Thursday, December 3, 2020
Home ಜಿಲ್ಲೆ ಚಾಮರಾಜನಗರ ಸಾಹಿತಿ ಬಾಳಗುಣಸೇ ಮಂಜುನಾಥರ 'ಶಾಪ' ಕೃತಿ ಬಿಡುಗಡೆ

ಇದೀಗ ಬಂದ ಸುದ್ದಿ

ಎರಡು ದಿನಗಳ ಬಳಿಕ ಮತ್ತೆ ಪೆಟ್ರೋಲ್‌, ಡೀಸೆಲ್‌...

ಬೆಂಗಳೂರು: ಪೆಟ್ರೋಲ್‌, ಡೀಸೆಲ್‌ ದರ ಏರಿಕೆಗೆ ಎರಡು ದಿನಗಳವರೆಗೆ ಬಿಡುವು ನೀಡಿದ್ದ ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ಬುಧವಾರ ಮತ್ತೆ ಏರಿಕೆ ಮಾಡಿವೆ. ಬೆಂಗಳೂರಿನಲ್ಲಿ ಪ್ರತಿ...

ಮೆಕ್ಕೆಜೋಳ ಯಂತ್ರಕ್ಕೆ ವೇಲ್ ಸಿಲುಕಿ ಬಾಲಕಿ ದಾರುಣ...

ತುಮಕೂರು: ಮಧುಗಿರಿ ತಾಲೂಕಿನ ಕೊಡಿಗೇನಹಳ್ಳಿ ಸಮೀಪ ಮೆಕ್ಕೆಜೋಳ ತೆನೆ ಬಿಡಿಸುವ ಯಂತ್ರಕ್ಕೆ ವೇಲ್ ಸಿಲುಕಿದ ಪರಿಣಾಮ ಬಾಲಕಿ ಮೃತಪಟ್ಟ ಘಟನೆ ನಡೆದಿದೆ. 14 ವರ್ಷದ ರಮಾಬಾಯಿ ಮೃತಪಟ್ಟ...

ʼRRBʼಯ 1.4 ಲಕ್ಷ ಹುದ್ದೆಗಳಿಗೆ ಹರಿದು ಬಂದಿವೆ...

ರೈಲ್ವೆ ನೇಮಕಾತಿ ಮಂಡಳಿಯ ಬಹುನಿರೀಕ್ಷಿತ ತಾಂತ್ರಿಕೇತರ ಜನಪ್ರಿಯ ವರ್ಗಗಳ (ಎನ್ ಟಿಪಿಸಿ) ಪರೀಕ್ಷೆ, ಗ್ರೂಪ್ ಡಿ, ಮತ್ತು ಪ್ರತ್ಯೇಕ ವಿಭಾಗ ಪರೀಕ್ಷೆಗಳು ಡಿಸೆಂಬರ್ 15ರಿಂದ ಆರಂಭವಾಗಲಿವೆ. ಆದ್ರೆ, ಈ...

ಮಂಗಳೂರು-ಬೆಂಗಳೂರು ವಯಾ ಶ್ರವಣಬೆಳಗೊಳ ರೈಲಿಗೆ ಮತ್ತೆ ಚಾಲನೆ

ಮಂಗಳೂರು: ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಿಂದ ಕುಣಿಗಲ್, ಶ್ರವಣಬೆಳಗೊಳ ಮಾರ್ಗವಾಗಿ ಬೆಂಗಳೂರಿಗೆ ರೈಲು ಸಂಚಾರ ಮತ್ತೆ ಆರಂಭವಾಗಿದೆ. ವಾರದಲ್ಲಿ ನಾಲ್ಕು ದಿನ ಈ ರೈಲು ಸಂಚರಿಸಲಿದ್ದು, ಇದರ ಪ್ರಯೋಜನವನ್ನು ನಾಗರಿಕರು ಪಡೆಯಬೇಕೆಂದು...

ಎಂಜಿ ರೋಡ್, ಬ್ರಿಗೇಡ್ ರೋಡ್ನಲ್ಲಿ ಈ ಬಾರಿ...

 ಬೆಂಗಳೂರು: ಕೋವಿಡ್ ಎರಡನೇ ಅಲೆ ಭೀತಿ ಇರುವುದರಿಂದ ರಾಜಧಾನಿಯ ರಸ್ತೆ, ಬಾರ್‌ ಕ್ಲಬ್‌ಗಳಲ್ಲಿ ಹೊಸವರ್ಷ ಸಂಭ್ರಮಾಚರಣೆ ನಿಷೇಧಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಬಿಬಿಎಂಪಿ ಮನವಿ ಮಾಡಿದೆ.

ಸಾಹಿತಿ ಬಾಳಗುಣಸೇ ಮಂಜುನಾಥರ ‘ಶಾಪ’ ಕೃತಿ ಬಿಡುಗಡೆ

ಕೊಳ್ಳೇಗಾಲ : ಸಾಹಿತ್ಯ ಮಿತ್ರಕೂಟದ ವತಿಯಿಂದ ನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಸಾಹಿತಿ ಮಂಜುನಾಥ ಬಾಳಗುಣಸೇ ಅವರು ರಚಿಸಿರುವ ‘ಶಾಪ’ ನಾಟಕ ಕೃತಿಯ ಬಿಡುಗಡೆ ಸಮಾರಂಭವನ್ನು ಆಯೋಜಿಸಲಾಗಿತ್ತು.

   ‘ಶಾಪ’ ನಾಟಕ ಕೃತಿಯನ್ನು ಖ್ಯಾತ ಹಿರಿಯ ಸಾಹಿತಿ ಮಲೆಯೂರು ಗುರುಸ್ವಾಮಿ ಬಿಡುಗಡೆಗೊಳಿಸಿದರು. ಬಳಿಕ ಮಾತನಾಡಿದ ಅವರು ಮನುಷ್ಯನಿಗೆ ಒಂದಾದ ಮೇಲೊಂದು ಶಾಪ ಆವರಿಸಿಕೊಳ್ಳುತ್ತದೆ. ಅದಕ್ಕೆ ಸೂಕ್ತ ಔಷಧಿ ಕಂಡುಕೊಳ್ಳುವುದೇ ಚಿಂತಕರ, ಸಾಹಿತಿಗಳ,ದಾಸರ ಹಾಗೂ ಸಂವಿಧಾನದ ಆಶಯವಾಗಿದೆ ಎಂದು ಅಭಿಪ್ರಾಯಪಟ್ಟರು. ಒಂದರ ಹಿಂದೆ ಒಂದರಂತೆ ಅಂಟಿಕೊಳ್ಳುವ ಶಾಪದಿಂದ ಮನುಷ್ಯ ಬಿಡುಗಡೆಯಾಗುತ್ತಾ ಹೋಗುತ್ತಾನೆ ಎಂದರು.

    ಮಹಾಭಾರತ ಕಾವ್ಯದಲ್ಲಿ ಲಕ್ಷಕ್ಕೂ ಅಧಿಕ ಶ್ಲೋಕಗಳಿವೆ. ಅತ್ಯಧಿಕ ಪಾತ್ರಗಳಿವೆ. ಅಂತಹ ಕಾವ್ಯದಿಂದ ಮಂಜುನಾಥ್ ಅವರು ಈ ಶಾಪ ಕೃತಿಯನ್ನು ಎತ್ತಿಕೊಂಡಿದ್ದಾರೆ. ಸಾಹಿತಿಗಳ ಕೆಲಸ ಸಾಮಾಜಿಕ ಸ್ವಾಸ್ಥ್ಯವನ್ನು ಕಾಪಾಡುವಂತಿರಬೇಕು. ಮೆದೆಗೆ ಬೆಂಕಿ ಹಚ್ಚುವಂತಿರಬಾರದು. ಒಲೆಗೆ ಬೆಂಕಿ ಹಚ್ಚುವಂತಿರಬೇಕು. ದೇವರ ಮನೆ ದೀಪ ಉರಿಸುವಂತಿರಬೇಕು. ರಾಜಮಾರ್ಗಕ್ಕೆ ಒಯ್ಯುವಂತಿರಬೇಕು. ಈ ಶಾಪ ಕೃತಿಯು ಯಾವುದೇ ಏಕ‌ಪಕ್ಷ ಪರವಲ್ಲದ ಅದ್ಭುತ ಕೃತಿಯಾಗಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ ಎಂದು ಎಂದು ಅವರು ಗುಣಗಾನ ಮಾಡಿದರು. ಅಲ್ಲದೆ ತಮ್ಮ ಕೃತಿಯ ನಾಟಕವನ್ನು ಆಯೋಜಿಸುವಂತೆ ಸಾಹಿತಿ ಮಂಜುನಾಥ್ ಅವರಿಗೆ‌ ಸಲಹೆ‌ ನೀಡಿದರು.

        ರಂಗಕರ್ಮಿ ವೆಂಕಟರಾಜು ಮಾತನಾಡಿ ಕರ್ಣನ ವಿಷಯದಲ್ಲಿ ತುಂಬಾ ಸಣ್ಣ ಅವಧಿಯ ನಾಟಕ ಕೃತಿಯನ್ನು ಮಂಜುನಾಥ್ ರಚಿಸಿದ್ದಾರೆ. ಇವರು ತುಂಬಾ ಶಕ್ತಿಯುಳ್ಳ ನಾಟಕಕಾರರಾಗಿ ರೂಪಗೊಳ್ಳುವ ಎಲ್ಲಾ ಸಾಧ್ಯತೆಯಿದ್ದು ಇದೊಂದು ಅತ್ಯುತ್ತಮ ಕೃತಿಯಾಗಿದೆ ಎಂದು ಹೇಳಿದರು.

   ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಗಿರೀಶ್ ಕಾರ್ನಾಡ್ ಅವರ ನಿಧನಕ್ಕೆ ಶ್ರದ್ಧಾಂಜಲಿ ಅರ್ಪಿಸಲಾಯಿತು.

 ಸಾಹಿತ್ಯ ಮಿತ್ರಕೂದ ಅಧ್ಯಕ್ಷ ಪ್ರೊ.ದೊಡ್ಡಲಿಂಗೇಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕ.ಸಾ.ಪ ನಿಕಟಪೂರ್ವ ಜಿಲ್ಲಾಧ್ಯಕ್ಷ ಸೋಮಶೇಖರ್,ಹಿರಿಯ ವೈದ್ಯ ಡಾ.ಶಿವರುದ್ರಸ್ವಾಮಿ,ಕಸಾಪ ತಾಲ್ಲೂಕು ಅಧ್ಯಕ್ಷ ನಂದೀಶ್,ಮಿತ್ರಕೂಟದ ನಾಗೇಶ್ ಹಾಗೂ ಜಾಗೇರಿ ಪಳನಿಸ್ವಾಮಿ ಹಾಜರಿದ್ದರು.

TRENDING