Sunday, December 6, 2020
Home ಕ್ರೈಂ ನ್ಯೂಸ್ ಜೆರಾಕ್ಸ್ ಅಂಗಡಿಯಲ್ಲಿದ್ದ 69 ಮೊಬೈಲ್ ವಶ : ಎಲ್ಲಾ ಫೋನುಗಳು ಕಾಲೇಜು ವಿದ್ಯಾರ್ಥಿಗಳದ್ದು

ಇದೀಗ ಬಂದ ಸುದ್ದಿ

ವಿಶ್ವದಾದ್ಯಂತ 6.66 ಕೋಟಿ ಗಡಿಯತ್ತ ತಲುಪಿದ ಕೊರೋನಾ...

ನ್ಯೂಯಾರ್ಕ್; ವಿಶ್ವದಾದ್ಯಂತ ಮಹಾಮಾರಿ ಕೊರೋನಾ ವೈರಸ್ ಅಬ್ಬರ ಹೆಚ್ಚಾಗಿದ್ದು, ಸೋಂಕಿತರ ಸಂಖ್ಯೆ 6.66 ಕೋಟಿ ಗಡಿಯತ್ತ ಸಾಗಿದೆ. ಪ್ರಸ್ತುತ ವಿಶ್ವದ ವಿವಿಧ ರಾಷ್ಟ್ರಗಳಲ್ಲಿ ಒಟ್ಟಾರೆ ಸೋಂಕಿತರ...

ಸಿಎಂ ನಿವಾಸಕ್ಕೆ ಮುತ್ತಿಗೆ ಯತ್ನ; ಕರವೇ ರಾಜ್ಯಾಧ್ಯಕ್ಷ...

ಬೆಂಗಳೂರು: ಮರಾಠಾ ಅಭಿವೃದ್ಧಿ ನಿಗಮ ವಿರೋಧಿಸಿ ಕನ್ನಡಪರ ಸಂಘಟನೆಗಳು ಕರೆ ನೀಡಿರುವ ಕರ್ನಾಟಕ ಬಂದ್ ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆದರೆ ಅಲ್ಲಲ್ಲಿ ಕನ್ನಡಪರ ಸಂಘಟನೆ ಕಾರ್ಯಕರ್ತರ ಪ್ರತಿಭಟನೆಗಳು ತೀವ್ರ ಸ್ವರೂಪ...

ತಮಿಳುನಾಡು ದಕ್ಷಿಣ ಕರಾವಳಿಯಲ್ಲಿ ಕಳೆದ 30 ಗಂಟೆಗಳಿಂದ...

ಚೆನ್ನೈ: ವಾಯುಭಾರ ಕುಸಿತವಾಗಿ ದುರ್ಬಲಗೊಂಡಿರುವ 'ಬುರೆವಿ' ಚಂಡಮಾರುತ ತಮಿಳುನಾಡು ದಕ್ಷಿಣ ಕರಾವಳಿಯ ರಾಮನಾಥಪುರಂ ಜಿಲ್ಲೆಯ ಸಮೀಪದಲ್ಲಿ ಕಳೆದ 30 ಗಂಟೆಗಳಿಂದ ಸ್ಥಿರವಾಗಿದೆ ಎಂದು ಹವಾಮಾನ ಇಲಾಖೆ ಕಚೇರಿ ತನ್ನ ಮಾಹಿತಿ...

ಕರ್ನಾಟಕ ಬಂದ್: ಟೌನ್‌ಹಾಲ್‌ ಬಳಿ ಪ್ರತಿಭಟನಾಕಾರರನ್ನು ವಶಕ್ಕೆ...

ಬೆಂಗಳೂರು, ಡಿ. 05: ಮರಾಠ ನಿಗಮ ಮಂಡಳಿಯನ್ನು ವಿರೋಧಿಸಿ ಕನ್ನಡಪರ ಸಂಘಟನೆಗಳು ಇಂದು ಕರ್ನಾಟಕ ಬಂದ್‌ಗೆ ಕರೆ ಕೊಟ್ಟಿವೆ. ಟೌನ್‌ಹಾಲ್ ಬಳಿ ಪ್ರತಿಭಟನೆ ಆರಂಭವಾಗಿದೆ, ಈ...

ಚಾರ್ಮಾಡಿ ಘಾಟ್ ನಲ್ಲಿ 150 ಅಡಿ ಪ್ರಪಾತಕ್ಕೆ...

ಚಿಕ್ಕಮಗಳೂರು: ಧರ್ಮಸ್ಥಳಕ್ಕೆ ತೆರಳುತ್ತಿದ್ದ ಕಾರೊಂದು 150 ಅಡಿ ಆಳದ ಪ್ರಪಾತಕ್ಕೆ ಉರುಳಿ ಬಿದ್ದಿರುವ ಘಟನೆ ಚಾರ್ಮಡಿ ಘಾಟ್ ನ ಬಿದರತಳದಲ್ಲಿ ನಡೆದಿದೆ. ಸರಿಯಾಗಿ ರಸ್ತೆ ಮಾರ್ಗ ಕಾಣದೇ...

ಜೆರಾಕ್ಸ್ ಅಂಗಡಿಯಲ್ಲಿದ್ದ 69 ಮೊಬೈಲ್ ವಶ : ಎಲ್ಲಾ ಫೋನುಗಳು ಕಾಲೇಜು ವಿದ್ಯಾರ್ಥಿಗಳದ್ದು

ಕೊಳ್ಳೇಗಾಲ : ಕಾಲೇಜಿನಲ್ಲಿ ಮೊಬೈಲ್ ಫೋನ್ ನಿಷೇಧವಿರುವ ಕಾರಣ ವಿದ್ಯಾರ್ಥಿಗಳು ತಮ್ಮ ಮೊಬೈಲ್‌ಗಳನ್ನು ಹಣ ಕೊಟ್ಟು ಸಮೀಪದ ಜೆರಾಕ್ಸ್ ಅಂಗಡಿಯಲ್ಲಿ ಇರಿಸುತ್ತಿದ್ದರು ಎನ್ನಲಾಗಿರುವ ಪ್ರಕ್ರಿಯೆಗೆ ಕೊಳ್ಳೇಗಾಲ ಪೊಲೀಸರು ಬ್ರೇಕ್ ಹಾಕಿದ್ದಾರೆ.

           ಖಚಿತ ಮಾಹಿತಿ ಪಡೆದು ಇಂದು ಬೆಳೆಗ್ಗೆ ವಿದ್ಯಾರ್ಥಿಗಳ ಮೊಬೈಲ್‌ ಫೋನುಗಳನ್ನು ಇರಿಸಿಕೊಂಡಿದ್ದ ಮಾನಸ ಕಾಲೇಜು ಬಳಿ ಇರುವ ಮಾನಸ ಜೆರಾಕ್ಸ್ ಅಂಗಡಿಗೆ ತೆರಳಿದ ಕೊಳ್ಳೇಗಾಲ ಟೌನ್ ಪಿಎಸ್ಐ ವೀಣಾನಾಯಕ್ ಅಂಗಡಿಯಲ್ಲಿ ಶೇಖರಿಸಿದ್ದ ಒಟ್ಟು 69 ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ವಿದ್ಯಾರ್ಥಿಗಳು ಬೆಳಗ್ಗೆ ಕಾಲೇಜಿಗೆ ಬರುವಾಗ ಅಂಗಡಿಯಲ್ಲಿ ಮೊಬೈಲ್ ಇರಿಸಿ ಬರುತ್ತಿದ್ದರು. ಕಾಲೇಜು ಬಿಟ್ಟ ಬಳಿಕ ಹೋಗಿ ಪಡೆದುಕೊಳ್ಳುತ್ತಿದ್ದರು ಎನ್ನಲಾಗಿದೆ‌. ಮೊಬೈಲ್ ಇರಿಸಿಕೊಳ್ಳಲು ಅಂಗಡಿ ಮಾಲೀಕ ಪ್ರತಿ ಮೊಬೈಲಿಗೆ ವಿದ್ಯಾರ್ಥಿಗಳಿಂದ 5 ರೂಪಾಯಿ ಪಡೆದುಕೊಳ್ಳುತ್ತಿದ್ದ ಎಂದು ಹೇಳಲಾಗಿದೆ. ವಿದ್ಯಾರ್ಥಿಗಳು ಕೊಡುವ ಪ್ರತಿ ಮೊಬೈಲಿಗೆ ಒಂದೊಂದು ಕ್ರಮ ಸಂಖ್ಯೆಯ ಚೀಟಿ ಕೊಟ್ಟು ಮೊಬೈಲನ್ನು ಅಂಗಡಿಯಲ್ಲಿ ಇಟ್ಟುಕೊಂಡು ವಾಪಸ್ ಕೊಡುವಾಗ ಚೀಟಿ ಪಡೆದುಕೊಳ್ಳುವ ಪ್ರಕ್ರಿಯೆ ನಡೆದುಕೊಂಡು ಬಂದಿದ್ದು ಇದೀಗ ಈ 5 ರೂ. ಮೊಬೈಲ್ ಪ್ರಕ್ರಿಯೆಗೆ ಪೊಲೀಸರು ಬ್ರೇಕ್ ಹಾಕಿದ್ದಾರೆ.

        ಪೊಲೀಸರು ವಶಪಡಿಸಿಕೊಂಡ ಮೊಬೈಲ್‌ಗಳನ್ನು ಪಡೆದುಕೊಳ್ಳಲು ಠಾಣೆಗೆ ಹೋದ ವಿದ್ಯಾರ್ಥಿಗಳಿಗೆ ಪಿಎಸ್ಐ ವೀಣಾನಾಯಕ್ ಮೊಬೈಲ್ ಬಳಸದಂತೆ ಹಾಗೂ ಜೆರಾಕ್ಸ್ ಅಂಗಡಿಯಲ್ಲಿ ಕೊಡದಂತೆ ತಾಕೀತು ಮಾಡಿದ್ದಾರೆ. ಅಲ್ಲದೇ ಪೋಷಕರನ್ನು ಕರೆಯಿಸುವಂತೆ ತಿಳಿಸಿದ್ದಾರೆ. ವಶಪಡಿಸಿಕೊಂಡಿರುವ ಮೊಬೈಲ್ ಫೋನುಗಳಲ್ಲಿ ಹೆಣ್ಣುಮಕ್ಕಳ ಮೊಬೈಲ್‌ಗಳು ಸಹ ಇವೆ ಎನ್ನಲಾಗಿದೆ.

          ಇನ್ನು ವಿದ್ಯಾರ್ಥಿ-ವಿದ್ಯಾರ್ಥಿನಿಯರ ಮೊಬೈಲ್‌ಗಳನ್ನು ಇರಿಸಿಕೊಳ್ಳುತ್ತಿದ್ದ ಜೆರಾಕ್ಸ್ ಅಂಗಡಿ ಮಾಲೀಕ ಮಹಾದೇವ ಎಂಬುವನಿಗೆ ಈ ರೀತಿಯ ಪ್ರಕ್ರಿಯೆಗಳನ್ನು ನಡೆಸದಂತೆ ತಾಕೀತು ಮಾಡಿದ್ದು,ಮತ್ತೊಮ್ಮೆ ಇರಿಸಿಕೊಳ್ಳುವುದು ಕಂಡುಬಂದಲ್ಲಿ ಸೂಕ್ತ ಕ್ರಮ ಜರುಗಿಸುವ ಎಚ್ಚರಿಕೆಯನ್ನು ಪೊಲೀಸರು ನೀಡಿದ್ದಾರೆ‌. ಪೊಲೀಸರ ಈ ಕ್ರಮಕ್ಕೆ ಸಾರ್ವಜನಿಕ ವಲಯದಲ್ಲಿ ಭಾರೀ ಪ್ರಶಂಸೆ ವ್ಯಕ್ತವಾಗಿದೆ.

TRENDING