Sunday, November 29, 2020
Home ಜಿಲ್ಲೆ ಗಡಿಭಾಗದ ಗ್ರಾಮಗಳಿಗೆ ನೀರಿನ ಆಸರೆಯಾದ ಶಿರಗುಪ್ಪಿ ಗ್ರಾ.ಪಂ

ಇದೀಗ ಬಂದ ಸುದ್ದಿ

ವಿಶ್ವದಾದ್ಯಂತ 6.20 ಕೋಟಿ ದಾಟಿದ ಕೊರೋನಾ ಪ್ರಕರಣಗಳ...

ವಾಷಿಂಗ್ಟನ್: ವಿಶ್ವದಾದ್ಯಂತ ಕೊರೊನಾವೈರಸ್ ಪ್ರಕರಣಗಳ ಸಂಖ್ಯೆ 62,094,127ಕ್ಕೆ ಏರಿಕೆಯಾಗಿದೆ ಎಂದು ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯ ವರದಿಯಲ್ಲಿ ತಿಳಿಸಿದೆ. ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದ ಕೊರೋನಾವೈರಸ್ ಸಂಪನ್ಮೂಲ ಕೇಂದ್ರದ...

`LPG’ ಗ್ರಾಹಕರಿಗೆ ಇಲ್ಲಿದೆ ಮಹತ್ವದ ಮಾಹಿತಿ

ಎಲ್ ಪಿಜಿ ಗ್ಯಾಸ್ ಮೇಲಿನ ಸಬ್ಸಿಡಿ ಬಗ್ಗೆ ಗ್ರಾಹಕರ ಮನಸ್ಸಿನಲ್ಲಿ ಅನೇಕ ಪ್ರಶ್ನೆಗಳು ಮೂಡುತ್ವೆ. ಅದ್ರಲ್ಲೂ ಗ್ರಾಹಕರಲ್ಲಿ ಒಂದು ಪ್ರಶ್ನೆ ಯಾವಾಗ್ಲೂ ಇದ್ದೇ ಇರುತ್ತೆ. ಅದೆನೇಂದ್ರೆ, ಎಷ್ಟು ಸಬ್ಸಿಡಿ ಮೊತ್ತವನ್ನ...

ಬಿಜೆಪಿ ಗೆದ್ದರೆ ಹೈದರಾಬಾದ್ ಗೆ `ಭಾಗ್ಯನಗರ’ ವೆಂದು...

ತೆಲಂಗಾಣ : ಹೈದರಾಬಾದ್ ನ್ನು 'ಭಾಗ್ಯ ನಗರ' ಎಂದು ಮರು ನಾಮಕರಣ ಮಾಡುವುದರ ಬಗ್ಗೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಪ್ರತಿಕ್ರಿಯೆ ನೀಡಿದ್ದಾರೆ. ಜಿಎಚ್‌ಎಂಸಿ...

ಗ್ರಾಮ ಪಂಚಾಯಿತಿಯಲ್ಲಿ ಪ್ರಮಾಣಪತ್ರಕ್ಕೆ ಹೊಸ ನಿಯಮ ಜಾರಿ

 ಬೆಂಗಳೂರು: ಗ್ರಾಮ ಪಂಚಾಯಿತಿ ಪ್ರಮಾಣಪತ್ರಕ್ಕೆ ಹೊಸ ನಿಯಮ ಜಾರಿಗೆ ತಂದಿದ್ದು, ಆರ್.ಡಿ.ಪಿ.ಆರ್. ಇಲಾಖೆ ಮಹತ್ವದ ಆದೇಶ ಹೊರಡಿಸಿದೆ. ಡಿಜಿಟಲ್ ಸಹಿ ಇದ್ದರಷ್ಟೇ ಪ್ರಮಾಣ ಪತ್ರಕ್ಕೆ ಮಾನ್ಯತೆ ಇರುತ್ತದೆ ಎಂದು ಹೇಳಲಾಗಿದೆ.

ಮಿಜೋರಾಂ : ರಾಜ್ಯದ ಮೊದಲ ಸೈಬರ್ ಕ್ರೈಂ...

 ಐಜ್ವಾಲ್, ನ.29- ಮಿಜೋರಾಂ ಪೊಲೀಸ್ ಮಹಾ ನಿರ್ದೇಶಕರ ಕಚೇರಿಯಲ್ಲಿ ಸೈಬರ್ ಕ್ರೈಂ ಪೊಲೀಸ್ ಠಾಣೆಯನ್ನು ಸ್ಥಾಪಿಸಲಾಗಿದೆ. ರಾಜ್ಯದ ಮೊದಲ ಸೈಬರ್ ಪೊಲೀಸ್ ಠಾಣೆಯನ್ನು ಮಿಜೋರಾಂ ಡಿಜಿ ಎಸ್.ಬಿ.ಕೆ.ಸಿಂಗ್ ಇಂದು ಲೋಕಾರ್ಪಣೆ...

ಗಡಿಭಾಗದ ಗ್ರಾಮಗಳಿಗೆ ನೀರಿನ ಆಸರೆಯಾದ ಶಿರಗುಪ್ಪಿ ಗ್ರಾ.ಪಂ

ಕಾಗವಾಡ : ಕಳೆದ ಮೂರು ತಿಂಗಳಿಂದ ಅಥಣಿ,ಕಾಗವಾಡ ತಾಲೂಕಿನ ಕೃಷ್ಣಾ ನದಿ ತೀರದ ಗ್ರಾಮಗಳಲ್ಲಿ ಕುಡಿಯುವ ನೀರಿಗೆ ತೀವ್ರ ಹಾಹಾಕಾರ ಉಂಟಾಗಿದೆ. ಆದರೆ, ಇಲ್ಲೊಂದು ಗ್ರಾಮ ತನ್ನ ಗ್ರಾಮಕ್ಕೆ ಮಾತ್ರ ನೀರು ಪೂರೈಸುವುದರ ಜೊತೆಗೆ ಸುತ್ತಮುತ್ತಲಿನ ಹತ್ತಾರು ಹಳ್ಳಿಗಳಿಗೆ ನೀರು ಸರಬರಾಜು ಮಾಡುವುದರ ಜೊತೆಗೆ ಇಲ್ಲಿನ ಗ್ರಾಮ ಪಂಚಾಯತಿ ಸದಸ್ಯರು ನೀರು ಪೂರೈಸುವುದರ ಮೂಲಕ ಮಾನವೀಯತೆ ಮೆರೆದಿದ್ದಾರೆ. ಹೌದು, ಇಂತಹದ್ದೊಂದು ಗ್ರಾಮವನ್ನು ನೀವು ಸದ್ಯದ ಪರಿಸ್ಥಿತಿಯಲ್ಲಿ ನೋಡಿರಲಿಕ್ಕಿಲ್ಲ, ಈ ಗ್ರಾಮದಲ್ಲಿ ಕುಡಿಯುವ ನೀರಿಗೆ ಯಾವುದೇ ರೀತಿ ಹಾಹಾಕಾರವಿಲ್ಲ. ಅದರ ಜೊತೆಗೆ ಸುತ್ತಮುತ್ತ ಗ್ರಾಮಕ್ಕೂ ಈ ಗ್ರಾಮ ಆಸರೆಯಾಗಿದೆ. ಹಾಗಾದರೆ ಈ ಗ್ರಾಮ ಯಾವುದಂತೀರಾ? ಅದುವೇ ಕಾಗವಾಡ ತಾಲೂಕಿನ ಶಿರಗುಪ್ಪಿ ಎಂಬ ಗ್ರಾಮ.

ಈ ಗ್ರಾಮದಲ್ಲಿ ಮಾತ್ರ ಕುಡಿಯುವ ನೀರಿಗೆ ಸ್ವಲ್ಪವೂ ಸಮಸ್ಯೆಯೇ ಇಲ್ಲ. ಎಲ್ಲರಿಗೂ ಶುದ್ಧ ನೀರು ಸಿಗುತ್ತಿದೆ. ಪಕ್ಕದ ಮಹಾರಾಷ್ಟ್ರ ರಾಜ್ಯದ ಕೆಲ ಹಳ್ಳಿಗಳ ಜನರೂ ಶಿರಗುಪ್ಪಿಯಿಂದ ಕುಡಿಯಲು ಶುದ್ಧ ನೀರು ಒಯ್ಯುವುದುಂಟು! 

ಆದರೆ ಈ ಭಾಗದ ಜೀವನದಿ ಕೃಷ್ಣಾ ಬತ್ತಿದ್ದರಿಂದ ಬಹುತೇಕ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ. ಜನ ಟ್ಯಾಂಕರ್‌ ನೀರಿಗೆ ಮೊರೆ ಹೋಗಿದ್ದಾರೆ. ಈ ನೀರು ಶುದ್ಧವಾಗಿರದೇ ಇದ್ದರೂ ಅನಿವಾರ್ಯವಾಗಿ ಕುಡಿಯುತ್ತಿದ್ದಾರೆ. ಹೀಗಿರುವಾಗ ಶಿರುಗುಪ್ಪಿ ಗ್ರಾಮದ ಚಿತ್ರಣವೇ ಬೇರೆಯಾಗಿದೆ.

ಮಹಾರಾಷ್ಟ್ರ ಸರಕಾರ ರಾಜಾಪುರ ಜಲಾಶಯದಿಂದ ತನ್ನ ವ್ಯಾಪ್ತಿಯ ಗ್ರಾಮಗಳ ಜನರಿಗಾಗಿ ಕೃಷ್ಣಾ ನದಿಗೆ ಬೇಸಿಗೆಯಲ್ಲಿ ನಿರಂತರವಾಗಿ ನೀರು ಹರಿಸುತ್ತಿರುತ್ತದೆ. ಕೃಷ್ಣಾ ನದಿಗೆ ಒಂದು ದಂಡೆಯಲ್ಲಿ ಮಹಾರಾಷ್ಟ್ರದ ಹಳ್ಳಿಗಳು ಹಾಗೂ ಇನ್ನೊಂದು ಕಡೆ ಕರ್ನಾಟಕದ ಶಿರಗುಪ್ಪಿ ಸೇರಿದಂತೆ ಇತರ ಗ್ರಾಮಗಳಿವೆ. ಜಲಾಶಯದಿಂದ ಬಿಟ್ಟ ನೀರು ಮಂಗಾವತಿ ಮೂಲಕ ಜುಗೂಳ ಗ್ರಾಮದ ವರೆಗೆ ಬರುತ್ತದೆ. ಶಿರಗುಪ್ಪಿಗೆ ನೀರು ಪೂರೈಸುವ ಜಾಕ್‌ವೆಲ್‌ ಜುಗೂಳ ಗ್ರಾಮದಲ್ಲಿದ್ದು ಹೀಗಾಗಿ ಸಾಕಷ್ಟು ಪ್ರಮಾಣದಲ್ಲಿ ನೀರು ಸಿಗುತ್ತದೆ. ಪ್ರತಿದಿನ ಸುಮಾರು 50 ಲಕ್ಷ ಲೀಟರ್‌ ನೀರನ್ನು ಶುದ್ಧೀಕರಿಸಿ ಶಿರಗುಪ್ಪಿ ಗ್ರಾಮಕ್ಕೆ ಪೂರೈಕೆ ಮಾಡಲಾಗುತ್ತದೆ. ಅಲ್ಲದೇ ಸಮೀಪದ ಮಾಂಜರಿ,ಇಂಗಳಿ,ಯಡೂರ,ಕಾಗವಾಡ,ಶೇಡಬಾಳ,ಉಗಾರ ಹಾಗೂ ಮಹಾರಾಷ್ಟ್ರದ ಅಲಾಸ,ಬುಬನಾಳ,ಶಿರೋಳ, ಸೇರಿದಂತೆ ಅನೇಕ ಗ್ರಾಮದ ಜನರು ಇಲ್ಲಿಂದ ಶುದ್ಧ ನೀರು ಒಯ್ಯುತ್ತಾರೆ. 20 ಲೀಟರ್ ಕ್ಯಾನ್‌ಗೆ 30 ರೂ. ನಿಗದಿ ಪಡಿಸಲಾಗಿದೆ. ಈ ನೀರು ಶುದ್ಧವಾಗಿರುವುದಲ್ಲದೇ ಕೋಲ್ಡ್‌ ಆಗಿರುವುದು ವಿಶೇಷ.

ಅದರಂತೆ ಕರ್ನಾಟಕದ ಯಾವುದಾದರೂ ಗ್ರಾಮ ಪಂಚಾಯತಿಯಲ್ಲಿ ಕೋಲ್ಡ್ ನೀರು ಸರಬರಾಜು ಮಾಡುತ್ತಿದ್ದರೆ ಅದು ಕಾಗವಾಡ ತಾಲೂಕಿನ ಗ್ರಾಮ ಪಂಚಾಯತಿ ಎಂದು ಹೆಮ್ಮೆಯಿಂದ ಇಲ್ಲಿನ ಗ್ರಾಮ ಪಂಚಾಯತಿ ಸದಸ್ಯ ರಾಮಗೌಡಾ ಪಾಟೀಲ ಹೇಳುತ್ತಾರೆ.

ಕೃಷ್ಣಾ ನದಿಯಿಂದ ಪಂಪ್‌ಸೆಟ್‌ ಮೂಲಕ ನೀರೆತ್ತಿ ನೀರನ್ನು ಶುದ್ಧೀಕರಿಸಲಾಗುತ್ತದೆ. ಜರ್ಮನ್‌ ದೇಶದಲ್ಲಿ ನಿರ್ಮಿಸಿದ ನೀರಿನ ಶುದ್ಧೀಕರಣ ಘಟಕ ಸ್ಥಾಪಿಸಲಾಗಿದ್ದು, ಇಂದು ಸಂಪೂರ್ಣ ಆಟೋಮೆಟಿಕ್‌ ತಂತ್ರಜ್ಞಾನ ಹೊಂದಿದೆ. ಅದೇ ರೀತಿ ನೀರಿನ ಟ್ಯಾಂಕರುಗಳಲ್ಲಿ ನೀರು ಭರ್ತಿ ಆದ ಮೇಲೆ ನದಿ ತೀರದ ಮೋಟಾರುಗಳು ಅಟೋಮೆಟಿಕ್ ಬಂದ್ ಆಗುತ್ತವೆ. ಅದರಂತೆ ನೀರನ್ನು ಪೋಲು ಆಗದಂತೆ ನಿಗಾ ವಹಿಸಲು ಹತ್ತಕ್ಕೂ ಹೆಚ್ಚು ಕಾರ್ಮಿಕರನ್ನು ಸಹ ನೇಮಿಸಲಾಗಿದೆ.

ಈ ಭಾಗದ ಗ್ರಾಮಗಳಿಗೆ ಆಸರೆಯಾದ ಶಿರಗುಪ್ಪಿ ಗ್ರಾಮ ಪಂಚಾಯತಿ ಕಳೆದ ಮೂರು ತಿಂಗಳಿನಿಂದ ಕೃಷ್ಣಾ ನದಿ ಸಂಪೂರ್ಣವಾಗಿ ಬತ್ತಿದೆ, ಅಲ್ಲಿಂದ ಇಲ್ಲಿಯವರೆಗೂ ಶಿರಗುಪ್ಪಿ ಗ್ರಾಮ ಪಂಚಾಯತಿ ನೀರಿನ ವ್ಯವಸ್ಥೆ ಮಾಡಿರುವುದು ಈ ಭಾಗದ ಗ್ರಾಮಗಳಿಗೆ ಶಿರಗುಪ್ಪಿ ಗ್ರಾಮ ಆಸರೆಯಾಗಿದೆ.

TRENDING