Thursday, November 26, 2020
Home ಆರೋಗ್ಯ ಹುಬ್ಬಳ್ಳಿ : ಅಗರ್ವಾಲ್ ಆಸ್ಪತ್ರೆಯಿಂದ ಯಶಸ್ವಿ ಸಂಕೀರ್ಣ ಶಸ್ತ್ರಚಿಕಿತ್ಸೆ

ಇದೀಗ ಬಂದ ಸುದ್ದಿ

ಮಹಾಮಾರಿ ಕೊರೊನಾಗೆ ಸುಡಾನ್ ಮಾಜಿ ಪ್ರಧಾನಿ `ಸಾದಿಕ್...

ಜಗತ್ತನ್ನೇ ನರಳಿಸುತ್ತಿರುವ ಕೊರೊನಾ ಸೋಂಕಿನ ಎದುರು ಎಂತಹ ನಾಯಕನಾದರೂ ಮಂಡಿಯೂರಬೇಕು ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಸುಡಾನ್‌ನ ಮಾಜಿ ಪ್ರಧಾನಿ ಸಾದಿಕ್ ಅಲ್-ಮೆಹ್ದಿ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ. 84 ವರ್ಷದ ಮೆಹ್ದಿ...

ಸ್ಟೀಮರ್​ ಬೋಟ್​ನಿಂದ 8 ಟ್ರಕ್ ನದಿ ಪಾಲು

ಕೋಲ್ಕತ: ಸೋಮವಾರ ದೊಡ್ಡ ಸ್ಟೀಮರ್​ ಬೋಟ್​ನಿಂದ ಆಕಸ್ಮಿಕವಾಗಿ ನದಿ ಪಾಲಾಗಿದ್ದ ಕಾರ್ಮಿಕರು ಮತ್ತು 8 ಟ್ರಕ್​ಗಳಲ್ಲಿ ಈವರೆಗೆ ಎರಡು 3 ಟ್ರಕ್​ ಅನ್ನು ಹೊರತೆಗೆಯಲಾಗಿದ್ದು, ಕಾರ್ಮಿಕನೊಬ್ಬನ ಮೃತದೇಹ ಪತ್ತೆಯಾಗಿದೆ.

ಕೆನರಾ ಬ್ಯಾಂಕ್ ನೇಮಕಾತಿ: ಸ್ಪೆಷಲಿಸ್ಟ್ ಅಧಿಕಾರಿ ಹುದ್ದೆಗೆ...

 ಬೆಂಗಳೂರು : ಉದ್ಯೋಗಾಕಾಂಕ್ಷಿಗಳಿಗೆ ಕೆನೆರಾ ಬ್ಯಾಂಕ್ ಸಿಹಿಸುದ್ದಿ ನೀಡಿದ್ದು, 220 ಕೆನರಾ ಬ್ಯಾಂಕ್ ಸ್ಪೆಷಲಿಸ್ಟ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಹುದ್ದೆ ಹೆಸರು: ಕೆನರಾ ಬ್ಯಾಂಕ್ ಸ್ಪೆಷಲಿಸ್ಟ್...

ಫೋಟೋ ವೈರಲ್ : ಮಗಳ ಜೊತೆ ಹೆಜ್ಜೆ...

 'ತಾಯಿಗೆ ತಕ್ಕ ಮಗ' ಚಿತ್ರದ ಬಳಿಕ ಅಜಯ್ ರಾವ್ ನಟನೆಯ ಯಾವ ಚಿತ್ರವೂ ಇನ್ನು ಥಿಯೇಟರ್‌ಗೆ ಬಂದಿಲ್ಲ. ಸಾಲು ಸಾಲು ಚಿತ್ರಗಳಲ್ಲಿ ಬ್ಯುಸಿಯಿದ್ದು, ಚಿತ್ರೀಕರಣ ಮಾಡುವುದರಲ್ಲಿ ತೊಡಗಿಕೊಂಡಿದ್ದಾರೆ.

‘ಪ್ಲಾಸ್ಮಾ’ ದಾನ ಮಾಡಿ 350 ರೋಗಿಗಳ ಜೀವ...

ನವದೆಹಲಿ: ಇವರು ಮಾಡಿರುವ ಕೆಲಸ ಹೊಗಳಿಕೆಗೂ ಮೀರಿದ್ದು, ಏಕೆಂದರೆ ದೆಹಲಿ ಪೊಲೀಸ್ ಸಿಬ್ಬಂದಿ ತಮ್ಮ ಪ್ಲಾಸ್ಮಾ ದಾನ ಮಾಡುವ ಮೂಲಕ 350 ಮಂದಿಯ ಜೀವ ಉಳಿಸಿದ್ದಾರೆ. 42...

ಹುಬ್ಬಳ್ಳಿ : ಅಗರ್ವಾಲ್ ಆಸ್ಪತ್ರೆಯಿಂದ ಯಶಸ್ವಿ ಸಂಕೀರ್ಣ ಶಸ್ತ್ರಚಿಕಿತ್ಸೆ

ಹುಬ್ಬಳ್ಳಿ : ನಗರದ ಡಾ.ಅಗರ್‍ವಾಲ್ ಕಣ್ಣಿನ ಆಸ್ಪತ್ರೆಯು ರೋಗಿಯೊಬ್ಬರ ಬಲಗಣ್ಣಿಗೆ ಆಪ್ಟಿಕಲ್ ಕೆರಟೋಪ್ಲಾಸ್ಟಿ ಮತ್ತು ಎಡಗಣ್ಣಿಗೆ ಡೀಪ್ ಆಂಟೀರಿಯರ್ ಲ್ಯಾಮೆಲ್ಲರ್ ಕೆರಟೋಪ್ಲಾಸ್ಟಿ (ಡಿಎಎಲ್‍ಕೆ) ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಿದೆ.

ಈ ರೋಗಿಯ ದೃಷ್ಟಿಯು ಮಂದವಾಗುತ್ತಾ ಬಂದು ಗಂಭೀರ ಸ್ವರೂಪಕ್ಕೆ ತೆರಳಿ ಕಾರ್ನಿಯಾವನ್ನು ಹಾನಿಗೊಳಿಸುವ ಹಂತಕ್ಕೆ ಹೋಗಿತ್ತು. ಹುಬ್ಬಳ್ಳಿಯ ಡಾ.ಅಗರ್‍ವಾಲ್ ಐ ಹಾಸ್ಪಿಟಲ್‍ನ ಕಾರ್ನಿಯಾ ಆ್ಯಂಡ್ ರಿಫ್ರಾಕ್ಟಿವ್ ಸರ್ಜರಿಯ ಹಿರಿಯ ತಜ್ಞ ಡಾ.ರಘು ನಾಗರಾಜು ಈ ಸಂಕೀರ್ಣ ಶಸ್ತ್ರಚಿಕಿತ್ಸೆಯನ್ನು ನಡೆಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿಂದು ಡಾ.ರಘು ನಾಗರಾಜು ಮಾತನಾಡಿ 34 ವರ್ಷದ ಯುವಕ ಎಸ್.ವಿನಯಬಾಬು ನಾಯ್ಡು ಅವರು ಮಂದ ದೃಷ್ಟಿ ಮತ್ತು ಬಲಗಣ್ಣಿನಲ್ಲಿ ಕಾರ್ನಿಯಲ್ ಪರ್ಫೊರೇಶನ್ ಸಮಸ್ಯೆಯಿಂದ ಬಳಲುತ್ತಿದ್ದರು. ಹುಬ್ಬಳ್ಳಿಯ ಡಾ.ಅಗರ್‍ವಾಲ್ ಐ ಹಾಸ್ಪಿಟಲ್‍ನಲ್ಲಿ ಪರೀಕ್ಷೆ ನಡೆಸಿದಾಗ ಕೇವಲ ಬಲಗಣ್ಣಿನಲ್ಲಿ ಬೆರಳುಗಳನ್ನು ಎಣಿಸುವಷ್ಟು ದೃಷ್ಟಿಯು ಹಾಗೂ ಎಡಗಣ್ಣಿನಲ್ಲಿ 1/60 ರಷ್ಟು ದೃಷ್ಟಿಯನ್ನು ದಾಖಲಾಗಿತ್ತು. ಬಲಗಣ್ಣಿನಲ್ಲಿ ಕಾರ್ನಿಯಲ್ ಪರ್ಫೋರೇಶನ್ ಮತ್ತು ಎಡಗಣ್ಣಿನಲ್ಲಿ ಗಂಭೀರ ಸ್ವರೂಪದ ಕೆರಟೊಕೊನಸ್ ಎಂಬ ತೊಂದರೆಯಿಂದ ಬಳಲುತ್ತಿದ್ದರು. ಈ ಹಿನ್ನೆಲೆಯಲ್ಲಿ ಅವರಿಗೆ ಬಲಗಣ್ಣಿಗೆ ಆಪ್ಟಿಕಲ್ ಕೆರಟೊಪ್ಲಾಸ್ಟಿ ಶಸ್ತ್ರಚಿಕಿತ್ಸೆ ಮತ್ತು ಎಡಗಣ್ಣಿಗೆ ಡಿಎಎಲ್‍ಕೆ ಚಿಕಿತ್ಸೆ ನೀಡುವ ಸಲಹೆಯನ್ನು ಕೊಡಲಾಯಿತು ಎಂದು ಹೇಳಿದರು.

ಡಾ.ಅಗರ್‍ವಾಲ್ ಐ ಹಾಸ್ಪಿಟಲ್‍ನ ವೈದ್ಯಕೀಯ ನಿರ್ದೇಶಕ ಡಾ.ಶ್ರೀಕೃಷ್ಣ ನಾಡಗೌಡ ಮಾತನಾಡಿ ಈ ರೋಗಿಯಲ್ಲಿ ಆಪ್ಟಿಕಲ್ ಕೆರಟೊಪ್ಲಾಸ್ಟಿ ಮತ್ತು ಡಿಎಎಲ್‍ಕೆ ಶಸ್ತ್ರಚಿಕಿತ್ಸೆ ನಡೆಸುವುದು ತಾಂತ್ರಿಕವಾಗಿ ಸವಾಲಿನಿಂದ ಕೂಡಿತ್ತು. ಗಂಭೀರ ಸ್ವರೂಪದ ಕೆರಟೊಕೊನಸ್ ಕಾಯಿಲೆ ಇದ್ದಲ್ಲಿ ದೃಷ್ಟಿಯನ್ನು ಮರುಕಳಿಸಲು ಡಿಎಎಲ್‍ಕೆ ಶಸ್ತ್ರಚಿಕಿತ್ಸೆ ನಡೆಸುವುದು ಅತ್ಯುತ್ತಮ ಮಾರ್ಗವಾಗಿರುತ್ತದೆ. ಈ ರೋಗಿಯ ಎರಡೂ ಕಣ್ಣುಗಳಲ್ಲಿ ಗಂಭೀರ ಸ್ವರೂಪದ ಕೆರಟೊಕೊನಸ್ ಇರುವುದು ಪತ್ತೆಯಾಗಿ 4 ನೇ ಹಂತಕ್ಕೆ ತಲುಪಿತ್ತು ಮತ್ತು ಬಲಗಣ್ಣಿನಲ್ಲಿ ಕಾರ್ನಿಯಲ್ ಪರ್ಫೊರೇಶನ್ ಇದ್ದಿದ್ದರಿಂದ ಇದನ್ನು ಶಸ್ತ್ರಚಿಕಿತ್ಸೆ ಮೂಲಕ ಉತ್ತಮ ರೀತಿಯಲ್ಲಿ ಯಶಸ್ವಿಯಾಗಿ ನಿರ್ವಹಣೆ ಮಾಡಲಾಗಿದೆ ಎಂದು ತಿಳಿಸಿದರು.

ಡಾ.ಅಗರ್‍ವಾಲ್ ಐ ಹಾಸ್ಪಿಟಲ್‍ನ ವೈದ್ಯಕೀಯ ನಿರ್ದೇಶಕ ಡಾ.ರವಿ ನಾಡ್ಗೀರ್ ಮಾತನಾಡಿ, `20 ರಿಂದ 40 ರ ವಯೋಮಾನದವರಲ್ಲಿ ಕೆರಟೊಕೊನಸ್ ನಾನ್-ಇನ್‍ಫೆಕ್ಷನ್ ಕಾರ್ನಿಯಲ್ ಅಂಧತ್ವಕ್ಕೆ ಕಾರಣವಾಗುತ್ತದೆ ಮತ್ತು ಇದು ದೃಷ್ಟಿ ಅಂಧತ್ವವನ್ನು ತರುತ್ತದೆ. ಕೆರಟೊಕೊನಸ್ ಕಾಯಿಲೆಯನ್ನು ಹೊಂದಿರುವ ರೋಗಿಗಳಲ್ಲಿ ಅತ್ಯುತ್ತಮವಾದ ಕನ್ನಡಕ ಧರಿಸಿದರೂ ಸಹ ದೃಷ್ಟಿ ಮಸುಕಾಗಿ ಕಾಣುತ್ತದೆ. ಕಣ್ಣಿನಲ್ಲಿ ಒತ್ತುವಿಕೆ ಅಥವಾ ತುರಿಕೆ ಮತ್ತು ದೃಷ್ಟಿ ಮಂದವಾಗುತ್ತಾ ಹೋಗುತ್ತದೆ. ಅಲರ್ಜಿ ಇರುವ ರೋಗಿಗಳಲ್ಲಿ ನಿರಂತರವಾಗಿ ಕಣ್ಣುಗಳನ್ನು ಉಜ್ಜಿಕೊಳ್ಳುವುದರಿಂದ ಕೆರಟೊಕೊನಸ್ ಕಾಯಿಲೆ ಬರುವ ಸಾಧ್ಯತೆ ಹೆಚ್ಚಿರುತ್ತದೆ. ಕೆರಟೊಕೊನಸ್‍ನ್ನು ಆರಂಭಿಕ ಹಂತದಲ್ಲಿಯೇ ಪತ್ತೆ ಮಾಡಿದರೆ ಸೂಕ್ತ ಚಿಕಿತ್ಸೆಯಿಂದ ನಿಯಂತ್ರಣ ಮಾಡಬಹುದು ಮತ್ತು ಕ್ರಾಸ್ ಲಿಂಕಿಂಗ್,ಇಂಟ್ಯಾಕ್ಟ್,ಇನ್‍ಸ್ಟ್ರೋಮಲ್ ರಿಂಗ್ಸ್‍ನಂತಹ ವಿಧಾನಗಳ ಮೂಲಕ ರೋಗಗಳು ಉಲ್ಬಣವಾಗುವುದನ್ನು ತಡೆಗಟ್ಟಬಹುದಾಗಿದೆ. ಆದರೆ, ಅಡ್ವಾನ್ಸ್ ಹಂತಗಳಲ್ಲಿ ಕೆರಟೋಪ್ಲಾಸ್ಟಿಯನ್ನು ಶಿಫಾರಸು ಮಾಡಲಾಗುತ್ತದೆ, ಅದು ಡಿಎಎಲ್‍ಕೆ(ಡೀಪ್ ಆ್ಯಂಟಿಯರ್ ಲಾಮೆಲ್ಲರ್ ಕೆರಟೋಪ್ಲಾಸ್ಟಿ) ಅಥವಾ ಪೂರ್ಣಪ್ರಮಾಣದಲ್ಲಿ ಆಪ್ಟಿಕಲ್ ಕೆರಟೋಪ್ಲಾಸ್ಟಿ (ಆಪ್ಟಿಕಲ್ ಪೆನೆಟ್ರೇಟಿಂಗ್ ಕೆರಟೋಪ್ಲಾಸ್ಟಿ)ಯನ್ನು ಗಂಭೀರ ಪ್ರಕರಣಗಳಲ್ಲಿ ಮಾಡಬೇಕಾಗುತ್ತದೆ ಎಂದು ಹೇಳಿದರು.

ಭಾರತೀಯ ಸಮಾಜದಲ್ಲಿ ನೇತ್ರದಾನ ಮಾಡುವ ವಿಚಾರದಲ್ಲಿ ಹೇಳಿಕೊಳ್ಳುವಂತಹ ಜಾಗೃತಿ ಮೂಡಿಲ್ಲ ಮತ್ತು ಭಾರತದಲ್ಲಿ ಕಸಿ ಮಾಡಿಸಿಕೊಳ್ಳಲು ಕಣ್ಣಿಗಾಗಿ ಕಾಯುತ್ತಿರುವ ಅಥವಾ ಕಣ್ಣಿಗೆ ಇರುವ ಬೇಡಿಕೆಗೆ ಪೂರಕವಾಗಿ ನೇತ್ರದಾನ ನಡೆಯುತ್ತಿಲ್ಲ. ಶ್ರೀಲಂಕಾದಂತಹ ದೇಶಗಳಿಂದ ತುರ್ತಾಗಿ ಕಾರ್ನಿಯಲ್ ಟಿಶ್ಯೂಗಳನ್ನು ತರಿಸಿಕೊಳ್ಳಲಾಗುತ್ತಿದೆ. ಈ ರೀತಿಯ ಸಮಸ್ಯೆ ಇರುವ ರೋಗಿಗಳಿಗೆ ಶಸ್ತ್ರಚಿಕಿತ್ಸೆ ನಡೆಸುವ ವೈದ್ಯರಿಗೆ ಕಾರ್ನಿಯಲ್ ಟಿಶ್ಯೂ ಅನ್ನು ಲಭ್ಯವಾಗುವಂತೆ ನೋಡಿಕೊಳ್ಳುವುದೇ ಒಂದು ದೊಡ್ಡ ಸವಾಲಾಗಿ ಪರಿಣಮಿಸುತ್ತದೆ. ಮೆಟ್ರೋಪಾಲಿಟಿನ್ ನಗರಗಳಲ್ಲದೇ ಇತರೆ ನಗರಗಳಲ್ಲಿಯೂ ನೇತ್ರದಾನದ ಬಗ್ಗೆ ಹೆಚ್ಚು ಹೆಚ್ಚು ಜಾಗೃತಿ ಮೂಡಿಸುವ ಆಂದೋಲನಗಳು ನಡೆಯಬೇಕು ಮತ್ತು ಅಲ್ಲಿ ನೇತ್ರದಾನ ಕೇಂದ್ರಗಳನ್ನು ಆರಂಭಿಸುವ ಅಗತ್ಯವಿದೆ. ಇದಲ್ಲದೇ, ಕಣ್ಣು ಸೇರಿದಂತೆ ಅಂಗಾಂಗ ದಾನದ ಬಗ್ಗೆ ಅರಿವು ಮೂಡಿಸಬೇಕಿದೆ. ಇದರಿಂದ ದೃಷ್ಟಿ ಅಗತ್ಯವಿರುವ ರೋಗಿಗಳಿಗೆ ದೃಷ್ಟಿ ನೀಡಿದಂತಾಗುತ್ತದೆ ಎಂದರು.

TRENDING