Sunday, November 29, 2020
Home ಜಿಲ್ಲೆ ಮನೆಗೊಂದು ಮಗು, ಮನೆಗೊಂದು ಮರ

ಇದೀಗ ಬಂದ ಸುದ್ದಿ

ವಿಶ್ವದಾದ್ಯಂತ 6.20 ಕೋಟಿ ದಾಟಿದ ಕೊರೋನಾ ಪ್ರಕರಣಗಳ...

ವಾಷಿಂಗ್ಟನ್: ವಿಶ್ವದಾದ್ಯಂತ ಕೊರೊನಾವೈರಸ್ ಪ್ರಕರಣಗಳ ಸಂಖ್ಯೆ 62,094,127ಕ್ಕೆ ಏರಿಕೆಯಾಗಿದೆ ಎಂದು ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯ ವರದಿಯಲ್ಲಿ ತಿಳಿಸಿದೆ. ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದ ಕೊರೋನಾವೈರಸ್ ಸಂಪನ್ಮೂಲ ಕೇಂದ್ರದ...

`LPG’ ಗ್ರಾಹಕರಿಗೆ ಇಲ್ಲಿದೆ ಮಹತ್ವದ ಮಾಹಿತಿ

ಎಲ್ ಪಿಜಿ ಗ್ಯಾಸ್ ಮೇಲಿನ ಸಬ್ಸಿಡಿ ಬಗ್ಗೆ ಗ್ರಾಹಕರ ಮನಸ್ಸಿನಲ್ಲಿ ಅನೇಕ ಪ್ರಶ್ನೆಗಳು ಮೂಡುತ್ವೆ. ಅದ್ರಲ್ಲೂ ಗ್ರಾಹಕರಲ್ಲಿ ಒಂದು ಪ್ರಶ್ನೆ ಯಾವಾಗ್ಲೂ ಇದ್ದೇ ಇರುತ್ತೆ. ಅದೆನೇಂದ್ರೆ, ಎಷ್ಟು ಸಬ್ಸಿಡಿ ಮೊತ್ತವನ್ನ...

ಬಿಜೆಪಿ ಗೆದ್ದರೆ ಹೈದರಾಬಾದ್ ಗೆ `ಭಾಗ್ಯನಗರ’ ವೆಂದು...

ತೆಲಂಗಾಣ : ಹೈದರಾಬಾದ್ ನ್ನು 'ಭಾಗ್ಯ ನಗರ' ಎಂದು ಮರು ನಾಮಕರಣ ಮಾಡುವುದರ ಬಗ್ಗೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಪ್ರತಿಕ್ರಿಯೆ ನೀಡಿದ್ದಾರೆ. ಜಿಎಚ್‌ಎಂಸಿ...

ಗ್ರಾಮ ಪಂಚಾಯಿತಿಯಲ್ಲಿ ಪ್ರಮಾಣಪತ್ರಕ್ಕೆ ಹೊಸ ನಿಯಮ ಜಾರಿ

 ಬೆಂಗಳೂರು: ಗ್ರಾಮ ಪಂಚಾಯಿತಿ ಪ್ರಮಾಣಪತ್ರಕ್ಕೆ ಹೊಸ ನಿಯಮ ಜಾರಿಗೆ ತಂದಿದ್ದು, ಆರ್.ಡಿ.ಪಿ.ಆರ್. ಇಲಾಖೆ ಮಹತ್ವದ ಆದೇಶ ಹೊರಡಿಸಿದೆ. ಡಿಜಿಟಲ್ ಸಹಿ ಇದ್ದರಷ್ಟೇ ಪ್ರಮಾಣ ಪತ್ರಕ್ಕೆ ಮಾನ್ಯತೆ ಇರುತ್ತದೆ ಎಂದು ಹೇಳಲಾಗಿದೆ.

ಮಿಜೋರಾಂ : ರಾಜ್ಯದ ಮೊದಲ ಸೈಬರ್ ಕ್ರೈಂ...

 ಐಜ್ವಾಲ್, ನ.29- ಮಿಜೋರಾಂ ಪೊಲೀಸ್ ಮಹಾ ನಿರ್ದೇಶಕರ ಕಚೇರಿಯಲ್ಲಿ ಸೈಬರ್ ಕ್ರೈಂ ಪೊಲೀಸ್ ಠಾಣೆಯನ್ನು ಸ್ಥಾಪಿಸಲಾಗಿದೆ. ರಾಜ್ಯದ ಮೊದಲ ಸೈಬರ್ ಪೊಲೀಸ್ ಠಾಣೆಯನ್ನು ಮಿಜೋರಾಂ ಡಿಜಿ ಎಸ್.ಬಿ.ಕೆ.ಸಿಂಗ್ ಇಂದು ಲೋಕಾರ್ಪಣೆ...

ಮನೆಗೊಂದು ಮಗು, ಮನೆಗೊಂದು ಮರ

ಬಾಗಲಕೋಟ : ಪ್ರತಿಯೊಬ್ಬ ಮನುಷ್ಯನು ಮರವನ್ನು ತಮ್ಮ ಮಗುವಿನಂತೆ ಪ್ರೀತಿಯಿಂದ ಮರವನ್ನು ಬೆಳೆಸಿದರೆ ಆ ಮರವು ನಮ್ಮನ್ನು ರಕ್ಷಿಸುತ್ತದೆ ಎಂದು ರಬಕವಿ ಬನಹಟ್ಟಿ ನಗರಸಭೆಯ ಪೌರಾಯುಕ್ತರು ಆರ್.ಎಂ.ಕೊಡುಗೆ ಹೇಳಿದ್ದಾರೆ.

ಬಾಗಲಕೋಟ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ರಬಕವಿ ಸರ್ವೆ ನಂಬರ್ 64 ರಲ್ಲಿರುವ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ನಗರಸಭೆಯ ಮತ್ತು ಅರಣ್ಯ ಇಲಾಖೆಯ ಸಹಭಾಗಿತ್ವದಲ್ಲಿ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ 600 ಸಸಿಗಳನ್ನು ಹಚ್ಚಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ನಗರಸಭೆ ಪೌರಾಯುಕ್ತ ಆರ್.ಎಂ.ಕೊಡುಗೆ “ಮನುಷ್ಯ ಕೇವಲ ಸಂಪತ್ತನ್ನು ಗಳಿಸಿದರೆ ಸಾಲದು,ಮನೆಗೊಂದು ಮರವನ್ನು ಬೆಳೆಸಿ ಸುಂದರ ಪರಿಸರವನ್ನು ನಿರ್ಮಿಸುವ ಜವಾಬ್ದಾರಿ ಪ್ರತಿಯೊಬ್ಬ ನಾಗರಿಕನ ಕರ್ತವ್ಯ, ಪ್ರತಿಯೊಂದು ಮನೆಯ ಮುಂದೆ ಒಂದು ಮರವನ್ನು ಬೆಳೆಸಿ ಅದಕ್ಕೆ ಸುಂದರವಾದ ಹೆಸರನ್ನು ಇಟ್ಟು ಮನೆಯ ಮಗನಂತೆ ಸಾಕಿದರೆ ಮುಂದು ದಿನ ಬೆಳೆದು ನಿಂತ ಆ ಮರವು ನಮಗೆ ನೆರಳಾಗಿ ಹಣ್ಣಾಗಿ ಸುಂದರ ಪರಿಸರವಾಗಿ ಕೊಡುತ್ತದೆ” ಎಂದರು.

ಪ್ರತಿಯೊಬ್ಬರು ಗಿಡವನ್ನು ಬೆಳೆಸುವ ಕೆಲಸವನ್ನು ಮಾಡಬೇಕು ಹಾಳಾಗಿ ಹೋದ ಗಿಡಗಳನ್ನು ಸ್ಮರಿಸಬೇಕು,ಹಾಳಾಗಿ ಹೋಗದಂತೆ ದಿನನಿತ್ಯ ನೀರನ್ನು ಉಳಿಸಿ ಬೆಳೆಸಬೇಕು. ಹಚ್ಚಹಸಿರಿನಿಂದ ಕಂಗೊಳಿಸಿದರೆ ನೆತ್ತರ ಮೇಲಿರುವ ಆಕಾಶದಿಂದ ಭೂಮಿಗೆ ಧರೆಗಿಳಿದು ಬರುವ ಗಂಗೆ ಸಾರ್ವಜನಿಕರ ದಾಹ ತೀರಿಸುವ ಗಂಗಾಮಾತೆ ಅವಳನ್ನು ಹಚ್ಚಹಸಿರ ಗಿಡಗಳಿಂದ ಬರಮಾಡಿಕೊಳ್ಳುವ ಜವಾಬ್ದಾರಿ ಪ್ರತಿಯೊಬ್ಬ ನಾಗರಿಕನ ಕರ್ತವ್ಯ. ಪರಿಸರ ರಕ್ಷಣೆ ಮಾನವನ ಸಂರಕ್ಷಣೆ ಎಲ್ಲಿ ಪರಿಸರ  ಸುಂದರವಾಗಿರುತ್ತದೆ ಅಲ್ಲಿ ರೋಗವು ಮಾಯವಾಗುತ್ತದೆ. ಪ್ರತಿಯೊಬ್ಬರೂ ಸಹ ಹೃದಯವಂತಿಕೆ ಇಂದ ಸಸಿಗಳನ್ನು ನೆಟ್ಟು ಅವುಗಳನ್ನು ಬೆಳೆಸುವ ಕೆಲಸವನ್ನು ಮಾಡಬೇಕೆಂದು ಪೌರಾಯುಕ್ತರು ಆರ್.ಎಂ.ಕೊಡುಗೆ ಹೇಳಿದರು.

ಇದೇ ಸಂದರ್ಭದಲ್ಲಿ ರಬಕವಿ-ಬನಹಟ್ಟಿ ಸಿವಿಲ್ ನ್ಯಾಯಾಧೀಶರಾದ ಶ್ರೀಮತಿ ಎಚ್.ಶ್ವೇತಾ ಮತ್ತು ಶ್ರೀಮತಿ ರೂಪ ಗೋಣಿ,  ಅರಣ್ಯ ಅಧಿಕಾರಿಗಳಾದ ಮಲ್ಲು ನಾವಿ,ಎಸ್.ಡಿ.ಬಬಲಾದಿ,ಅಕ್ಷತಾ ಜಂಬಗಿ,ಸಂತೋಷ ರಾಥೋಡ,ಸರ್ಕಾರಿ ಪಾಲಿಟೆಕ್ನಿಕ್ ಪ್ರಾಚಾರ್ಯರಾದ ದೊಡ್ಡಮನಿ,ಶಿಕ್ಷಣ ಅಧಿಕಾರಿಗಳಾದ ಬಿ.ಆರ್.ಓ ವಿಜಯಕುಮಾರ ವಂದಾಲ ಮತ್ತು ಬುರ್ಲಿ,ತೇರದಾಳ ಪುರಸಭೆಯ ಮುಖ್ಯ ಅಧಿಕಾರಿ ಮಹಾವೀರ ಜೋರೆನ್ನವರ,ನಗರಸಭೆಯ ಅಧಿಕಾರಿಗಳಾದ ವಿದ್ಯಾಸಾಗರ ಕಲಾದಗಿ, ಮುಗುಳಕೋಡ,ದೊಡ್ಡಮನಿ ESI ಪೂಜಾರಿ ಸೇರಿದಂತೆ ವಿವಿಧ ಇಲಾಖೆಯ ಸಿಬ್ಬಂದಿ ವರ್ಗದವರು ಹಾಜರಿದ್ದರು.

TRENDING