ನಿರ್ಧರಿಸಿದ್ದಾರೆ. ರಬಕವಿ ಬನಹಟ್ಟಿ ತಾಲೂಕಿನ ರಬಕವಿ ಡಾ.  ಚಿತ್ರರಗಿ ಆಸ್ಪತ್ರೆಯಲ್ಲಿ ಸುದ್ದಿಗೋಷ್ಠಿ ನಡೆಸಿ. ಕೊಲ್ಕತ್ತಾದ NRA ವೈದ್ಯಕೀಯ ಸಂಸ್ಥೆಯ ಹಿರಿಯ ವೈದ್ಯರಾದ ಡಾ.ಪರಿಭಾ  ಮುಖರ್ಜಿಯವರ ಮೇಲೆ ರೋಗಿಯ ಸಂಬಂಧಿಕರು ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಈ ಹಲ್ಲೆಯನ್ನು ಖಂಡಿಸಿ ರಬಕವಿ-ಬನಹಟ್ಟಿ ತೇರದಾಳ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ವತಿಯಿಂದ ನಾಳೆ ದಿ.17.06.2019 ರಿಂದ 18.06.2019 6:00 ಗಂಟೆಯವರೆಗೂ ಹೊರರೋಗಿ ಓಪಿಡಿ ಬಂದ್ ಮಾಡುವ ಮೂಲಕ ಪ್ರತಿಭಟಿಸುತ್ತಿದ್ದಾರೆ.

ಪಶ್ಚಿಮ ಬಂಗಾಳದ ಕೊಲ್ಕತ್ತಾದ ಎನ್.ಆರ್.ಎಸ್ ವೈದ್ಯಕೀಯ ಸಂಸ್ಥೆಯು ಸುಮಾರು 184 ವರ್ಷಗಳ ಇತಿಹಾಸವಿದೆ. ಅಲ್ಲಿನ ವೈದ್ಯರ ಮೇಲೆ ಹಲ್ಲೆ ಮಾಡಿರುವ ಕಿಡಿಗೇಡಿಗಳನ್ನು ಕೂಡಲೇ ಬಂಧಿಸಿ ಕಠಿಣ ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿದರು.

ಪಶ್ಚಿಮ ಬಂಗಾಳದಲ್ಲಿ ಕಾನೂನು-ಸುವ್ಯವಸ್ಥೆ ಹದಗೆಟ್ಟು ಹೋಗಿದೆ. ಅಲ್ಲಿನ ಮುಖ್ಯಮಂತ್ರಿ ಶ್ರೀಮತಿ ಮಮತಾ ಬ್ಯಾನರ್ಜಿ ಅವರ ವರ್ತನೆ ಸರಿಯಾಗಿ ಕಾಣುತ್ತಿಲ್ಲ,ಪಶ್ಚಿಮ ಬಂಗಾಳದಲ್ಲಿ ವಾಸವಾಗಿರುವ ಸಾರ್ವಜನಿಕರ ಮೇಲೆ ದೀದಿ ಸಿಡಿಮಿಡಿಗೊಳ್ಳುತ್ತಿದ್ದಾರೆ.

ಪಶ್ಚಿಮಬಂಗಾಳದಲ್ಲಿ ಕಾನೂನು ಸತ್ತುಹೋಗಿದೆ. ರೋಗಿಯ ಪ್ರಾಣವನ್ನು ಉಳಿಸುವ ವೈದ್ಯರ ಮೇಲೆ ಪದೇ ಪದೇ ಹಲ್ಲೆ ನಡೆದರೆ ರೋಗಿಗಳ ಪ್ರಾಣ ಉಳಿಸುವುದು ಹೇಗೆ?ಅನ್ನೋದು ಒಂದು ಕಡೆ ಚಿಂತೆಯಾದರೆ ವೈದ್ಯರ ಬದುಕು ಚಿಂತಾಜನಕವಾಗುತ್ತದೆ,ಇದರ ಬಗ್ಗೆ ಸರ್ಕಾರ ಚಿಂತಿಸಬೇಕಾಗಿದೆ ಎಂದರು.

ಪಶ್ಚಿಮ ಬಂಗಾಳದ ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ವೈದ್ಯರ ಮೇಲೆ ಹಲ್ಲೆ ಮಾಡಿರುವ ಕಿಡಿಗೇಡಿಗಳ ವಿರುದ್ಧ ಕ್ರಮ ಜರುಗಿಸದಿದ್ದರೆ ಮುಂದಿನ ದಿನಮಾನಗಳಲ್ಲಿ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದರು.

ಇದೇ ಸಂದರ್ಭದಲ್ಲಿ ರಬಕವಿ-ಬನಹಟ್ಟಿ ತೇರದಾಳ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಅಧ್ಯಕ್ಷರಾದ ಡಾ.ಪದ್ಮ ಜಿತ್ ನಾಡಗೌಡ ಪಾಟೀಲ,ಉಪಾಧ್ಯಕ್ಷರಾದ ಡಾ.ಸಂಗಮೇಶ ಹತ್ತಪಕ್ಕಿ,ಡಾ.ರವಿ ಜಮಖಂಡಿ,ಡಾ.ಪ್ರಭು ಪಾಟೀಲ,ಡಾ.ಬಾಗಲಕೋಟೆ, ಡಾ.ವಿನೋದ ಮೈತ್ರಿ,ಡಾ.ಬಡೇಮಿ,ಡಾ.ಬಿ.ಎಸ್.ಪಾಟೀಲ,ಡಾ.ಮಹಾವೀರ ದಾನಿಗೊಂಡ,ಡಾ.ಜಿ.ಎಚ್.ಚಿತ್ತರಗಿ,ಡಾ.ಕೆ.ಡಿ. ಭದ್ರಣ್ಣವರ,ಡಾ.ಅಭಿನಂದನ ಮುಂತಾದವರು ಪಾಲ್ಗೊಂಡಿದ್ದರು.

TRENDING