Wednesday, December 2, 2020
Home ಜಿಲ್ಲೆ ಭಾರಿ ಗಾಳಿ-ಮಳೆ : ಬಾಗಲಕೋಟೆ ಜಿಲ್ಲೆಯಲ್ಲಿ ಭಾರಿ ಬೆಳೆಹಾನಿ

ಇದೀಗ ಬಂದ ಸುದ್ದಿ

ನಮ್ಮ ಮೆಟ್ರೋ ಪ್ರಯಾಣಿಕರಿಗೊಂದು ಗುಡ್ ನ್ಯೂಸ್

ಬೆಂಗಳೂರು, ಡಿ. 01 : ನಮ್ಮ ಮೆಟ್ರೋ ಪ್ರಯಾಣಿಕರಿಗೆ ಬಿಎಂಆರ್‌ಸಿಎಲ್ ಸಿಹಿ ಸುದ್ದಿಯನ್ನು ನೀಡಿದೆ. ಇನ್ನು ಮುಂದೆ ಮೆಟ್ರೋ ನಿಲ್ದಾಣದಲ್ಲಿಯೇ ಸ್ಮಾರ್ಟ್ ಕಾರ್ಡ್ ರಿಚಾರ್ಜ್ ಮಾಡಬಹುದಾಗಿದೆ. ಕೋವಿಡ್ ಕಾರಣ ನಿಲ್ದಾಣದಲ್ಲಿ ರಿಚಾರ್ಜ್...

ಬಿಪಿಎಲ್ ಕುಟುಂಬಗಳಿಗೆ ಉಚಿತವಾಗಿ ಕೋವಿಡ್ ಲಸಿಕೆ :...

ಬೆಂಗಳೂರು: ಬಿಪಿಎಲ್ ಕುಟುಂಬಗಳಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಸುಧಾಕರ್ ಸಿಹಿ ಸುದ್ದಿ ನೀಡಿದ್ದು, ಉಚಿತವಾಗಿ ಕೊರೊನಾ ಲಸಿಕೆ ನೀಡಲಾಗುತ್ತದೆ ಎನ್ನುವ ಭರವಸೆ ನೀಡಿದ್ದಾರೆ.

ಉಡುಪಿ ಕೃಷ್ಣ ಮಠದ ಫಲಕದಲ್ಲಿ ಕನ್ನಡ ಮಾಯ...

ಉಡುಪಿ : ಉಡುಪಿ ಕೃಷ್ಣಮಠದ ಮಹಾದ್ವಾರದಲ್ಲಿ ಹಾಕಲಾದ ಫಲಕದಲ್ಲಿ ಕನ್ನಡ ಮಾಯವಾಗಿದೆ. ಇನ್ನೂ ನವೆಂಬರ್ ಮುಗಿದು ಒಂದು ದಿನವಾಗಿಲ್ಲ. ಆಗಲೇ ಪ್ರಸಿದ್ಧ ಉಡುಪಿ ಕೃಷ್ಣಮಠದ ಮುಖ್ಯ...

ರೈತ ಪ್ರತಿಭಟನೆ ಯಶಸ್ಸಿಗೆ ಗುರುದ್ವಾರಗಳಲ್ಲಿ ಇಂದು ವಿಶೇಷ...

ನವದೆಹಲಿ,ಡಿ.1-ಕೇಂದ್ರದ ಹೊಸ ಕೃಷಿ ನೀತಿ ವಿರೋಧಿಸಿ ರೈತರು ಹಮ್ಮಿಕೊಂಡಿರುವ ಚಳವಳಿ ಯಶಸ್ಸಿಗಾಗಿ ರಾಜಧಾನಿಯಲ್ಲಿರುವ ಗುರುದ್ವಾರಗಳಲ್ಲಿ ಇಂದು ವಿಶೇಷ ಪೂಜೆ ಸಲ್ಲಿಸಲಾಯಿತು. ರೈತರಿಗೆ ಮಾರಕವಾಗಿರುವ ಕೃಷಿ ನೀತಿಯನ್ನು ಸರ್ಕಾರ ಈ ಕೂಡಲೇ...

ರಾಜ್ಯದಲ್ಲಿ ಈಗಿರುವ ಗೋಹತ್ಯೆ ನಿಷೇಧ ಕಾಯ್ದೆ ಮುಂದುವರೆಯಲಿ,...

ಬೆಂಗಳೂರು : ರಾಜ್ಯದಲ್ಲಿ ಈ ಹಿಂದೆ ಜಾರಿಗೊಳಿಸಿದ್ದ ಗೋಹತ್ಯೆ ನಿಷೇಧ ಕಾಯ್ದೆಯೇ ಮುಂದುವರೆಯಲಿ ಹೊಸ ಕಾಯ್ದೆ ಜಾರಿಗೆ ತರುವುದು ಬೇಡ ಹೊಸ ಕಾಯ್ದೆಗೆ ನಮ್ಮ ವಿರೋಧವಿದೆ ಎಂದು ವಿರೋಧ ಪಕ್ಷದ ನಾಯಕ...

ಭಾರಿ ಗಾಳಿ-ಮಳೆ : ಬಾಗಲಕೋಟೆ ಜಿಲ್ಲೆಯಲ್ಲಿ ಭಾರಿ ಬೆಳೆಹಾನಿ

https://youtu.be/By5f9vDQDxw

ಬಾಗಲಕೋಟೆ : ನಿನ್ನೆ ರಾತ್ರಿ 11 ಗಂಟೆ ಸುಮಾರಿಗೆ ಬಾಗಲಕೋಟ ಜಿಲ್ಲಾದ್ಯಂತ ಭಾರಿ ಪ್ರಮಾಣದ ಗಾಳಿ-ಮಳೆ,ಸಿಡಿಲು-ಗುಡುಗು-ಮಿಂಚುಗಳ ಆರ್ಭಟದಿಂದಾಗಿ ರೈತರು,ಸಾರ್ವಜನಿಕರು ಭಯಭೀತರಾದರು.

ಜಮಖಂಡಿ ತಾಲ್ಲೂಕಿನ ಕಲ್ಲಹಳ್ಳಿ ಗ್ರಾಮದಲ್ಲಿ ಭಾರಿ ಪ್ರಮಾಣದ ಗಾಳಿ-ಮಳೆ,ಸಿಡಿಲು-ಗುಡುಗುವಿನಿಂದ ಬಹಳ ಬೆಳೆ ಹಾನಿಯುಂಟಾಗಿದೆ. ಕಲ್ಲಹಳ್ಳಿ ಗ್ರಾಮದ ರೈತರಾದ ಪರಶುರಾಮ ವೆಂಕಪ್ಪ ಬ್ಯಾಡರ್,ಮಲ್ಲಪ್ಪ ವೆಂಕಪ್ಪ ಬ್ಯಾಡರ್ ಇವರು 3 ಎಕರೆ ಜಮೀನು ಹೊಂದಿರುತ್ತಾರೆ. ಈ ತೋಟದಲ್ಲಿ 4 ಸಾವಿರ ಬಾಳೆ ಸಸಿಗಳನ್ನು ನೆಟ್ಟಿರುತ್ತಾರೆ. ಬಾಳೆ ಸಸಿಗಳನ್ನು ಹಚ್ಚಲು ಖರ್ಚು 3 ಎಕರೆಗೆ 4 ಲಕ್ಷ ರೂಪಾಯಿವರೆಗೆ ಅಂದಾಜು ಖರ್ಚಾಗುತ್ತದೆ ಎಂದು ರೈತ ಮಲ್ಲಪ್ಪ ಹೇಳಿದ್ದಾರೆ.

ಸರ್ವೆ ನಂಬರ್ 188/4Aರಲ್ಲಿ ಪರಶುರಾಮ್ ಬ್ಯಾಡರ್ ಅವರ ಜಮೀನು ಇದೆ. ಅದೇ ರೀತಿ ಸರ್ವೇ ನಂಬರ್ 118/4kರಲ್ಲಿ ಮಲ್ಲಪ್ಪ ಬ್ಯಾಡರ್ ಹಾಗೂ ಪರಶುರಾಮ್ ಬ್ಯಾಡರ್ ಇಬ್ಬರೂ ರೈತರು ಜಮೀನನ್ನು ಹೊಂದಿರುತ್ತಾರೆ. ಭಾರಿ ಗಾಳಿ-ಮಳೆ,ಸಿಡಿಲು-ಗುಡುಗು ಪರಿಣಾಮ ಬಾಳೆ ಬೆಳೆ ಹಾನಿಯಾಗಿದೆ. 100 ಟನ್ ಬಾಳೆ ಬೆಳೆ ಹಾನಿಯಾಗಿದೆ ಎಂದು ಅಂದಾಜಿಸಲಾಗಿದ್ದು, ಒಟ್ಟು ಇದರಿಂದ 1.2 ಲಕ್ಷ ರೂಪಾಯಿಯಷ್ಟು ಬಾಳೆ ಬೆಳೆಹಾನಿಯಾಗಿದೆ ಎಂದು ಮಾಧ್ಯಮ ಪ್ರತಿನಿಧಿಗಳಿಗೆ ತಮ್ಮ ಅಳಲನ್ನು ಹೇಳಿಕೊಂಡರು.

ಸ್ಥಳಕ್ಕೆ ಗ್ರಾಮ ಲೆಕ್ಕಾಧಿಕಾರಿ ವಿಠ್ಠಲ್ ಕೂಗಟ್ಟಿ ಭೇಟಿ ನೀಡಿ ಬಾಳೆ ಬೆಳೆ ಹಾನಿಯನ್ನು ಪರಿಶೀಲಿಸಿದರು. ತೇರದಾಳ ರೈತ ಸಂಪರ್ಕ ಕೇಂದ್ರದ ಸಹಾಯಕ ತೋಟಗಾರಿಕಾ ಅಧಿಕಾರಿ ಬಸವರಾಜ ಗೌಡನ್ನವರ ಅವರು ಕೂಡ ಬಾಳೆ ಬೆಳೆಹಾನಿಯನ್ನು ಪರಿಶೀಲಿಸಿ ಸರ್ಕಾರಕ್ಕೆ ವರದಿ ಸಲ್ಲಿಸುತ್ತೇವೆ ಎಂದು ಹೇಳಿದರು.

ಮತ್ತೊಂದೆಡೆ ರೈತರು ವಾಸಿಸುವ ಮನೆ ಮೇಲ್ಛಾವಣಿಗಳು ಹಾಗು ದೇವಾಲಯದ ಮೇಲ್ಛಾವಣಿಗಳು ಮಳೆ ಗಾಳಿಗೆ ಹಾರಿ ಭಾರಿ ಪ್ರಮಾಣದ ಹಾನಿಯುಂಟಾಗಿದೆ.

TRENDING