Wednesday, December 2, 2020
Home ಜಿಲ್ಲೆ ಕುಲಸಚಿವ ಪ್ರೊ.ಪ್ರಮೋದ್ ಗಾಯಿ ಆಡಳಿತಾವಧಿಯಲ್ಲಿ ಕ.ವಿ.ವಿ.ಯ ಅಭಿವೃದ್ಧಿ ಶೂನ್ಯ

ಇದೀಗ ಬಂದ ಸುದ್ದಿ

ಎರಡು ದಿನಗಳ ಬಳಿಕ ಮತ್ತೆ ಪೆಟ್ರೋಲ್‌, ಡೀಸೆಲ್‌...

ಬೆಂಗಳೂರು: ಪೆಟ್ರೋಲ್‌, ಡೀಸೆಲ್‌ ದರ ಏರಿಕೆಗೆ ಎರಡು ದಿನಗಳವರೆಗೆ ಬಿಡುವು ನೀಡಿದ್ದ ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ಬುಧವಾರ ಮತ್ತೆ ಏರಿಕೆ ಮಾಡಿವೆ. ಬೆಂಗಳೂರಿನಲ್ಲಿ ಪ್ರತಿ...

ಮೆಕ್ಕೆಜೋಳ ಯಂತ್ರಕ್ಕೆ ವೇಲ್ ಸಿಲುಕಿ ಬಾಲಕಿ ದಾರುಣ...

ತುಮಕೂರು: ಮಧುಗಿರಿ ತಾಲೂಕಿನ ಕೊಡಿಗೇನಹಳ್ಳಿ ಸಮೀಪ ಮೆಕ್ಕೆಜೋಳ ತೆನೆ ಬಿಡಿಸುವ ಯಂತ್ರಕ್ಕೆ ವೇಲ್ ಸಿಲುಕಿದ ಪರಿಣಾಮ ಬಾಲಕಿ ಮೃತಪಟ್ಟ ಘಟನೆ ನಡೆದಿದೆ. 14 ವರ್ಷದ ರಮಾಬಾಯಿ ಮೃತಪಟ್ಟ...

ʼRRBʼಯ 1.4 ಲಕ್ಷ ಹುದ್ದೆಗಳಿಗೆ ಹರಿದು ಬಂದಿವೆ...

ರೈಲ್ವೆ ನೇಮಕಾತಿ ಮಂಡಳಿಯ ಬಹುನಿರೀಕ್ಷಿತ ತಾಂತ್ರಿಕೇತರ ಜನಪ್ರಿಯ ವರ್ಗಗಳ (ಎನ್ ಟಿಪಿಸಿ) ಪರೀಕ್ಷೆ, ಗ್ರೂಪ್ ಡಿ, ಮತ್ತು ಪ್ರತ್ಯೇಕ ವಿಭಾಗ ಪರೀಕ್ಷೆಗಳು ಡಿಸೆಂಬರ್ 15ರಿಂದ ಆರಂಭವಾಗಲಿವೆ. ಆದ್ರೆ, ಈ...

ಮಂಗಳೂರು-ಬೆಂಗಳೂರು ವಯಾ ಶ್ರವಣಬೆಳಗೊಳ ರೈಲಿಗೆ ಮತ್ತೆ ಚಾಲನೆ

ಮಂಗಳೂರು: ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಿಂದ ಕುಣಿಗಲ್, ಶ್ರವಣಬೆಳಗೊಳ ಮಾರ್ಗವಾಗಿ ಬೆಂಗಳೂರಿಗೆ ರೈಲು ಸಂಚಾರ ಮತ್ತೆ ಆರಂಭವಾಗಿದೆ. ವಾರದಲ್ಲಿ ನಾಲ್ಕು ದಿನ ಈ ರೈಲು ಸಂಚರಿಸಲಿದ್ದು, ಇದರ ಪ್ರಯೋಜನವನ್ನು ನಾಗರಿಕರು ಪಡೆಯಬೇಕೆಂದು...

ಎಂಜಿ ರೋಡ್, ಬ್ರಿಗೇಡ್ ರೋಡ್ನಲ್ಲಿ ಈ ಬಾರಿ...

 ಬೆಂಗಳೂರು: ಕೋವಿಡ್ ಎರಡನೇ ಅಲೆ ಭೀತಿ ಇರುವುದರಿಂದ ರಾಜಧಾನಿಯ ರಸ್ತೆ, ಬಾರ್‌ ಕ್ಲಬ್‌ಗಳಲ್ಲಿ ಹೊಸವರ್ಷ ಸಂಭ್ರಮಾಚರಣೆ ನಿಷೇಧಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಬಿಬಿಎಂಪಿ ಮನವಿ ಮಾಡಿದೆ.

ಕುಲಸಚಿವ ಪ್ರೊ.ಪ್ರಮೋದ್ ಗಾಯಿ ಆಡಳಿತಾವಧಿಯಲ್ಲಿ ಕ.ವಿ.ವಿ.ಯ ಅಭಿವೃದ್ಧಿ ಶೂನ್ಯ

https://youtu.be/kLUh_xAHLlw

ಧಾರವಾಡ : ಕರ್ನಾಟಕ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ.ಪ್ರಮೋದ್ ಗಾಯಿ ಅವರ ಆಡಳಿತಾವಧಿಯಲ್ಲಿ ಅಭಿವೃದ್ಧಿ ಶೂನ್ಯವಾಗಿ ಸಾಕಷ್ಟು ಭ್ರಷ್ಟಾಚಾರ ಹಾಗೂ ಅವ್ಯವಹಾರಗಳ ಸುಳಿಯಲ್ಲಿ ಸಿಲುಕಿದೆ ಎಂದು ಜಿಲ್ಲೆಯ ವೀರಶೈವ ಮಹಾಸಬಾದ ಜಿಲ್ಲಾಧ್ಯಕ್ಷ ಗುರುರಾಜ ಹುಣಸರದ ಆರೋಪಿಸಿದ್ದಾರೆ.

ನಗರದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು “ಒಂದು ಕಾಲದಲ್ಲಿ ಡಿ.ಸಿ.ಪಾವಟೆ ಹಾಗೂ ಡಾ.ನಂಜುಂಡಪ್ಪನವರಂತಹ ಮುತ್ಸದಿ ಆಡಳಿತಗಾರನ್ನು ಕಂಡ ಕರ್ನಾಟಕ ವಿಶ್ವವಿದ್ಯಾಲಯ ಈಗ ಕುಲಪತಿ ಹುದ್ದೆ ಎಂದರೆ ದುಡ್ಡು ಹೂಡಿ ದುಡ್ಡು ಮಾಡಿಕೊಳ್ಳುವ ತಾತ್ಕಾಲಿಕ ಲಾಭದ ಹುದ್ದೆ ಎಂಬಂತಾಗಿದೆ.ಈ ರೀತಿ ದುಡ್ಡು ಮಾಡುವಾಗ ಅವರ ನಿಯಮಬಾಹಿರ ಆಡಳಿತಕ್ಕೆ ಆಕ್ಷೇಪಣೆ ಮಾಡುವ ಪ್ರಶ್ನಿಸುವ ಸಹೋದ್ಯೋಗಿಗಳು,ನೌಕರರನ್ನು ಸ್ವಜನ ಪಕ್ಷಪಾತ ಮತ್ತು ಜಾತಿಲಾಬಿ ನಡೆಸಿ ಇಲ್ಲಸಲ್ಲದ ಸಮಸ್ಯೆ ಸೃಷ್ಟಿಸಿ ವಿಶ್ವವಿದ್ಯಾಲಯಕ್ಕೆ ಕಳಂಕ ಅಂಟಿಸಿ ಅವರ ಭವಿಷ್ಯವನ್ನು ಕರಾಳಗೊಳಿಸುವುದು ಕುಲಪತಿ ಡಾ. ಗಾಯಿಯವರಿಗೆ ನೀರು ಕುಡಿದಷ್ಟು ಸುಲಭವಾಗಿ ಬಿಟ್ಟಿದೆ. ಸದ್ಯ ಅವರ ಹಗರಣದ ಬಗ್ಗೆ ಜನಸಾಮಾನ್ಯರು ಅಷ್ಟೇ ಅಲ್ಲದೇ ಕ.ವಿ.ವಿಯ ಪ್ರತಿಯೊಬ್ಬರೂ ಮಾತನಾಡುತ್ತಿದ್ದಾರೆ ಎಂದರು.

ನಂತರ ಮಾತನಾಡಿದವರುವ ದಕ್ಷ ಮತ್ತು ಪ್ರಾಮಾಣಿಕ ಅಧಿಕಾರಿ ಡಾ.ಕೆ.ಎಂ.ಹೊಸಮನಿಯವರು ಕ.ವಿ.ವಿ.ಗೆ ಕುಲಸಚಿವರಾಗಿ ಬಂದ ಮೇಲೆ ವಿಶ್ವವಿದ್ಯಾಲಯಕ್ಕೆ ಸೇರಿದ ಒಟ್ಟು 880 ಎಕರೆಯಲ್ಲಿ ಸುಮಾರು 80 ಎಕರೆಯಷ್ಟು ಜಮೀನು ಒತ್ತುವರಿಯಾಗಿದ್ದನ್ನು ಗಮನಿಸಿ ಅದರ ಸರ್ವೆ ಮಾಡಿಸಿ ಕ.ವಿ.ವಿ.ಯ ಆಸ್ತಿಯನ್ನು ರಕ್ಷಿಸಲು ಮುಂದಾದ ಹೊಸಮನಿಯವರಿಗೆ ಡಾ.ಗಾಯಿಯವರು ಸಹಕರಿಸುವ ಬದಲು,ಭೂ ಒತ್ತುವರಿ ಮಾಡಿಕೊಂಡ ಭೂಗಳ್ಳರು ಹಾಗೂ ಕಟ್ಟಡ ವಿಭಾಗದ ಸಿಬ್ಬಂದಿಯೊಂದಿಗೆ ಸೇರಿ ಸಾಕಷ್ಟು ಹಣ ಪಡೆದು,ಕುಲಸಚಿವ ಡಾ‌.ಹೊಸಮನಿಯವರ ಸರ್ವೆ ಪ್ರಯತ್ನವನ್ನು ವಿಫಲಗೊಳಿಸಿ ಕವಿವಿಗೆ ಅನ್ಯಾಯ ಮಾಡಿದ್ದೇ ಅಲ್ಲದೇ ಡಾ.ಹೊಸಮನಿಯವರ ಪಿ.ಎಚ್.ಡಿ. ಸಂಶೋಧನಾ ವಿದ್ಯಾರ್ಥಿಗಳನ್ನು ಬಳಸಿಕೊಂಡು ಇಲ್ಲಸಲ್ಲದ ಆರೋಪಗಳನ್ನು ಹೊರಿಸಿ ಅವರನ್ನು ಅಮಾನತ್ತಿನಲ್ಲಿಟ್ಟು ವಿಚಾರಣಾ ಸಮಿತಿ ರಚಿಸಿ ವಿಚಾರಣೆ ನೆಪದಲ್ಲಿ ಹಿಂಸೆ ನೀಡುತ್ತಾ ತಮ್ಮ ದಾರಿ ಸುಗಮಗೊಳಿಸಿಕೊಳ್ಳುತ್ತಿರುವುದು ಆಡಳಿತ ದುರುಪಯೋಗವಲ್ಲದೇ ಇನ್ನೇನು? ಎಂದು ಪ್ರಶ್ನಿಸಿದರು.

ವಿಶ್ವವಿದ್ಯಾಲಯದಲ್ಲಿರುವ DNA,KIDNAR ಸಂಶೋಧನಾ ಸಂಸ್ಥೆಗೆ ಕುಲಪತಿ ಡಾ.ಗಾಯಿಯವರೇ ನಿರ್ದೇಶಕರೂ ಆಗಿದ್ದು,DNA, KIDNAR ಸಂಶೋಧನಾ ಸಂಸ್ಥೆಯಲ್ಲಿ ವೈಜ್ಞಾನಿಕ ಸಂಶೋಧನಾ ಸಾಮಾಗ್ರಿ ಖರೀದಿ ಮುಂತಾದವುಗಳಲ್ಲಿ 9 ಕೋಟಿ ರೂ.ಗಳಿಗೂ ಹೆಚ್ಚು ಹಣದ ಅವ್ಯವಹಾರ ನಡೆದಿದೆ ಎಂದು ಆರೋಪಿಸಿದರು.

ಅಲ್ಲದೇ ಇವರ ಅವಧಿಯಲ್ಲಿ ನಡರದ ಕಟ್ಟಡ ಕಾಮಗಾರಿ ಪ್ರಕ್ರಿಯೆಯಲ್ಲಿ 40 ಕೋಟಿ ರೂ. ಅವ್ಯವಹಾರ ನಡೆದಿದೆ. ಕರ್ನಾಟಕ ಕಲಾ ಮಹಾವಿದ್ಯಾಲಯದ ಶತಮಾನೋತ್ಸವದ ನಿಮಿತ್ತ ಕರ್ನಾಟಕ ಸರ್ಕಾರದಿಂದ ಮಂಜೂರಾದ 5 ಕೋಟಿ ರೂ.ಗಳಲ್ಲಿ ಸಾಕಷ್ಟು ಅವ್ಯವಹಾರವಾಗಿದೆ. ಸುಮಾರು 1.10 ಕೋಟಿ ರೂ. ಹಣ ಕರ್ನಾಟಕ ಮಹಾವಿದ್ಯಾಲಯದ ಪಿ.ಡಿ. ಖಾತೆಯಿಂದ ನಿಯಮ ಬಾಹಿರವಾಗಿ ವರ್ಗಾಯಿಸಿ ದುರಪಯೋಗಪಡಿಸಿಕೊಳ್ಳಲಾಗಿದೆ,ಕ.ವಿ.ವಿ.ಯ ಹಲವರು ಪ್ರಮೋಶನ್ ಗೆ ಅನರ್ಹರಿದ್ದರೂ ನಿಯಮಬಾಹಿರವಾಗಿ ಅವರಿಗೆ ಪದೋನ್ನತಿ ನೀಡಿದ್ದು,ಇದಕ್ಕೆ ಆಡಿಟ್ ವಿಭಾಗ ಆಕ್ಷೇಪಣೆ ಮಾಡಿದೆ. ಹೀಗಿದ್ದರೂ ಕುಲಪತಿ ಡಾ.ಗಾಯಿಯವರು ಲಂಚ ಪಡೆದು ಪದೋನ್ನತಿ ನೀಡಿ ಸರ್ಕಾರಕ್ಕೆ ದ್ರೋಹ ಬರೆದಿದ್ದಾರೆ ಎಂದು ದೂರಿದರು.

ಕುಲ ಸಚಿವ ಡಾ.ಕೆ.ಎಂ.ಹೊಸಮನಿಯವರನ್ನು ಅವರ ಸಂಶೋಧನಾ ವಿದ್ಯಾರ್ಥಿಗಳನ್ನು ಬಳಸಿಕೊಳ್ಳುವ ಮೂಲಕ ಷಡ್ಯಂತ್ರ ರೂಪಿಸಿ ಇಲ್ಲಸಲ್ಲದ ಆಪಾದನೆ ಮಾಡಿಸಿ ಪತ್ರ ಬರೆಸಿ ವಿಚಾರಣೆಯ ನೆಪದಲ್ಲಿ ಅಮಾನತ್ತಿನಲ್ಲಿರಿಸಿ ತನಿಖೆಗೆ ಆದೇಶಿಸಿ ಮಾನಸಿಕ ಕಿರುಕುಳ ನೀಡಿ ಓರ್ವ ಲಿಂಗಾಯತ ಸಮುದಾಯಕ್ಕೆ ಸೇರಿದ ವ್ಯಕ್ತಿಯನ್ನು ಹಾಳು ಮಾಡಿ ಕವಿವಿಯನ್ನು ಕೊಳ್ಳೆ ಹೊಡೆಯುತ್ತಿರುವುದನ್ನು ತಡೆಯುವಂತೆ ಹಲವಾರು ಬಾರಿ ಸರ್ಕಾರಕ್ಕೆ ಮನವಿ ಸಲ್ಲಿಸಿದರು ಪ್ರಯೋಜನೆ ಆಗಿಲ್ಲ ಎಂದರು.

ಕವಿವಿಯ ವಿಜ್ಞಾನ ಮಹಾವಿದ್ಯಾಲಯದ ಸಹ ಪ್ರಾಧ್ಯಾಪಕರಾದ ಪ್ರೊ.ಬಿ.ಎಸ್.ಗಿರಿಯಪ್ಪನವರ ಅವರಿಗೆ ಉಪಪ್ರಾಚಾರ್ಯರ ಹುದ್ದೆಯ ಸರದಿ ಬಂದಾಗ ಯಾವುದೇ ಹಣಕಾಸಿನ ಸೌಲಭ್ಯದ ಷರತ್ತು ಇಲ್ಲದೆ ಪ್ರಾಮಾಣಿಕ ಸೇವೆಗೆ ಅವರು ಸಿದ್ಧರಿದ್ದಾಗ್ಯೂ ಕೂಡ ‘ ಅಡಿಟ್ ಅಭ್ಯಕ್ಷನ್ಸ್ ಹಾಕಿಸಿ ಅವರಿಗೆ ಆ ಹುದ್ದೆಯನ್ನು ಕೊಡದೇ , ಕುಲಪತಿಯಾಗಿ ಆ ಹುದ್ದೆಯನ್ನೇ ರದ್ದು ಮಾಡಿಸಿ ಮಹಾವಿದ್ಯಾಲಯದ ಆಡಳಿತ ಯಂತ್ರ ಕುಸಿಯುವಂತೆ ಮಾಡಿ ಲಿಂಗಾಯತರ ಮೇಲೆ ದಬ್ಬಾಳಿಕೆ ಮಾಡುತ್ತಿದಾರೆ ಎಂದರು.

ಪ್ರೋ.ಪ್ರಮೋದ್ ಗಾಯಿ ಓರ್ವ ಬ್ರಾಹ್ಮಣ ಅಭ್ಯರ್ಥಿಯಾಗಿ ಲಿಂಗಾಯತ ಸಮುದಾಯದ ಪ್ರಾಧ್ಯಾಪಕರ ಮೇಲೆ ನಿರಂತರ ದಬ್ಬಾಳಿಕೆ ಶೋಷಣೆ ಅನ್ಯಾಯ ನಡೆಸಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ಇವರ ಆಡಳಿತದಲ್ಲಿ ಲಿಂಗಾಯತ ಪ್ರಾಧ್ಯಾಪಕರಿಗೆ ಉಸಿರುಗಟ್ಟಿಸುವ ವಾತಾವರಣ ನಿರ್ಮಾಣವಾಗಿದ್ದು,ಸ್ವಜನ ಪಕ್ಷಪಾತ,ಜಾತಿಲಾಬಿ ಭ್ರಷ್ಟಾಚಾರ,ದುರಾಡಳಿತ ತಾಂಡವವಾಗುತ್ತಿದೆ.ಈ ಬಗ್ಗೆ ರಾಜ್ಯ ಸರ್ಕಾರ ಕುಲಪತಿ ಡಾ.ಗಾಯಿಯವರ ಕ‌ವಿವಿಯಲ್ಲಿ ನಡೆಸಿದ ದುರಾಡಳಿತ ಭ್ರಷ್ಟಾಚಾರ ಹಾಗೂ ಸರ್ಕಾರದಿಂದ ಮಂಜೂರಾದ ಹಣದ ದುರ್ಬಳಕೆಯ ಕುರಿತು ತನಿಖೆ ಕೈಗೊಂಡು ಕಾನೂನು ರೀತ್ಯಾ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದರು. ಶಿವಾನಂದ ಕೌಳಿ, ಎಮ್.ಎಫ್.ಹೀರೆಮಠ, ಶಿವಕುಮಾರ ಹೆಬ್ಬಾಳ್ಳ ಸೇರಿದಂತೆ ಇತರರು ಇದ್ದರು.

TRENDING