Thursday, November 26, 2020
Home ಅಂತರ್ ರಾಷ್ಟ್ರೀಯ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಯುವರಾಜ್ ಸಿಂಗ್ ವಿದಾಯ

ಇದೀಗ ಬಂದ ಸುದ್ದಿ

ಮಹಾಮಾರಿ ಕೊರೊನಾಗೆ ಸುಡಾನ್ ಮಾಜಿ ಪ್ರಧಾನಿ `ಸಾದಿಕ್...

ಜಗತ್ತನ್ನೇ ನರಳಿಸುತ್ತಿರುವ ಕೊರೊನಾ ಸೋಂಕಿನ ಎದುರು ಎಂತಹ ನಾಯಕನಾದರೂ ಮಂಡಿಯೂರಬೇಕು ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಸುಡಾನ್‌ನ ಮಾಜಿ ಪ್ರಧಾನಿ ಸಾದಿಕ್ ಅಲ್-ಮೆಹ್ದಿ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ. 84 ವರ್ಷದ ಮೆಹ್ದಿ...

ಸ್ಟೀಮರ್​ ಬೋಟ್​ನಿಂದ 8 ಟ್ರಕ್ ನದಿ ಪಾಲು

ಕೋಲ್ಕತ: ಸೋಮವಾರ ದೊಡ್ಡ ಸ್ಟೀಮರ್​ ಬೋಟ್​ನಿಂದ ಆಕಸ್ಮಿಕವಾಗಿ ನದಿ ಪಾಲಾಗಿದ್ದ ಕಾರ್ಮಿಕರು ಮತ್ತು 8 ಟ್ರಕ್​ಗಳಲ್ಲಿ ಈವರೆಗೆ ಎರಡು 3 ಟ್ರಕ್​ ಅನ್ನು ಹೊರತೆಗೆಯಲಾಗಿದ್ದು, ಕಾರ್ಮಿಕನೊಬ್ಬನ ಮೃತದೇಹ ಪತ್ತೆಯಾಗಿದೆ.

ಕೆನರಾ ಬ್ಯಾಂಕ್ ನೇಮಕಾತಿ: ಸ್ಪೆಷಲಿಸ್ಟ್ ಅಧಿಕಾರಿ ಹುದ್ದೆಗೆ...

 ಬೆಂಗಳೂರು : ಉದ್ಯೋಗಾಕಾಂಕ್ಷಿಗಳಿಗೆ ಕೆನೆರಾ ಬ್ಯಾಂಕ್ ಸಿಹಿಸುದ್ದಿ ನೀಡಿದ್ದು, 220 ಕೆನರಾ ಬ್ಯಾಂಕ್ ಸ್ಪೆಷಲಿಸ್ಟ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಹುದ್ದೆ ಹೆಸರು: ಕೆನರಾ ಬ್ಯಾಂಕ್ ಸ್ಪೆಷಲಿಸ್ಟ್...

ಫೋಟೋ ವೈರಲ್ : ಮಗಳ ಜೊತೆ ಹೆಜ್ಜೆ...

 'ತಾಯಿಗೆ ತಕ್ಕ ಮಗ' ಚಿತ್ರದ ಬಳಿಕ ಅಜಯ್ ರಾವ್ ನಟನೆಯ ಯಾವ ಚಿತ್ರವೂ ಇನ್ನು ಥಿಯೇಟರ್‌ಗೆ ಬಂದಿಲ್ಲ. ಸಾಲು ಸಾಲು ಚಿತ್ರಗಳಲ್ಲಿ ಬ್ಯುಸಿಯಿದ್ದು, ಚಿತ್ರೀಕರಣ ಮಾಡುವುದರಲ್ಲಿ ತೊಡಗಿಕೊಂಡಿದ್ದಾರೆ.

‘ಪ್ಲಾಸ್ಮಾ’ ದಾನ ಮಾಡಿ 350 ರೋಗಿಗಳ ಜೀವ...

ನವದೆಹಲಿ: ಇವರು ಮಾಡಿರುವ ಕೆಲಸ ಹೊಗಳಿಕೆಗೂ ಮೀರಿದ್ದು, ಏಕೆಂದರೆ ದೆಹಲಿ ಪೊಲೀಸ್ ಸಿಬ್ಬಂದಿ ತಮ್ಮ ಪ್ಲಾಸ್ಮಾ ದಾನ ಮಾಡುವ ಮೂಲಕ 350 ಮಂದಿಯ ಜೀವ ಉಳಿಸಿದ್ದಾರೆ. 42...

ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಯುವರಾಜ್ ಸಿಂಗ್ ವಿದಾಯ

ಮುಂಬೈ : ಟೀಂ ಇಂಡಿಯಾದ ಸಾರ್ವಕಾಲಿಕ ಶ್ರೇಷ್ಠ ಆಲ್ ರೌಂಡರ್ ಎನಿಸಿದ್ದ ಯುವರಾಜ್ ಸಿಂಗ್ ಅವರು ಎಲ್ಲಾ ಮಾದರಿಯ ಅಂತಾರಾಷ್ಟ್ರಿಯ ಕ್ರಿಕೆಟ್ ಜೀವನಕ್ಕೆ ವಿದಾಯ ಹೇಳಿದ್ದಾರೆ.

ಮುಂಬೈನಲ್ಲಿಂದು ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿದ ಯುವರಾಜ್ ಸಿಂಗ್ ಸಕ್ರಿಯ ಅಂತಾರಾಷ್ಟ್ರೀಯ ಕ್ರಿಕೆಟ್ ಬದುಕಿಗೆ ವಿದಾಯ ಪ್ರಕಟಿಸಿದರು. 2000ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಬದುಕಿಗೆ ಪಾದಾರ್ಪಣೆ ಮಾಡಿದ್ದ ಯುವರಾಜ್ ಸಿಂಗ್ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದರು.

ಟಿ-20,ಏಕದಿನ ಎರಡೂ ಮಾದರಿಯಲ್ಲೂ ಭಾರತ ವಿಶ್ವಚಾಂಪಿಯನ್ ಆಗಲು ಯುವಿ ಆಟ ಕಾರಣ

2007ರಲ್ಲಿ ಟೀಂ ಇಂಡಿಯಾ ಮೊದಲ ಬಾರಿಗೆ ಟಿ20 ವಿಶ್ವಕಪ್ ಚಾಂಪಿಯನ್ ಆಗಲು ಯುವಿ ಪ್ರಮುಖ ಪಾತ್ರ ವಹಿಸಿದ್ದರು. ಇಂಗ್ಲೆಂಡ್ ನ ವೇಗದ ಬೌಲರ್ ಸ್ಟುವರ್ಟ್ ಬ್ರಾಡ್ ಅವರ ಓವರಿನ ಆರೂ ಎಸೆತಗಳಲ್ಲಿ ಸಿಕ್ಸರ್ ಬಾರಿಸಿ ನೂತನ ವಿಶ್ವದಾಖಲೆ ನಿರ್ಮಿಸಿದ್ದರು. ಅಲ್ಲದೆ, 2011ರ ಏಕದಿನ ವಿಶ್ವಕಪ್ ಟ್ರೋಫಿ ಟೀಂ ಇಂಡಿಯಾದ ಪಾಲಿಗೆ ಬರುವಂತೆ ಶ್ರೇಷ್ಠ ಆಟವಾಡಿದ್ದರು. ಬ್ಯಾಟಿಂಗ್ ನಲ್ಲಿ ಪಿಂಚ್ ಹಿಟ್ಟರ್ ಆಗಿ 362 ರನ್ ಹೊಡೆದಿದ್ದರೆ, ಎಡಗೈ ಸ್ಪಿನ್ನರ್ ಆಗಿ 15 ವಿಕೆಟ್ ಗಳಿಸಿ ಭಾರತ 1984ರ ಬಳಿಕ ಮತ್ತೊಮ್ಮೆ ಏಕದಿನ ವಿಶ್ವಕಪ್ ಚಾಂಪಿಯನ್ ಆಗಲು ಕಾರಣವಾಗಿ ಸಹಜವಾಗೇ 2011ರ ವಿಶ್ವಕಪ್ ಟೂರ್ನಿಯ ಸರಣಿ ಸರ್ವೋತ್ತಮ ಪ್ರಶಸ್ತಿಗೆ ಭಾಜನವಾಗಿದ್ದರು.

ಐಪಿಎಲ್ ಟೂರ್ನಿಯಲ್ಲೂ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಮಿಂಚಿ ಯುವಿ ಅಭಿಮಾನಿಗಳಿಗೆ ರಂಜಿಸಿದ್ದರು. ಆದರೆ 2017ರಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯವೇ ಕೊನೆಯ ಪಂದ್ಯವಾಗಿ ಪರಿಣಮಿಸಿತ್ತು. ಏಕೆಂದರೆ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಯುವರಾಜ್ ವಿದೇಶದಲ್ಲಿ ಚಿಕಿತ್ಸೆ ಪಡೆಯುವುದಕ್ಕಾಗಿ ಸಕ್ರಿಯ ಕ್ರಿಕೆಟ್ ಬದುಕಿನಿಂದ ದೂರವಾಗಿದ್ದರು. ವಿದೇಶದಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿ ಮತ್ತೆ ಟೀಂ ಇಂಡಿಯಾದಲ್ಲಿ ಆಡಿ ಒಂದಷ್ಟು ಪಂದ್ಯಗಳಲ್ಲಿ ರಂಜಿಸಿದ್ದರು. ಅಲ್ಲದೆ ಐಪಿಎಲ್ ಟೂರ್ನಿಯಲ್ಲೂ ಕ್ರಿಕೆಟ್ ಆಟವನ್ನು ಮುಂದುವರೆಸಿದ್ದರು.

ಒಟ್ಟು 304 ಏಕದಿನ ಪಂದ್ಯಗಳನ್ನು ಮಧ್ಯಮ ಕ್ರಮಾಂಕದಲ್ಲಿ ಎಡಗೈ ಬ್ಯಾಟ್ಸ್ ಮನ್ ಆಗಿ ಆಡಿ 8701 ರನ್ ಬಾರಿಸಿದ್ದಾರೆ. ಅಲ್ಲದೆ ಎಡಗೈ ಸ್ಪಿನ್ನರ್ ಆಗಿಯೂ ಮಿಂಚಿ 111 ವಿಕೆಟ್ ಪಡೆದಿದ್ದಾರೆ. 58 ಟಿ-20 ಪಂದ್ಯಗಳನ್ನು ಆಡಿರುವ ಯುವರಾಜ್ ಸಿಂಗ್ 1777 ರನ್ ಗಳನ್ನು ಹೊಡೆದಿದ್ದರು ಹಾಗೂ 28 ವಿಕೆಟ್ ಗಳನ್ನು ಸಹ ಪಡೆದಿದ್ದಾರೆ. ಅದೇ ರೀತಿ 40 ಟೆಸ್ಟ್ ಗಳನ್ನು ಆಡಿರುವ ಯುವಿ ಬ್ಯಾಟಿಂಗ್ ನಲ್ಲಿ 1900 ರನ್ ಹಾಗೂ ಬೌಲಿಂಗ್ ನಲ್ಲಿ 9 ವಿಕೆಟ್ ಗಳಿಸಿದ್ದಾರೆ.

ಅವರು ರಣಜಿ ಟ್ರೋಪಿಯಲ್ಲಿ ಪಂಜಾಬ್ ತಂಡವನ್ನು ಪ್ರತಿನಿಧಿಸುತ್ತಿದ್ದರು. ಐಪಿಎಲ್ ಟೂರ್ನಿಯಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್,ಪುಣೆ ವಾರಿಯರ್ಸ್,ರಾಯಲ್ ಚಾಲೆಂಜರ್ಸ್ ಬೆಂಗಳೂರು,ಡೆಲ್ಲಿ ಡೇರ್ ಡೆವಿಲ್ಸ್,ಸನ್ ರೈಸರ್ಸ್ ಹೈದರಾಬಾದ್,ಮುಂಬೈ ಇಂಡಿಯನ್ಸ್ ತಂಡಗಳ ಆಟಗಾರನಾಗಿ ಅಭಿಮಾನಿಗಳನ್ನು ಮನರಂಜಿಸಿದ್ದರು. 6.2 ಅಡಿ ಎತ್ತರವಿದ್ದ  ಆಲ್ ರೌಂಡರ್ ಯುವರಾಜ್ ಸಿಂಗ್ ದೇಶಾದ್ಯಂತ ತಮ್ಮದೇ ಆದ ಅಭಿಮಾನಿಗಳನ್ನು ಸೃಷ್ಟಿಸಿಕೊಂಡಿದ್ದರು. ಇಂದು ಹೃದಯ ತುಂಬಿ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ ಬದುಕಿಗೆ ವಿದಾಯ ಹೇಳಿದಾಗ ಯುವರಾಜ್ ಸಿಂಗ್ ಅವರಿಗೆ 37 ವರ್ಷ 6 ತಿಂಗಳು ವಯಸ್ಸಾಗಿತ್ತು. ಅಂತಾರಾಷ್ಟ್ರೀಯ ಕ್ರಿಕೆಟ್ ಬದುಕು ದುರಂತ ಅಂತ್ಯವಾಗಲು ಅವರಿಗೆ ಅನಾರೋಗ್ಯವೇ ಸಮಸ್ಯೆಯಾಗಿತ್ತು. ಇಲ್ಲದಿದ್ದರೆ ಅವರು ಇನ್ನಷ್ಟು ವರ್ಷಗಳ ಕಾಲ ಫೇವರಿಟ್ ಆಲ್ ರೌಂಡರ್ ಆಗಿ ಮಿಂಚಬಹುದಾಗಿತ್ತು. ಒಟ್ಟಿನಲ್ಲಿ ಯುವರಾಜ್ ಸಿಂಗ್ ಅವರ ಆಲ್ ರೌಂಡರ್ ಕ್ರಿಕೆಟ್ ಆಟವನ್ನು ಇನ್ನುಮುಂದೆ ಟಿವಿಯಲ್ಲಿ ನೋಡಲಾಗದೆ ಕ್ರಿಕೆಟ್ ಅಭಿಮಾನಿಗಳು ಅಳುವುದೊಂದೇ ಬಾಕಿ.       

TRENDING