Thursday, December 3, 2020
Home ಆರೋಗ್ಯ ಮಹದೇವಪುರ ಕೆರೆ ನೀರಿನ ಸಂಸ್ಕರಣಾ ಘಟಕ ಉದ್ಘಾಟನೆ

ಇದೀಗ ಬಂದ ಸುದ್ದಿ

ಅಧಿಕಾರಿಗಳ ನೇಮಕ,ವರ್ಗಾವಣೆಯಲ್ಲಿ ಸಾರ್ವಜನಿಕ ಹಿತಾಸಕ್ತಿ ಇರಬೇಕು: ಹೈಕೋರ್ಟ್‌

 ಬೆಂಗಳೂರು: ಅಧಿಕಾರಿಗಳ ನೇಮಕ ಮತ್ತು ವರ್ಗಾವಣೆಯಲ್ಲಿ ಸಾರ್ವಜನಿಕ ಹಿತಾಸಕ್ತಿ ಅಡಗಿರಬೇಕು ಎಂಬುದನ್ನು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೆನಪಿಸಿದೆ. ಕೆಪಿಟಿಸಿಎಲ್‌ ನಿರ್ದೇಶಕರನ್ನಾಗಿ ನೇಮಕ ಮಾಡಿದ ಎರಡು ವರ್ಷದೊಳಗೇ ವರ್ಗಾವಣೆ ಮಾಡಿದ ಆದೇಶ...

ಪಾಕಿಸ್ತಾನ್ ಕ್ರಿಕೆಟ್ ತಂಡದ ಮತ್ತೊಬ್ಬ ಸದಸ್ಯನಿಗೆ ಕೊರೊನಾ

ವೆಲ್ಲಿಂಗ್ಟನ್‌ : 'ಪ್ರವಾಸಿ ಪಾಕಿಸ್ತಾನ ಕ್ರಿಕೆಟ್ ತಂಡದ ಮತ್ತೊಬ್ಬ ಸದಸ್ಯನಲ್ಲಿ ಕೋವಿಡ್‌-19 ದೃಢಪಟ್ಟಿದೆ. ಇದರಿಂದಾಗಿ ಒಟ್ಟು ಪ್ರಕರಣಗಳ ಸಂಖ್ಯೆ ಎಂಟಕ್ಕೇರಿದೆ' ಎಂದು ನ್ಯೂಜಿಲೆಂಡ್ ಸರ್ಕಾರ ಬುಧವಾರ ಹೇಳಿದೆ.

`RRBʼಯ 1.4 ಲಕ್ಷ ಹುದ್ದೆಗಳ ನೇಮಕಾತಿ ಪರೀಕ್ಷೆಗೆ...

 ನವದೆಹಲಿ :‌ ರೈಲ್ವೆ ನೇಮಕಾತಿ ಮಂಡಳಿಯ ಬಹುನಿರೀಕ್ಷಿತ ತಾಂತ್ರಿಕೇತರ ಜನಪ್ರಿಯ ವರ್ಗಗಳ (ಎನ್ ಟಿಪಿಸಿ) ಪರೀಕ್ಷೆ, ಗ್ರೂಪ್ ಡಿ, ಮತ್ತು ಪ್ರತ್ಯೇಕ ವಿಭಾಗ ಪರೀಕ್ಷೆಗಳು ಡಿಸೆಂಬರ್ 15ರಿಂದ ಆರಂಭವಾಗಲಿವೆ. ಇನ್ನು...

ಕೇಂದ್ರ ಸರ್ಕಾರದಿಂದ ರೈತ ಸಮುದಾಯಕ್ಕೆ ಮಹತ್ವದ ಮಾಹಿತಿ

ಪಿಎಂ ಕಿಸಾನ್ ಸಮನ್ ನಿಧಿ ಯೋಜನೆಯ ಹೊಸ ಪಟ್ಟಿಯನ್ನ ಕೇಂದ್ರ ಸರ್ಕಾರದ ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯ ಬಿಡುಗಡೆ ಮಾಡಿದೆ. ಹೊಸ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ...

ಅತಿ ಹೆಚ್ಚು ವಿದೇಶಿ ನೇರ ಬಂಡವಾಳ ಪಡೆದ...

 ಬೆಂಗಳೂರು: ಪ್ರಸಕ್ತ ಸಾಲಿನ ಏಪ್ರಿಲ್- ಜೂನ್ ಅವಧಿಯಲ್ಲಿ ಕರ್ನಾಟಕ ದೇಶದ ಇತರ ರಾಜ್ಯಗಳಿಗಿಂತ ಅತಿ ಹೆಚ್ಚು ಅಂದರೆ 10 ಸಾವಿರ ಕೋಟಿ ರೂಪಾಯಿ ವಿದೇಶಿ ನೇರ ಹೂಡಿಕೆ ಗಳಿಸಿದೆ ಎಂದು ಮುಖ್ಯಮಂತ್ರಿ...

ಮಹದೇವಪುರ ಕೆರೆ ನೀರಿನ ಸಂಸ್ಕರಣಾ ಘಟಕ ಉದ್ಘಾಟನೆ

ಬೆಂಗಳೂರು : ಯುನೈಟೆಡ್ ವೇ, ಬಿಬಿಎಂಪಿ ಮತ್ತು ಸಿಟಿಜನ್ ಗ್ರೂಪ್‌ಗಳ ಪಾಲುದಾರಿಕೆಯಲ್ಲಿ ಮಹಾದೇವಪುರ ಕೆರೆಯಲ್ಲಿ ದಿನಕ್ಕೆ ಒಂದು ದಶಲಕ್ಷ ಲೀಟರ್‌ ಗಳಷ್ಟು ನೀರಿನ ಸಂಸ್ಕರಣಾ ಘಟಕ ಲೋಕಾರ್ಪಣೆಗೊಂಡಿತು.

ಅಮೆಜಾನ್,ಎಂಫಸಿಸ್,ಡೆಲ್,ಎಚ್ ಟಿಸಿ,ಗ್ಲೋಬಲ್ ವತಿಯಿಂದ ಬೆಂಬಲಿತವಾದ ಬಹುಪಾಲು ಖಾಸಗಿ ಕಂಪನಿಗಳು ಕೆರೆಯ ಪುನರುಜ್ಜೀವನ ಗುರಿಯನ್ನು ಹೊಂದಿವೆ. ಈ ಕೆರೆಯು ಬಾಗಮನೆ ವರ್ಲ್ಡ್ ಟೆಕ್ನಾಲಜಿ ಸೆಂಟರ್‌ನ ಹತ್ತಿರವಿದೆ. ಈ ಕೆರೆಯ ಪಕ್ಕದಲ್ಲಿ ಹರಿಯುವ ಒಂದು ದಶಲಕ್ಷ ಲೀಟರ್ ತ್ಯಾಜ್ಯ ಜಲವನ್ನು ಸಂಸ್ಕರಿಸಿ ಪ್ರತಿದಿನ ಕೆರೆಗೆ ಬಿಡಲಾಗುತ್ತದೆ. ಶುದ್ದೀಕರಣ ಘಟಕ ಪರಿಸರಸ್ನೇಹಿ ನೈಸರ್ಗಿಕವಾಗಿದೆ. ರಾಸಾಯನಿಕ ಮುಕ್ತವಾದ ಪ್ರಕ್ರಿಯೆಯನ್ನು ಒಳಗೊಂಡಿದೆ. ಅತಿಕಡಿಮೆ ವಿದ್ಯುತ್ ನಲ್ಲಿ ತ್ಯಾಜ್ಯ ನೀರನ್ನು ಸಂಸ್ಕರಿಸುವ‌ ಪ್ರಕ್ರಿಯೆಯನ್ನು ಇದು ಒಳಗೊಂಡಿದೆ. ಅನೇರೋಬಿಕ್ ಪ್ರಕ್ರಿಯೆಯಲ್ಲಿ ನಡೆಯುವ ಇದನ್ನು ಡಿವ್ಯಾಟ್ಸ್ ಎಂದು ಕರೆಯಲಾಗುತ್ತದೆ. ಸೂಕ್ಷ್ಮಜೀವಿಗಳ ಕಾರ್ಯಕ್ಕೆ ಸರಿಯಾದ ಸ್ಥಿತಿಗಳನ್ನು ಪೂರೈಸಿ ನೈಸರ್ಗಿಕ ಗುರಿಯನ್ನು ಹೊಂದಿದೆ.

ಬೆಂಗಳೂರು ಮೂಲದ ಕರ್ನ್ಸೋಟಿಯಮ್ ಫಾರ್ ಡಿವ್ಯಾಟ್ಸ್ ಡಿಸ್ಸೆಮೀನೇಷನ್ ಸೊಸೈಟಿ ಈ ಶುದ್ಧೀಕರಣ ಘಟಕದ ವಿನ್ಯಾಸ ಮಾಡಿದೆ. ವಿನ್ಯಾಸ ಮತ್ತು ಅನುಷ್ಠಾನಕ್ಕಾಗಿ ತಾಂತ್ರಿಕ ಪರಿಣತಿಯನ್ನು ನೀಡಿದೆ. ಇದರ ನಿರ್ಮಾಣ ನೇತೃತ್ವವನ್ನು ರೆವ್ಲಾನ್ ಬ್ಯುಲ್ಡ್ಟೇಕ್ ವಹಿಸಿದೆ.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಬೈರತಿ ಬಸವರಾಜು ಮಾತನಾಡಿ ಬೆಂಗಳೂರಿನಲ್ಲಿ ಕಾರ್ಪೊರೇಟ್ ಸಂಸ್ಥೆಗಳ ಸಂಸ್ಥೆಗಳ ಪಾತ್ರ ದೊಡ್ಡದಿದೆ. ಪರಿಸರಕ್ಕೆ ಸಂಬಂಧಿಸಿದ ಕೆರೆಗಳನ್ನು ಸ್ವಚ್ಛಗೊಳಿಸುವುದು,ಕೆರೆಗಳನ್ನು ಉತ್ತಮ ರೀತಿಯಲ್ಲಿ ಅಭಿವೃದ್ಧಿಗೊಳಿಸಿ ನಿರ್ವಹಣೆ ಮಾಡುತ್ತಿರುವುದು ಶ್ಲಾಘನೀಯ ಕೆಲಸ. ಮಹದೇವಪುರ ಕೆರೆ ಕಲುಷಿತಗೊಂಡಿತ್ತು,ಇದನ್ನು ಮನಗಂಡು ಕಾರ್ಪೊರೇಟ್ ಕಂಪನಿಗಳು ಅಭಿವೃದ್ಧಿ ಮಾಡಿವೆ. ಮುಂದಿನ ದಿನಗಳಲ್ಲಿ ಪಾದಚಾರಿ ಮಾರ್ಗ,ಕುಳಿತುಕೊಳ್ಳುವ ಆಸನ ವ್ಯವಸ್ಥೆ,ಮಕ್ಕಳಿಗೆ ಆಟಿಕೆ ಸ್ಥಳ,ಓಪನ್ ಜಿಮ್ ವ್ಯವಸ್ಥೆ,ವಿದ್ಯುತ್ ಸಂಪರ್ಕ ಕಲ್ಪಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಲಾಗುತ್ತದೆ ಎಂದರು.

ಅಮೆಜಾನ್ ಇಂಡಿಯಾದ ಮಾರುಕಟ್ಟೆ ವಿಭಾಗದ ನಿರ್ದೇಶಕ ಕಿಶೋರ್ ತೋಟಾ ಮಾತನಾಡಿ ಸಾರ್ವಜನಿಕರಿಗೆ ಅನುಕೂಲವಾಗುವ ದೃಷ್ಟಿಯಿಂದ ಶುದ್ಧೀಕರಣ ಘಟಕ ನಿರ್ಮಾಣ ಮಾಡಲಾಗಿದೆ. ಕಾರ್ಪೊರೇಟ್ ಸಂಸ್ಥೆಗಳ ಸಹಯೋಗ ಮತ್ತು ಸ್ಥಳೀಯ ಸಂಸ್ಥೆಗಳ ಸಹಕಾರದೊಂದಿಗೆ ಕೆರೆ ಅಭಿವೃದ್ಧಿ ಮಾಡಿದ್ದೇವೆ. ಭವಿಷ್ಯದ ಪೀಳಿಗೆಗೆ ನಿಸರ್ಗವನ್ನು ಸಂರಕ್ಷಿಸುವುದು ಪ್ರತಿಯೊಬ್ಬರ ಪಾತ್ರ ಮುಖ್ಯ ಎಂದರು.

ಕಾರ್ಯಕ್ರಮದಲ್ಲಿ ಬಿಬಿಎಂಪಿ ಸದಸ್ಯರಾದ ಎಸ್.ಜಿ.ನಾಗರಾಜ್,ಶ್ರೀಕಾಂತ್ ಗೌಡ,ಎಂಫಸಿಸ್ ನ ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿ ವಿಭಾಗದ ಮುಖ್ಯಸ್ಥ ಮೀನು ಭಂಭಾನಿ,ಡೆಲ್ ಇಎಂಸಿ ಇಂಡಿಯಾದ ಸಿಇಒ ಸರವಣನ್,ಯುನೈಟೆಡ್ ವೇ ಬೆಂಗಳೂರು ಮಂಡಳಿ ಅಧ್ಯಕ್ಷ ಪ್ರಶಾಂತ್ ಪ್ರಕಾಶ್ ಹಾಗೂ ಕಾರ್ಯಕ್ರಮದ ಆಯೋಜಕ ರಾಜೇಶ್ ಕೃಷ್ಣನ್ ಭಾಗವಹಿಸಿದ್ದರು.

TRENDING