Wednesday, December 2, 2020
Home ಜಿಲ್ಲೆ ಬಾದಾಮಿ ಕ್ಷೇತ್ರದ ಜನರ ಗೋಳು ಕೇಳುವವರು ಯಾರು?ಸಿದ್ರಾಮಯ್ಯನ್ನವರೇ ಈ ಕಡೆ ಸ್ವಲ್ಪ ನೋಡಿ

ಇದೀಗ ಬಂದ ಸುದ್ದಿ

ನಮ್ಮ ಮೆಟ್ರೋ ಪ್ರಯಾಣಿಕರಿಗೊಂದು ಗುಡ್ ನ್ಯೂಸ್

ಬೆಂಗಳೂರು, ಡಿ. 01 : ನಮ್ಮ ಮೆಟ್ರೋ ಪ್ರಯಾಣಿಕರಿಗೆ ಬಿಎಂಆರ್‌ಸಿಎಲ್ ಸಿಹಿ ಸುದ್ದಿಯನ್ನು ನೀಡಿದೆ. ಇನ್ನು ಮುಂದೆ ಮೆಟ್ರೋ ನಿಲ್ದಾಣದಲ್ಲಿಯೇ ಸ್ಮಾರ್ಟ್ ಕಾರ್ಡ್ ರಿಚಾರ್ಜ್ ಮಾಡಬಹುದಾಗಿದೆ. ಕೋವಿಡ್ ಕಾರಣ ನಿಲ್ದಾಣದಲ್ಲಿ ರಿಚಾರ್ಜ್...

ಬಿಪಿಎಲ್ ಕುಟುಂಬಗಳಿಗೆ ಉಚಿತವಾಗಿ ಕೋವಿಡ್ ಲಸಿಕೆ :...

ಬೆಂಗಳೂರು: ಬಿಪಿಎಲ್ ಕುಟುಂಬಗಳಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಸುಧಾಕರ್ ಸಿಹಿ ಸುದ್ದಿ ನೀಡಿದ್ದು, ಉಚಿತವಾಗಿ ಕೊರೊನಾ ಲಸಿಕೆ ನೀಡಲಾಗುತ್ತದೆ ಎನ್ನುವ ಭರವಸೆ ನೀಡಿದ್ದಾರೆ.

ಉಡುಪಿ ಕೃಷ್ಣ ಮಠದ ಫಲಕದಲ್ಲಿ ಕನ್ನಡ ಮಾಯ...

ಉಡುಪಿ : ಉಡುಪಿ ಕೃಷ್ಣಮಠದ ಮಹಾದ್ವಾರದಲ್ಲಿ ಹಾಕಲಾದ ಫಲಕದಲ್ಲಿ ಕನ್ನಡ ಮಾಯವಾಗಿದೆ. ಇನ್ನೂ ನವೆಂಬರ್ ಮುಗಿದು ಒಂದು ದಿನವಾಗಿಲ್ಲ. ಆಗಲೇ ಪ್ರಸಿದ್ಧ ಉಡುಪಿ ಕೃಷ್ಣಮಠದ ಮುಖ್ಯ...

ರೈತ ಪ್ರತಿಭಟನೆ ಯಶಸ್ಸಿಗೆ ಗುರುದ್ವಾರಗಳಲ್ಲಿ ಇಂದು ವಿಶೇಷ...

ನವದೆಹಲಿ,ಡಿ.1-ಕೇಂದ್ರದ ಹೊಸ ಕೃಷಿ ನೀತಿ ವಿರೋಧಿಸಿ ರೈತರು ಹಮ್ಮಿಕೊಂಡಿರುವ ಚಳವಳಿ ಯಶಸ್ಸಿಗಾಗಿ ರಾಜಧಾನಿಯಲ್ಲಿರುವ ಗುರುದ್ವಾರಗಳಲ್ಲಿ ಇಂದು ವಿಶೇಷ ಪೂಜೆ ಸಲ್ಲಿಸಲಾಯಿತು. ರೈತರಿಗೆ ಮಾರಕವಾಗಿರುವ ಕೃಷಿ ನೀತಿಯನ್ನು ಸರ್ಕಾರ ಈ ಕೂಡಲೇ...

ರಾಜ್ಯದಲ್ಲಿ ಈಗಿರುವ ಗೋಹತ್ಯೆ ನಿಷೇಧ ಕಾಯ್ದೆ ಮುಂದುವರೆಯಲಿ,...

ಬೆಂಗಳೂರು : ರಾಜ್ಯದಲ್ಲಿ ಈ ಹಿಂದೆ ಜಾರಿಗೊಳಿಸಿದ್ದ ಗೋಹತ್ಯೆ ನಿಷೇಧ ಕಾಯ್ದೆಯೇ ಮುಂದುವರೆಯಲಿ ಹೊಸ ಕಾಯ್ದೆ ಜಾರಿಗೆ ತರುವುದು ಬೇಡ ಹೊಸ ಕಾಯ್ದೆಗೆ ನಮ್ಮ ವಿರೋಧವಿದೆ ಎಂದು ವಿರೋಧ ಪಕ್ಷದ ನಾಯಕ...

ಬಾದಾಮಿ ಕ್ಷೇತ್ರದ ಜನರ ಗೋಳು ಕೇಳುವವರು ಯಾರು?ಸಿದ್ರಾಮಯ್ಯನ್ನವರೇ ಈ ಕಡೆ ಸ್ವಲ್ಪ ನೋಡಿ

ಬಾಗಲಕೋಟೆ : ಆಧಾರ್ ಆಧಾರ್ ಆಧಾರ್, ಆಧಾರ್ ಕಾರ್ಡ್ ಗಾಗಿ ಪ್ರತಿ ದಿನ ಜನರ ಗೋಳು ಕೇಳುವವರು ಯಾರೂ ಇಲ್ವಾ.? ನಮ್ಮ ದೇಶದಲ್ಲಿ ಯಾವಾಗ ಆಧಾರ್ ಕಾರ್ಡ್ ಬಂತೊ ಅಲ್ಲಿಂದ ಇಲ್ಲಿಯವರೆಗೂ ನಮ್ಮ ಜನರು ಪ್ರತಿದಿನ ಸಾಲು ಸಾಲುಗಟ್ಟಿ ಸರ್ಕಾರಿ ಕಛೇರಿಯ ಆಧಾರ ಕೇಂದ್ರದ ಬಳಿ ಜನರು ನಿಲ್ಲುವುದನ್ನು ಬಿಡುತ್ತಿಲ್ಲ,ಹಾಗಾದರೆ ಎಲ್ಲಿಯದ್ದು?ಅಂತ ಇದ್ದೀರಾ ನೋಡಿ ಈ  ಸ್ಟೋರಿನಾ..

ಬಾಗಲಕೋಟೆ ಜಿಲ್ಲೆ ಚಾಲುಕ್ಯರ ನಾಡಿನ ಬಾದಾಮಿ ಕ್ಷೇತ್ರದಲ್ಲಿ ಜನನಾಯಕನ್ನಾಗಿ ಗೆದ್ದು ಬಂದ ಮಾಜಿ ಸಿಎಂ ಬಾದಾಮಿ ಶಾಸಕ ಸಿದ್ಧರಾಮಯ್ಯ ಕ್ಷೇತ್ರದಲ್ಲಿ ಪ್ರತಿ ದಿನ ಚಿಕ್ಕಮಕ್ಕಳು,ವೃದ್ಧರು ಎಲ್ಲರೂ ಸೇರಿ ಬೆಳಿಗ್ಗೆ 4 ಘಂಟೆಗೆ ಬಂದು ಸರತಿ ಸಾಲಿನಲ್ಲಿ ಪಾಳೆ ಹಚ್ಚಬೇಕು. ತಾಲೂಕಿನಲ್ಲಿ ಒಂದೇ ಆಧಾರ್ ಕಾರ್ಡ್ ತಿದ್ದುಪಡಿ ಮತ್ತು ಹೊಸ ಆಧಾರ್ ಕಾರ್ಡ್ ಮಾಡುವ ಕಛೇರಿ ಇರುವುದು ತಹಶೀಲ್ದಾರ್ ಕಛೇರಿಯಲ್ಲಿ ಮಾತ್ರ. ಪುಟಾಣಿ ಮಕ್ಕಳ ಜೊತೆ ವೃದ್ಧ ತಾಯಿಗಳು ಹಳ್ಳಿಗಳಿಂದ ಬೆಳಿಗ್ಗೆ ಬಸ್ ಸಿಗದೇ ಕಾಲು ನಡಿಗೆಯ ಮುಖಾಂತರ ಬಂದು ಸರತಿ ಸಾಲು ಹಚ್ಚಬೇಕು,ಬರಗಾಲ ಆವರಿಸಿದ್ದರೂ ಕೂಡ ಕೆಲಸಗಳು ಕೈಕೊಟ್ಟಿದ್ದರೂ ಕೂಡ ಅಲ್ಲೊ ಇಲ್ಲೊ ಕೆಲಸಗಳು ಇದ್ದಾವೆ,ಹೊಟ್ಟೆಪಾಡಿಗೆ ಕೆಲಸಕ್ಕೆ ಹೋಗಬೇಕು ಅನ್ನುವಷ್ಟರಲ್ಲಿ ಸರ್ಕಾರಗಳು ಒಂದಲ್ಲಾ ಒಂದು ಹೊಸ ಕಾಯ್ದೆ ತಂದುಬಿಡುತ್ತದೆ ಅದು ಸರಿಯಿಲ್ಲ,ಇದು ಸರಿಯಿಲ್ಲ ಅಂತ ಹೇಳಿ ನಮ್ಮನ್ನ ಇಕ್ಕಟಿಗೆ ಸಿಕ್ಕಿಸಿ ನಿಮ್ಮ ಆಧಾರ್ ಕಾರ್ಡ್ ಸರಿಯಿಲ್ಲ ತಿದ್ದುಪಡಿ ಮಾಡಿಸಿಕೊಂಡು ಬನ್ನಿ ಅಂತ ಹೇಳಿಬಿಡುತ್ತಾರೆ. ಆದ್ರೆ ನಾವು ಬೆಳಿಗ್ಗೆ 4 ಗಂಟೆಗೆ ಬಂದು ಸರತಿಸಾಲಿನಲ್ಲಿ ನಿಂತು ಉಪವಾಸ,ವನವಾಸ ಅನ್ನದೆ ಆಧಾರ್ ಕಾರ್ಡ್ ಮಾಡಿಸಬೇಕು ಅಂತ ಬಂದ್ರೆ ಇಲ್ಲಿನ ಅಧಿಕಾರಿಗಳು ಬರುವುದು ಬರೊಬ್ಬರಿ 11 ಗಂಟೆಗೆ ಬಂದು ಟೀ,ಕಾಫಿ,ನಾಸ್ಟಾ,ಊಟಾ ಅಂತ ಕಾಲ ಕಳಿಯುವುದರ ಜೊತೆ ಇನ್ನೊಂದು ಹೊಸದಾಗಿ ಸರ್ವರ್ ಬಿಜಿ ಅಂತ ಉಡಾಫೆ ಉತ್ತರ ನೀಡಿ ಜನಸಾಮಾನ್ಯರ ಜೊತೆ ಚೆಲ್ಲಾಟ ಆಡುತ್ತಿದ್ದಾರೆ.

 ಈ ವಿಷಯದ ಕುರಿತಾಗಿ ಪತ್ರಿಕಾ ಮಾಧ್ಯಮಗಳಲ್ಲಿ ವರದಿ ಪ್ರಸಾರ ಮಾಡಿದರೂ ಕೂಡ ಕ್ಯಾರೆ ಅನ್ನದ ತಹಶೀಲ್ದಾರ್ ಸುಹಾಷ ಇಂಗಳೆ ಸೂಕ್ತವಾದ ಪರಿಹಾರ ಕಂಡುಕೊಳ್ಳುವುದರಲ್ಲಿ ವಿಫಲವಾಗಿದ್ದಾರೆ. ಇಲ್ಲಿನ ಅಧಿಕಾರಿಗಳು ಸಿದ್ದರಾಮಯ್ಯನವರಿಗೆ ಎಲೆಕ್ಷನ್ ಬಿಜಿಯಲ್ಲಿ ತಮ್ಮ ಕ್ಷೇತ್ರದ ಕಡೆ ಯಾಕೆ ಗಮನಹರಿಸುತ್ತಿಲ್ಲ ಜನರ ಗೋಳು ಕೇಳುವುದಕ್ಕೆ ಇವರನ್ನು ನಾವು ಶಾಸಕರನ್ನಾಗಿ ಮಾಡಿದ್ದೇವೆ ಅಂತ ಇಲ್ಲಿನ ಸಾರ್ವಜನಿಕರು ತಮ್ಮ ಅಳಲನ್ನು ತೋಡಿಕೊಳ್ಳುತ್ತಿದ್ದಾರೆ ಮತ್ತು ನಮ್ಮ ಮಾಧ್ಯಮ ಪ್ರತಿನಿಧಿ ಜೊತೆ ಮಾತನಾಡಿದ ಕರ್ನಾಟಕ ವಿಶ್ವನಿರ್ಮಾಣ ಸೇನೆಯ ಬಾಗಲಕೋಟೆ ಜಿಲ್ಲಾಧ್ಯಕ್ಷರ ಮಹೇಶ ವಡ್ಡರ ಮಾತನಾಡಿ ಇದು ಕೇವಲ ಬಾದಾಮಿಯ ಪರಿಸ್ಥಿತಿ ಅಲ್ಲ,ನಮ್ಮ ದೇಶದಲ್ಲಿ ಇರುವ ಪರಿಸ್ಥಿತಿ ಅದರಲ್ಲೂ ವಿಶೇಷವಾಗಿ ಬಾದಾಮಿ ತಾಲೂಕಿನಲ್ಲಿ ಆಧಾರ್ ಕಾರ್ಡ್ ಸಮಸ್ಯೆ ತುಂಬಾನೇ ಇದೆ,ಅದಕ್ಕೆ ಅಧಿಕಾರಿಗಳು ಸಮಸ್ಯೆಯನ್ನು ಬಗ್ಗೆ ಬಗೆಹರಿಸುವಲ್ಲಿ ವಿಫಲರಾಗಿದ್ದಾರೆ. ಈ ಕ್ಷೇತ್ರದ ಶಾಸಕ ಸಿದ್ದರಾಮಯ್ಯನವರು ಕ್ಷೇತ್ರದ ಜನರ ಗೋಳನ್ನು ಕೇಳುವುದಕ್ಕೆ ಯಾಕೆ ಬರುತ್ತಿಲ್ಲ?ವಿಧಾನಸೌಧದಲ್ಲಿ ಕೂರೋದಕ್ಕೆ ಇವರನ್ನು ಆರಿಸಿ ತೆಗೆದುಕೊಂಡು ಬಂದಿಲ್ಲಾ,ಜನರ ಸಂಕಟಗಳಿಗೆ ಪರಿಹಾರ ಕೊಡುತ್ತಾರೆ ಎಂದು ನಂಬಿದ್ದೇವೆ. ಶೀಘ್ರದಲ್ಲೇ ಈ ಸಮಸ್ಯೆ ಬಗ್ಗೆ ಗಮನಹರಿಸದೇ ಹೋದರೆ ತಹಶೀಲ್ದಾರ್ ಕಛೇರಿಗೆ ಬೀಗ ಜಡಿದು ಪ್ರತಿಭಟಿಸುವುದಾಗಿ ಎಚ್ಚರಿಕೆಯನ್ನು ನೀಡಿದರು.

TRENDING