Friday, November 27, 2020
Home ಜಿಲ್ಲೆ ಕೋಲಾರ ಬರದ ನಾಡಿಗೆ ನೀರೆರದೀತೆ ಕೆ.ಸಿ.ವ್ಯಾಲಿ ಯೋಜನೆ?

ಇದೀಗ ಬಂದ ಸುದ್ದಿ

ಶೀಘ್ರದಲ್ಲೇ ಗೋಹತ್ಯೆ ನಿಷೇಧ ಕಾಯ್ದೆ ಮಂಡನೆ

ಬೆಂಗಳೂರು : ಪಕ್ಷದ ಚುನಾವಣೆ ಪ್ರಣಾಳಿಕೆಯಲ್ಲಿ ನೀಡಿದ ಭರವಸೆ ಪ್ರಕಾರ ರಾಜ್ಯದಲ್ಲಿ ಗೋಹತ್ಯೆ ನಿಷೇಧ ಜಾರಿಗೆ ತರಲು ಬಿಜೆಪಿ ಸರ್ಕಾರ ಬದ್ಧವಾಗಿದ್ದು, ಮುಂದಿನ ಅಧಿವೇಶನದಲ್ಲಿ ಮಸೂದೆ ಮಂಡಿಸಲಾಗುತ್ತದೆ ಎಂದು ಪಶು...

ಮುಂಬೈ ರೈಲುಗಳಲ್ಲಿ ಮಕ್ಕಳಿಗೆ ಪ್ರಯಾಣ ನಿರ್ಬಂಧ

ಮುಂಬೈ: ಸ್ಥಳೀಯ ರೈಲುಗಳಲ್ಲಿ ಪ್ರಯಾಣಿಸುವಾಗ ಪೋಷಕರು ತಮ್ಮ ಮಕ್ಕಳನ್ನು ಜೊತೆಯಲ್ಲಿ ಕರೆದುಕೊಂಡು ಬಾರದಿರುವಂತೆ ಮುಂಬೈ ರೈಲ್ವೆ ನಿರ್ಭಂದ ಹೇರಿದೆ. ಮಹಾರಾಷ್ಟ್ರದಲ್ಲಿ ಕೋವಿಡ್19 ಸೋಂಕಿನ ಪ್ರಮಾಣ ದಿನೇ ದಿನೇ...

ನೌಕಾಪಡೆಯ ಮಿಗ್ 29 ತರಬೇತಿ ವಿಮಾನ ...

ನವದೆಹಲಿ.ನ.27 : ಭಾರತೀಯ ನೌಕಾ ಪಡೆಯ ಮಿಗ್ 29 ಕೆಯುಬಿ ತರಬೇತಿ ಯುದ್ಧ ವಿಮಾನ ಪತನವಾಗಿದ್ದು, ಘಟನೆಯಲ್ಲಿ ಪೈಲಟ್ ಒಬ್ಬನನ್ನು ರಕ್ಷಿಸಲಾಗಿದ್ದು, ಮತ್ತೊಬ್ಬ ಪೈಲಟ್ ನಾಪತ್ತೆಯಾಗಿದ್ದಾರೆ.ಗೋವಾ ಬಂದರಿವನಲ್ಲಿರುವ ಐಎನ್‌ಎಸ್ ವಿಕ್ರಾಮಾಧಿತ್ಯ...

ತುಳು ಅಭಿವೃದ್ಧಿಗೆ ಪ್ರತ್ಯೇಕ ಪ್ರಾಧಿಕಾರ ರಚಿಸಿ: ಬಿ.ಕೆ.ಹರಿಪ್ರಸಾದ್...

ಮಂಗಳೂರು: ತುಳು ಅಭಿವೃದ್ಧಿಗೆ ಪ್ರತ್ಯೇಕ ಪ್ರಾಧಿಕಾರ ರಚನೆ ಮಾಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಆಗ್ರಹಿಸಿದರು. ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ...

ಅರ್ನಬ್‌ ಗೋಸ್ವಾಮಿಗೆ ಮಧ್ಯಂತರ ಜಾಮೀನು ಮುಂದುವರಿಕೆ: ಸುಪ್ರೀಂ...

ನವದೆಹಲಿ: ಆತ್ಮಹತ್ಯೆ ಪ್ರಚೋದನೆ ಪ್ರಕರಣದಲ್ಲಿ ರಿಪಬ್ಲಿಕ್‌ ಟಿ.ವಿ ಸಂಪಾದಕ ಅರ್ನಬ್ ಗೋಸ್ವಾಮಿ ಮತ್ತು ಇತರೆ ಇಬ್ಬರ ಅರ್ಜಿಗಳನ್ನು ಬಾಂಬೆ ಹೈಕೋರ್ಟ್‌ ವಿಲೇವಾರಿ ಮಾಡುವವರೆಗೂ, ಅವರಿಗೆ ನೀಡಿರುವ ಮಧ್ಯಂತರ ಜಾಮೀನು ಮುಂದುವರಿಯಲಿದೆ ಎಂದು...

ಬರದ ನಾಡಿಗೆ ನೀರೆರದೀತೆ ಕೆ.ಸಿ.ವ್ಯಾಲಿ ಯೋಜನೆ?

ಕೋಲಾರ : ಸತತ 20 ವರ್ಷಗಳ ಕಾಲ ಬರಗಾಲವನ್ನು ಎದುರಿಸಿದ ಜಿಲ್ಲೆಗೆ ಕೆಸಿ ವ್ಯಾಲಿ ನೀರು ಹರಿಸಿ ರೈತರ ಪಾಲಿಗೆ ಆಶಾಕಿರಣ ಹಾಗೂ ಆಧುನಿಕ ಭಗೀರಥ ಎನಿಸಿದ ಸ್ಪೀಕರ್ ರಮೇಶ್ ಕುಮಾರ್ ರವರ ಕಣ್ಣು,ಕುಡಿಯುವ ನೀರಿನ ಯೋಜನೆ ಕಡೆ ನೋಡುತ್ತಿದ್ದು 2020 ರ ಜನವರಿ 1 ರಂದು ಲೋಕಾರ್ಪಣೆ ಗೊಳ್ಳಲಿದೆ. ಹಾಗಾದರೆ ಆ ಯೋಜನೆ ಯಾವುದು? ಆ ಯೋಜನೆ ಕಾಮಗಾರಿ ಹೇಗೆ ಸಾಗುತ್ತಿದೆ ಅಂತೀರಾ? ಈ ಸ್ಟೋರಿ ನೋಡಿ.

ಹೌದು ಹೀಗೇ ಸಂಸದರು,ಶಾಸಕರು ಸ್ಪೀಕರ್ ರಮೇಶ್ ಕುಮಾರ್ ನೇತೃತ್ವದಲ್ಲಿ ಯರಗೊಳ್ ಡ್ಯಾಂ ಕಾಮಗಾರಿಯನ್ನು ವೀಕ್ಷಣೆ ನಡೆಸುತ್ತಿರುವುದು. ಇನ್ನೊಂದು 500 ಎಂ.ಸಿ.ಎಫ್.ಟಿ ಸಾಮರ್ಥ್ಯದ ಅಣೆಕಟ್ಟನ್ನು ಮಾರ್ಕಂಡೇಯ ನದಿಗೆ ಅಡ್ಡಲಾಗಿ 45 ಹಳ್ಳಿಗಳಿಗೆ ಕುಡಿಯುವ ನೀರನ್ನು ಒದಗಿಸುವ ಯೋಜನೆ ಕಾಮಗಾರಿಯಾಗಿದೆ. ಇನ್ನು ಈ ಎಲ್ಲಾ ದೃಶ್ಯಗಳು ಕಂಡುಬಂದಿದ್ದು ಕೋಲಾರ ಜಿಲ್ಲೆ ಬಂಗಾರಪೇಟೆ ತಾಲ್ಲೂಕಿನ ಯರಗೊಳ್ ಗ್ರಾಮದ ಬಳಿ ಕಟ್ಟಲಾಗುತ್ತಿರುವ ಡ್ಯಾಂ ಬಳಿ.

ಸುಮಾರು 450 ಕೋಟಿ ರೂ. ವೆಚ್ಚದಲ್ಲಿ ಮಳೆ ನೀರನ್ನು ಹಿಡಿದಿಟ್ಟುಕೊಳ್ಳಲು ನಿರ್ಮಾಣಗೊಳ್ಳುತ್ತಿರುವ ಡ್ಯಾಂ ಇದ್ದಾಗಿದ್ದು ಕೋಲಾರ, ಬಂಗಾರಪೇಟೆ,ಮಾಲೂರು ತಾಲ್ಲೂಕುಗಳಿಗೆ ಕುಡಿಯುವ ನೀರನ್ನ ಪೂರೈಸುವ ಯೋಜನೆ,ಇದರ ಕಾಮಗಾರಿ ಈ ವರ್ಷಾಂತ್ಯದಲ್ಲಿ ಪೂರ್ಣಗೊಂಡು 2020 ರ ಜನವರಿ 1ನೇ ತಾರೀಖು ಲೋಕಾರ್ಪಣೆ ಮಾಡುವ ಉದ್ದೇಶವನ್ನು ಹೊಂದಲಾಗಿದೆ.

ಈ ಡ್ಯಾಂ ಮೈಸೂರಿನ ಕೆ.ಆರ್.ಎಸ್ ಹೋಲುವಂತಿದ್ದು ಕಾಮಗಾರಿ ಪೂರ್ಣಗೊಂಡ ನಂತರ ಇದನ್ನು ಪ್ರವಾಸಿ ತಾಣವನ್ನಾಗಿ ಮಾಡಲಾಗುವುದು ಸ್ಪೀಕರ್ ರಮೇಶ್ ಕುಮಾರ್ ತಿಳಿಸಿದ್ದಾರೆ.

ಕೋಲಾರ ಜಿಲ್ಲೆ ಹಲವಾರು ವರ್ಷಗಳಿಂದ ನೀರಿಗಾಗಿ ಬಸವಳಿದಿದ್ದು ರಮೇಶ್ ಕುಮಾರ್ ನೇತೃತ್ವದಲ್ಲಿ ಕೆ.ಸಿ.ವ್ಯಾಲಿ ನೀರು ಜಿಲ್ಲೆಯ ಕೆರೆಗಳಿಗೆ ಹರಿಯುತ್ತಿತ್ತು. ಜನತೆಗೆ ಅವರ ಆಧುನಿಕ ಭಗೀರಥ ಎನಿಸಿಕೊಂಡಿದ್ದಾರೆ. ರಮೇಶ್ ಕುಮಾರ್ ಅವರು ಆಮೆಗತಿಯಲ್ಲಿ ಸಾಗುತ್ತಿದ್ದನ್ನು ಮನಗಂಡು ಸತತವಾಗಿ 4ನೇ ಬಾರಿ ಕಾಮಗಾರಿ ಬಳಿ ಭೇಟಿ ನೀಡುತ್ತಿದ್ದಾರೆ. ಈಗ ಹೇಗೆ ಕಾಮಗಾರಿ ನಡೆಯುತ್ತಿದೆ ಅಂದ್ರೆ ನಾವು ನೋಡಬಹುದು. ರಾಜಕೀಯ ನಾಯಕರು ಜಿಲ್ಲೆಯ ಅಭಿವೃದ್ದಿ ವಿಷಯದಲ್ಲಿ ಇಚ್ಛಾಶಕ್ತಿಯಿಂದ ಕೆಲಸ ಮಾಡಬೇಕೇ ವಿನಃ ರಾಜಕೀಯ ಮಾಡಬಾರದು. ಜನರು ನಮ್ಮನ್ನ ಆಯ್ಕೆ ಮಾಡಿಕಳುಹಿಸಿದ್ದಾರೆ,ಇನ್ನು ಸ್ಪೀಕರ್ ರಮೇಶ್ ಕುಮಾರ್ ಅವರು ಸತತವಾಗಿ ಈ ಕಾಮಗಾರಿಯ ಹಿಂದೆಬಿದ್ದಿದ್ದಾರೆ,ಡ್ಯಾಂನ ಸಾರ್ಥಕತೆ ನೋಡಬೇಕಾದರೆ ಜಿಲ್ಲೆಯ ಎಲ್ಲಾ ಶಾಸಕರು ರಮೇಶ್ ಕುಮಾರ್ ಅವರ ಜೊತೆ ಕೈಜೋಡಿಸಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಿಂದ ಸಿಗುವ ಎಲ್ಲಾ ಅನುದಾನ ಬಳಸಿಕೊಂಡು ಜಿಲ್ಲೆಯನ್ನು ಉತ್ತಮವಾಗಿ ಅಭಿವೃದ್ಧಿಗೊಳಿಸುವತ್ತ ಸಾಗೋಣ. ಈ ವರ್ಷ ಉತ್ತಮವಾಗಿ ಮಳೆಯಾಗಿ ಡ್ಯಾಂ ತುಂಬಲಿ ಎಂದರು.

ಒಟ್ಟಾರೆ ಬರದ ನಾಡು ಎಂದು ಹಣೆಪಟ್ಟಿಗಳಿದ್ದ ಕೋಲಾರ ಹಸಿರೀಕರಣ ಮಾಡಲು ಹೊರಟಿರುವ ರಾಜಕೀಯ ನಾಯಕರ ಹಾದಿ ಯಶಸ್ಸು ಕಾಣುವುದರೊಂದಿಗೆ ಯರಗೊಳ್ ಡ್ಯಾಂನ ಕಾಮಗಾರಿ ಈ ವರ್ಷಾಂತ್ಯಕ್ಕೆ ಪೂರ್ಣಗೊಂಡು ಕುಡಿಯುವ ನೀರನ್ನು ಅತೀ ಶೀಘ್ರದಲ್ಲಿ ಹರಿಸುತ್ತಾರೋ ಇಲ್ಲವೋ? ಎಂಬುದನ್ನು ಕಾದು ನೋಡಬೇಕಿದೆ. 

TRENDING