Sunday, November 29, 2020
Home ಬೆಂಗಳೂರು ರಸ್ತೆ ನಿರ್ಮಾಣ ಸಂಬಂಧ ಮ್ಯಾಪ್ ಸಿದ್ಧಪಡಿಸಿ : ಡಿಸಿಎಂ ಪರಮೇಶ್ವರ್

ಇದೀಗ ಬಂದ ಸುದ್ದಿ

ಮದುವೆ ಆಗಲು ವಧು-ವರ ಹುಡುಕಾಟಕ್ಕೆ ಮುಂದಾಗುವ ಮುನ್ನ...

ಬೆಂಗಳೂರು: ಮದುವೆ ಆಗಲು ವಧು-ವರ ಹುಡುಕಾಟಕ್ಕೆ ಮುಂದಾಗುವ ಮುನ್ನ ಜೋಕೆ! ಮದುವೆ ಹೆಸರಲ್ಲಿ ವಂಚಿಸುವ ಗ್ಯಾಂಗ್​ ನಗರದಲ್ಲಿ ಅಡಗಿದೆ. ಶಾದಿ ಕಾಟ್ ಕಾಮ್, ಮ್ಯಾಟ್ರಿಮೋನಿಯಲ್ ಜಾಲತಾಣದಲ್ಲಿ ಪ್ರೊಫೈಲ್​ ಅಪ್​ಲೋಡ್​ ಮಾಡಿ ಅಮಾಯಕರ...

ಎಂಟು ತಿಂಗಳ ಹಸುಗೂಸು ಸೇರಿ 4 ಮಕ್ಕಳ...

ಲಕ್ನೋ,ನ.28-ಹೆತ್ತ ತಾಯಿಯೇ ತಮ್ಮ ನಾಲ್ಕು ಹೆಣ್ಣು ಮಕ್ಕಳ ಕುತ್ತಿಗೆ ಸೀಳಿ ಕೊಲೆ ಮಾಡಿರುವ ಧಾರುಣ ಘಟನೆ ಹರಿಯಾಣದ ಗುರುಗ್ರಾಮ್‍ನಲ್ಲಿ ನಡೆದಿದೆ. ಎಂಟು ತಿಂಗಳ ಹಸುಗೂಸು ಸೇರಿದಂತೆ 7 ವರ್ಷದೊಳಗಿನ ನಾಲ್ಕು...

ಮಾಜಿ ಸಚಿವೆ ಉಮಾಶ್ರೀ ಕಾರು ಅಪಘಾತ ಪ್ರಕರಣ:...

ಹುಬ್ಬಳ್ಳಿ: ನವೆಂಬರ್ 21ರಂದು ತಾಲೂಕಿನ ಬಂಡಿವಾಡ ಗ್ರಾಮದ ಬಳಿ ಮಾಜಿ ಸಚಿವ ಉಮಾಶ್ರೀ ಅವರಿಗೆ ಸೇರಿದ ಇನ್ನೋವಾ ಮತ್ತು ಬೊಲೆನೋ ಕಾರುಗಳ ನಡುವಿನ ಮುಖಾಮುಖಿ ಅಪಘಾತ‌ ಉಂಟಾಗಿತ್ತು. ಈ ಅಪಘಾತದಲ್ಲಿ...

ಡಿಸೆಂಬರ್‌ 2ರಿಂದ ಪ್ರಯಾಣಿಕರ ರೈಲ್ವೆ ಸೇವೆ ಆರಂಭ

ಕೋಲ್ಕತ್ತ: ಡಿಸೆಂಬರ್‌ 2ರಿಂದ 54 ರೈಲುಗಳೊಂದಿಗೆ ಪ್ರಯಾಣಿಕರ ರೈಲ್ವೆ ಸೇವೆಯನ್ನು ಪುನರಾರಂಭಿಸಲು ಪೂರ್ವ ರೈಲ್ವೆ ವಿಭಾಗ ನಿರ್ಧರಿಸಿದೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದರು. ಕೋವಿಡ್‌ನಿಂದಾಗಿ ಈ ವರ್ಷದ...

ವಾಹನ ಸವಾರರಿಗೆ ಗುಡ್ ನ್ಯೂಸ್: ವಾಯುಮಾಲಿನ್ಯ ಪರೀಕ್ಷೆ...

ಹುಬ್ಬಳ್ಳಿ: ವಾಯು ಮಾಲಿನ್ಯ ನಿಯಂತ್ರಣ ಜಾಗೃತಿ ಮಾಸಾಚರಣೆ ಪ್ರಯುಕ್ತ ನವೆಂಬರ್ 30 ರಂದು ತಪಾಸಣೆ ಕೇಂದ್ರಗಳಲ್ಲಿ ಉಚಿತ ವಾಯುಮಾಲಿನ್ಯ ಪರೀಕ್ಷೆ ಮತ್ತು ಪ್ರಮಾಣ ಪತ್ರ ನೀಡಲಾಗುವುದು. ಧಾರವಾಡ...

ರಸ್ತೆ ನಿರ್ಮಾಣ ಸಂಬಂಧ ಮ್ಯಾಪ್ ಸಿದ್ಧಪಡಿಸಿ : ಡಿಸಿಎಂ ಪರಮೇಶ್ವರ್

ಬೆಂಗಳೂರು : ಮುಂದಿನ 5 ವರ್ಷಗಳಲ್ಲಿ ರಾಜ್ಯಾದ್ಯಂತ ರಸ್ತೆ ನಿರ್ಮಾಣ ಸಂಬಂಧ “ರೋಡ್‌ ಮ್ಯಾಪ್‌” ಮಾಡುವುದು ಸೂಕ್ತ ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಸಲಹೆ ನೀಡಿದ್ದಾರೆ.

ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಇಂದು ಕರೆದಿದ್ದ ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ಸಮ್ಮೇಳನ‌ ಸಭೆಯಲ್ಲಿ ಅವರು ಮಾತನಾಡಿದರು. 2013ರಿಂದ 2019 ಅವಧಿಯಲ್ಲಿ ರಸ್ತೆ ನಿರ್ಮಾಣಕ್ಕಾಗಿಯೇ ಸುಮಾರು 50 ಸಾವಿರ ಕೋಟಿ ಹಣ ವೆಚ್ಚ ಮಾಡಲಾಗಿದೆ. ರಸ್ತೆ ನಿರ್ವಹಣೆ ಹೊರತುಪಡಿಸಿ,ಇಷ್ಟು ಹಣ ವೆಚ್ಚ ಮಾಡಿದ್ದರೂ ಇನ್ನೂ ರಸ್ತೆ ನಿರ್ಮಾಣದ ಕೆಲಸವೇ ಪೂರ್ಣಗೊಂಡಿಲ್ಲ. ಇದಕ್ಕೆ ಹಣ ಹೆಚ್ಚು ಪೋಲಾಗುತ್ತಿದೆ. ಹೀಗಾಗಿ ಮುಂದಿನ ಐದು ವರ್ಷಕ್ಕೆ ರೋಡ್‌ ಮ್ಯಾಪ್‌ ಮಾಡಿಕೊಂಡು ಇಂತಿಷ್ಟು ಹಣ ನಿಗದಿ ಮಾಡುವುದು ಉತ್ತಮ ಎಂದು ಅಭಿಪ್ರಾಯ ಪಟ್ಟರು.

ಇಲಾಖೆಯಲ್ಲಿ ಯಾವುದೇ ಯೋಜನೆ ಗುತ್ತಿಗೆ ನೀಡುವ ಮೊದಲು ಯೋಜನೆ ಅಂದಾಜು ವೆಚ್ಚ ಎಸ್ಟಿಮೇಟ್‌ ಮಾಡಲಾಗುತ್ತದೆ. ಆದರೆ ಎಸ್ಟಿಮೇಟ್‌ ಮಾಡಿದ ಮೊತ್ತಕ್ಕಿಂತಲೂ ಶೇ.40 ಕ್ಕೂ ಹೆಚ್ಚಾಗಿ ಅವೈಜ್ಞಾನಿಕವಾಗಿ ಗುತ್ತಿಗೆದಾರರು ಹಣ ವೆಚ್ಚ ಮಾಡುತ್ತಿದ್ದಾರೆ. ಮತ್ತೊಂದೆಡೆ ಎಸ್ಟಿಮೇಟ್‌ ಮಾಡಿದ ಮೊತ್ತಕ್ಕಿಂತಲೂ ಕಡಿಮೆ ವೆಚ್ಚಕ್ಕೆ ಯೋಜನೆಯನ್ನು ಗುತ್ತಿಗೆದಾರರು ಪೂರ್ಣಗೊಳಿಸುತ್ತಿದ್ದಾರೆ. ಇದರಿಂದ ಗುಣಮಟ್ಟದ ಮೇಲೆ ಅನುಮಾನ ಮೂಡುವಂತೆ ಮಾಡುತ್ತಿದೆ. ಹೆಚ್ಚು ಹಾಗೂ ಕಡಿಮೆ ಮೊತ್ತಕ್ಕೆ ಯೋಜನೆ ಪೂರ್ಣಗೊಳ್ಳುವುದಾದರೆ ಇಲಾಖೆಯಿಂದ ಎಸ್ಟಿಮೇಟ್‌ ಮಾಡುವ ಅನಿವಾರ್ಯತೆ ಯಾಕೆ? ಮುಂದಿನ‌ ದಿನದಲ್ಲಿ ಎಸ್ಟಿಮೇಟ್‌ ಆದ ಮೊತ್ತಕ್ಕೆ ಯೋಜನೆ ಪೂರ್ಣಗೊಳ್ಳುವಂತೆ ನೋಡಿಕೊಳ್ಳಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಗುತ್ತಿಗೆದಾರರು ಯೋಜನೆಯನ್ನು ಇಂತಿಷ್ಟು ಅವಧಿಯೊಳಗೆ ಪೂರ್ಣಗೊಳಿಸಬೇಕು ಎಂಬ ನಿಯಮವಾಗಿರುತ್ತದೆ. ಆದರೂ ಅವಧಿಯೊಳಗೆ ಯಾರೂ ಕಾಮಗಾರಿ ಪೂರ್ಣಗೊಳಿಸುತ್ತಿಲ್ಲ. ಜೊತೆಗೆ ಆ ಯೋಜನೆಯ ಮೊತ್ತ ಕೂಡ ಹೆಚ್ಚು ಮಾಡಲಾಗುತ್ತಿದೆ. ಇದರಿಂದ ಅನಗತ್ಯವಾಗಿ ಹಣ ಪೋಲಾಗುತ್ತಿದೆ. ಈ ಬಗ್ಗೆಯೂ ಅಧಿಕಾರಿಗಳು ಗುತ್ತಿಗೆದಾರರಿಗೆ ಕಟ್ಟುನಿಟ್ಟಾಗಿ ಅವಧಿಯೊಳಗೆ ಪೂರ್ಣಗೊಳಿಸಲು ಸೂಚಿಸಿ ಎಂದರು.

TRENDING