Thursday, November 26, 2020
Home ಜಿಲ್ಲೆ ಭೂಸ್ವಾಧೀನ ಕಾಯ್ದೆ ವಿರುದ್ಧ ರಬಕವಿಯಲ್ಲೂ ರೈತರ ಭಾರೀ ಪ್ರತಿಭಟನೆ

ಇದೀಗ ಬಂದ ಸುದ್ದಿ

ಮಹಾಮಾರಿ ಕೊರೊನಾಗೆ ಸುಡಾನ್ ಮಾಜಿ ಪ್ರಧಾನಿ `ಸಾದಿಕ್...

ಜಗತ್ತನ್ನೇ ನರಳಿಸುತ್ತಿರುವ ಕೊರೊನಾ ಸೋಂಕಿನ ಎದುರು ಎಂತಹ ನಾಯಕನಾದರೂ ಮಂಡಿಯೂರಬೇಕು ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಸುಡಾನ್‌ನ ಮಾಜಿ ಪ್ರಧಾನಿ ಸಾದಿಕ್ ಅಲ್-ಮೆಹ್ದಿ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ. 84 ವರ್ಷದ ಮೆಹ್ದಿ...

ಸ್ಟೀಮರ್​ ಬೋಟ್​ನಿಂದ 8 ಟ್ರಕ್ ನದಿ ಪಾಲು

ಕೋಲ್ಕತ: ಸೋಮವಾರ ದೊಡ್ಡ ಸ್ಟೀಮರ್​ ಬೋಟ್​ನಿಂದ ಆಕಸ್ಮಿಕವಾಗಿ ನದಿ ಪಾಲಾಗಿದ್ದ ಕಾರ್ಮಿಕರು ಮತ್ತು 8 ಟ್ರಕ್​ಗಳಲ್ಲಿ ಈವರೆಗೆ ಎರಡು 3 ಟ್ರಕ್​ ಅನ್ನು ಹೊರತೆಗೆಯಲಾಗಿದ್ದು, ಕಾರ್ಮಿಕನೊಬ್ಬನ ಮೃತದೇಹ ಪತ್ತೆಯಾಗಿದೆ.

ಕೆನರಾ ಬ್ಯಾಂಕ್ ನೇಮಕಾತಿ: ಸ್ಪೆಷಲಿಸ್ಟ್ ಅಧಿಕಾರಿ ಹುದ್ದೆಗೆ...

 ಬೆಂಗಳೂರು : ಉದ್ಯೋಗಾಕಾಂಕ್ಷಿಗಳಿಗೆ ಕೆನೆರಾ ಬ್ಯಾಂಕ್ ಸಿಹಿಸುದ್ದಿ ನೀಡಿದ್ದು, 220 ಕೆನರಾ ಬ್ಯಾಂಕ್ ಸ್ಪೆಷಲಿಸ್ಟ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಹುದ್ದೆ ಹೆಸರು: ಕೆನರಾ ಬ್ಯಾಂಕ್ ಸ್ಪೆಷಲಿಸ್ಟ್...

ಫೋಟೋ ವೈರಲ್ : ಮಗಳ ಜೊತೆ ಹೆಜ್ಜೆ...

 'ತಾಯಿಗೆ ತಕ್ಕ ಮಗ' ಚಿತ್ರದ ಬಳಿಕ ಅಜಯ್ ರಾವ್ ನಟನೆಯ ಯಾವ ಚಿತ್ರವೂ ಇನ್ನು ಥಿಯೇಟರ್‌ಗೆ ಬಂದಿಲ್ಲ. ಸಾಲು ಸಾಲು ಚಿತ್ರಗಳಲ್ಲಿ ಬ್ಯುಸಿಯಿದ್ದು, ಚಿತ್ರೀಕರಣ ಮಾಡುವುದರಲ್ಲಿ ತೊಡಗಿಕೊಂಡಿದ್ದಾರೆ.

‘ಪ್ಲಾಸ್ಮಾ’ ದಾನ ಮಾಡಿ 350 ರೋಗಿಗಳ ಜೀವ...

ನವದೆಹಲಿ: ಇವರು ಮಾಡಿರುವ ಕೆಲಸ ಹೊಗಳಿಕೆಗೂ ಮೀರಿದ್ದು, ಏಕೆಂದರೆ ದೆಹಲಿ ಪೊಲೀಸ್ ಸಿಬ್ಬಂದಿ ತಮ್ಮ ಪ್ಲಾಸ್ಮಾ ದಾನ ಮಾಡುವ ಮೂಲಕ 350 ಮಂದಿಯ ಜೀವ ಉಳಿಸಿದ್ದಾರೆ. 42...

ಭೂಸ್ವಾಧೀನ ಕಾಯ್ದೆ ವಿರುದ್ಧ ರಬಕವಿಯಲ್ಲೂ ರೈತರ ಭಾರೀ ಪ್ರತಿಭಟನೆ

ಬಾಗಲಕೋಟ : ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ರಬಕವಿಯಲ್ಲಿ ಭೂಸ್ವಾಧೀನ ಕಾಯ್ದೆ ವಿರೋಧಿಸಿ ಕೇಂದ್ರಸರ್ಕಾರ ಮತ್ತು ರಾಜ್ಯಸರ್ಕಾರ ವಿರುದ್ಧ ರೈತರು ಪ್ರತಿಭಟನೆ ನಡೆಸಿದರು.

ರಬಕವಿ ಬನಹಟ್ಟಿ ತಾಲೂಕಿನ ರಬಕವಿಯ ಶ್ರೀ ಭಗೀರಥ ಸರ್ಕಲ್ ನಲ್ಲಿ ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆಯಿಂದ ನೂರಾರು ರೈತರು ಸೇರಿ ರಸ್ತೆ ತಡೆದು, ಕೇಂದ್ರ ಮತ್ತು ರಾಜ್ಯಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಪ್ರತಿಭಟಿಸಿದರು.

ಭೂಸ್ವಾಧೀನ ಕಾಯ್ದೆ ರೈತರಿಗೆ ಮರಣಶಾಸನವಾಗಿದೆ,ಕೂಡಲೇ ಈ ಕಾಯ್ದೆ ಕೈಬಿಡಬೇಕೆಂದು ತಮ್ಮ ಆಕ್ರೋಶವನ್ನು ಹೊರಹಾಕಿದರು. ಕರ್ನಾಟಕದಲ್ಲಿ ನೀರಿಲ್ಲದೆ ರೈತರು ತೀರಾ ಸಂಕಷ್ಟಕ್ಕೀಡಾಗಿದ್ದಾರೆ,ಈ ಹಂತದಲ್ಲಿ ಇಂಥ ಕಾಯ್ದೆಯನ್ನು ತಂದು  ರೈತರನ್ನು ಮಾರಣಹೋಮ ಮಾಡಲು ಹೊರಟಿದ್ದಾರೆ ಎಂದು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ರೈತರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.

ಈ ಹಿಂದೆ 2014ರಲ್ಲಿ ಇದ್ದ ಭೂಸ್ವಾದಿನ ಕಾಯ್ದೆಯಿಂದ ಭೂಮಿ ಕಳೆದುಕೊಂಡ ರೈತರಿಗೆ ಯಾವುದೇ ಪ್ರಯೋಜನವಾಗಿರಲಿಲ್ಲ.

2013ರಲ್ಲಿ ಬೆಂಗಳೂರಿನ ಸುತ್ತ ಸ್ವಾಧೀನಪಡಿಸಿಕೊಂಡ ಭೂಮಿಯನ್ನು ರಿಯಲ್ ಎಸ್ಟೇಟ್ ಮೂಲಕ ವಿಲೇವಾರಿ ಮಾಡಲಾಗಿತ್ತು.

ಈ ಬಗ್ಗೆ ರೈತ ಸಂಘಟನೆಗಳು ದೇಶದಲ್ಲಿ ಚಳುವಳಿ ನಡೆಸಿದರೂ ಯಾವ ಪ್ರಯೋಜನವೂ ಆಗಲಿಲ್ಲ,ಇಂದು ಮತ್ತೆ ಭೂಸ್ವಾಧೀನ ಕಾಯ್ದೆಯನ್ನು ತಂದು ರೈತರನ್ನು ಕೊಲ್ಲಲು ಹೊರಟಿದ್ದಾರೆ ಎಂದು ರೈತ ಮುಖಂಡರು ಕಿಡಿಕಾರಿದರು. ಕೂಡಲೇ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಎಚ್ಚೆತ್ತುಕೊಂಡು ರೈತರ ಉಳಿವಿಗಾಗಿ ಕೆಲಸ ಮಾಡಬೇಕು,ಭೂಸ್ವಾಧೀನ ಕಾಯ್ದೆಯನ್ನು ಕೈಬಿಟ್ಟು ರೈತರ ಉಳಿವಿಗಾಗಿ ರಾಜ್ಯ ಸರ್ಕಾರ ಕೆಲಸ ಮಾಡಬೇಕಾಗಿದೆ,ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ವಿಧಾನಸೌಧ ಮುಂಭಾಗದಲ್ಲಿ ಕೂತು ಉಗ್ರ ಚಳುವಳಿ ಮಾಡಬೇಕಾಗುತ್ತದೆ ಎಂದು ರೈತರು ತಮ್ಮ ಆಕ್ರೋಶವನ್ನು ಹೊರಹಾಕಿದರು.

ರಬಕವಿ-ಬನಹಟ್ಟಿ ತಾಲೂಕಿನ ಉಪತಹಶೀಲ್ದಾರ್ ಬಿಜ್ಜರಗಿರವರಿಗೆ ರೈತರು ಮನವಿಯನ್ನು ಸಲ್ಲಿಸಿದರು. ಇದೇ ಸಂದರ್ಭದಲ್ಲಿ ರೈತ ಮುಖಂಡರಾದ ಹೊನ್ನಪ್ಪ ಬಿಡರಿ,ಬಸವರಾಜ ಪಾಟೀಲ,ಅಶೋಕ ದೇಸಾಯಿ,ಶಿವು ಅವರಾದಿ,ಸಿದ್ದು ಉಳ್ಳಾಗಡ್ಡಿ,ರಾಜು ಶಿರೊಳ, ದಶರತ ಕಾಂಬ್ಳೆ,ಮಂಜುನಾಥ ಸಂಕೇಶ್ವರ,ಯಲ್ಲಪ್ಪ ಕರಿಗಾರ,ಮಾಳಪ್ಪ ಜಗದಾಳ,ಮಲ್ಲಪ್ಪ ನಸಲಾಪುರ ಸೇರಿದಂತೆ ಅನೇಕ ರೈತರು ಪಾಲ್ಗೊಂಡಿದ್ದರು.

TRENDING