Thursday, November 26, 2020
Home ಜಿಲ್ಲೆ 2 ವರ್ಷ ಬಳಿಕ ಕೋರ್ಟ್ ಆದೇಶದಂತೆ FIR ದಾಖಲಿಸಿದ ಪೊಲೀಸರು!

ಇದೀಗ ಬಂದ ಸುದ್ದಿ

ಮಹಾಮಾರಿ ಕೊರೊನಾಗೆ ಸುಡಾನ್ ಮಾಜಿ ಪ್ರಧಾನಿ `ಸಾದಿಕ್...

ಜಗತ್ತನ್ನೇ ನರಳಿಸುತ್ತಿರುವ ಕೊರೊನಾ ಸೋಂಕಿನ ಎದುರು ಎಂತಹ ನಾಯಕನಾದರೂ ಮಂಡಿಯೂರಬೇಕು ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಸುಡಾನ್‌ನ ಮಾಜಿ ಪ್ರಧಾನಿ ಸಾದಿಕ್ ಅಲ್-ಮೆಹ್ದಿ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ. 84 ವರ್ಷದ ಮೆಹ್ದಿ...

ಸ್ಟೀಮರ್​ ಬೋಟ್​ನಿಂದ 8 ಟ್ರಕ್ ನದಿ ಪಾಲು

ಕೋಲ್ಕತ: ಸೋಮವಾರ ದೊಡ್ಡ ಸ್ಟೀಮರ್​ ಬೋಟ್​ನಿಂದ ಆಕಸ್ಮಿಕವಾಗಿ ನದಿ ಪಾಲಾಗಿದ್ದ ಕಾರ್ಮಿಕರು ಮತ್ತು 8 ಟ್ರಕ್​ಗಳಲ್ಲಿ ಈವರೆಗೆ ಎರಡು 3 ಟ್ರಕ್​ ಅನ್ನು ಹೊರತೆಗೆಯಲಾಗಿದ್ದು, ಕಾರ್ಮಿಕನೊಬ್ಬನ ಮೃತದೇಹ ಪತ್ತೆಯಾಗಿದೆ.

ಕೆನರಾ ಬ್ಯಾಂಕ್ ನೇಮಕಾತಿ: ಸ್ಪೆಷಲಿಸ್ಟ್ ಅಧಿಕಾರಿ ಹುದ್ದೆಗೆ...

 ಬೆಂಗಳೂರು : ಉದ್ಯೋಗಾಕಾಂಕ್ಷಿಗಳಿಗೆ ಕೆನೆರಾ ಬ್ಯಾಂಕ್ ಸಿಹಿಸುದ್ದಿ ನೀಡಿದ್ದು, 220 ಕೆನರಾ ಬ್ಯಾಂಕ್ ಸ್ಪೆಷಲಿಸ್ಟ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಹುದ್ದೆ ಹೆಸರು: ಕೆನರಾ ಬ್ಯಾಂಕ್ ಸ್ಪೆಷಲಿಸ್ಟ್...

ಫೋಟೋ ವೈರಲ್ : ಮಗಳ ಜೊತೆ ಹೆಜ್ಜೆ...

 'ತಾಯಿಗೆ ತಕ್ಕ ಮಗ' ಚಿತ್ರದ ಬಳಿಕ ಅಜಯ್ ರಾವ್ ನಟನೆಯ ಯಾವ ಚಿತ್ರವೂ ಇನ್ನು ಥಿಯೇಟರ್‌ಗೆ ಬಂದಿಲ್ಲ. ಸಾಲು ಸಾಲು ಚಿತ್ರಗಳಲ್ಲಿ ಬ್ಯುಸಿಯಿದ್ದು, ಚಿತ್ರೀಕರಣ ಮಾಡುವುದರಲ್ಲಿ ತೊಡಗಿಕೊಂಡಿದ್ದಾರೆ.

‘ಪ್ಲಾಸ್ಮಾ’ ದಾನ ಮಾಡಿ 350 ರೋಗಿಗಳ ಜೀವ...

ನವದೆಹಲಿ: ಇವರು ಮಾಡಿರುವ ಕೆಲಸ ಹೊಗಳಿಕೆಗೂ ಮೀರಿದ್ದು, ಏಕೆಂದರೆ ದೆಹಲಿ ಪೊಲೀಸ್ ಸಿಬ್ಬಂದಿ ತಮ್ಮ ಪ್ಲಾಸ್ಮಾ ದಾನ ಮಾಡುವ ಮೂಲಕ 350 ಮಂದಿಯ ಜೀವ ಉಳಿಸಿದ್ದಾರೆ. 42...

2 ವರ್ಷ ಬಳಿಕ ಕೋರ್ಟ್ ಆದೇಶದಂತೆ FIR ದಾಖಲಿಸಿದ ಪೊಲೀಸರು!

ಮಂಡ್ಯ : ದಾಯಾದಿ ಕಲಹ ವಿಚಾರದಲ್ಲಿ ಕಡೆಗೂ ಖ್ಯಾತ ಸುಗಮ ಸಂಗೀತ ಗಾಯಕ ಕಿಕ್ಕೇರಿ ಕೃಷ್ಣಮೂರ್ತಿ ವಿರುದ್ದ 20 ತಿಂಗಳ ಬಳಿಕ ಮಂಡ್ಯ ಕಿಕ್ಕೇರಿ ಪೊಲೀಸ್ ಠಾಣೆಯಲ್ಲಿ FIR ದಾಖಲಿಸಲಾಗಿದೆ.

ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಹಿರಿಯ ಶ್ರೇಣಿ ನ್ಯಾಯಾಲಯದ ಆದೇಶದ ಮೇರೆಗೆ ಕೃಷ್ಣಮೂರ್ತಿ ವಿರುದ್ದ ಕಿಕ್ಕೇರಿ ಪೊಲೀಸರು FIR ದಾಖಲಿಸಿದ್ದಾರೆ. 2017ರಲ್ಲೇ FIR ದಾಖಲಿಸಬೇಕಿದ್ದ ಕಿಕ್ಕೇರಿ ಪೊಲೀಸರು ಕಡೆಗೂ ನ್ಯಾಯಾಲಯದ ಆದೇಶದ ಮೇರೆಗೆ FIR ದಾಖಲಿಸುವಂತಾಯಿತು. ದಾಯಾದಿ ಕಲಹದ ವಿಚಾರದಲ್ಲಿ 2017ರಲ್ಲಿ ಕಿಕ್ಕೇರಿ ಕೃಷ್ಣಮೂರ್ತಿ ವಿರುದ್ದ ಪ್ರಕರಣ ದಾಖಲಿಸದೆ  ಪ್ರಕರಣ ಮುಚ್ಚಿ ಹಾಕಿದ್ದ ಪೊಲೀಸರು ಭಾರೀ ಟೀಕೆಗೊಳಗಾಗಿದ್ದರು. ಸ್ಥಳೀಯ ಪೊಲೀಸರ ಮೇಲೆ ರಾಜಕೀಯ ಒತ್ತಡ ತಂದು ಪ್ರಕರಣ ಹಾಕದಂತೆ ಯಶಸ್ವಿಯಾಗಿದ್ದ ಕಿಕ್ಕೇರಿ ಕೃಷ್ಣಮೂರ್ತಿಯೂ ಟೀಕೆಗಳಿಗೆ ಗುರಿಯಾಗಿದ್ದರು. ಪೊಲೀಸರ ಈ ಪಕ್ಷಪಾತ ಧೋರಣೆ ವಿರುದ್ದ ನ್ಯಾಯಾಲಯದ ಮೊರೆ ಹೋಗಿದ್ದ ದಾಯಾದಿ ರಂಗರಾಜು ಹೋರಾಟ ನಡೆಸಿದ್ದರು. ದಿನಾಂಕ-5/7/2017 ರಂದು ಹಣಕಾಸಿನ ವಿಚಾರವಾಗಿ ದಾಯಾದಿ ರಂಗರಾಜು ಮತ್ತು ಕೃಷ್ಣಮೂರ್ತಿ ನಡುವೆ ನಡೆದಿದ್ದ ಕಲಹದಲ್ಲಿ ದಾಯಾದಿ ರಂಗರಾಜು ಮೇಲೆ ಕೃಷ್ಣಮೂರ್ತಿ ಹಲ್ಲೆ ನಡೆಸಿದ್ದ ಸಂಬಂಧ ದೂರು ದಾಖಲಿಸಲಾಗಿತ್ತು. ಆದರೆ ಆ ದಿನ ಪೊಲೀಸರಿಗೆ ದೂರು ನೀಡಿದರೂ ಪ್ರಕರಣದ ದೂರುದಾತ ದಾಯಾದಿಗೆ NCR ನೀಡಿ ಪ್ರಕರಣ ಮುಚ್ಚಿ ಹಾಕಿದ್ದ ಪೊಲೀಸರು ಟೀಕೆಗೆ ಒಳಗಾಗಿದ್ದರು. ಪ್ರಕರಣ ಮುಚ್ಚಿ ಹಾಕಿದ್ದ ಪೊಲೀಸರ ವಿರುದ್ದ ನ್ಯಾಯಾಲಯದ ಮೊರೆ ಹೋಗಿದ್ದ ದೂರುದಾರ ದಾಯಾದಿ ರಂಗರಾಜು ಹೋರಾಟದ ಫಲವಾಗಿ

ಕೋರ್ಟ್ ಆದೇಶದ ಮೇರೆಗೆ 2019ರ ಮಾರ್ಚ್ 28 ರಂದು FIR ದಾಖಲಿಸಿದರೂ ಮತ್ತೆ ಪ್ರಕರಣ ಮುಚ್ಚಿ ಹಾಕಲು ಪೊಲೀಸರ ಯತ್ನ ನಡೆಸಿದ್ದರು. ಪೊಲೀಸರಿಗೆ ಚಾಟಿ ಬೀಸಿದ ಕೆ.ಆರ್.ಪೇಟೆಯ ಹಿರಿಯ ಶ್ರೇಣಿ ನ್ಯಾಯಾಲಯ ಜೂನ್ 12 ರೊಳಗೆ ವಿಚಾರಣೆ ನಡೆಸಿ ಅಂತಿಮ ವರದಿ ಸಲ್ಲಿಸಲು ಪೊಲೀಸರಿಗೆ ಸೂಚನೆ ನೀಡಿತು.

TRENDING