Monday, November 30, 2020
Home ಜಿಲ್ಲೆ ಬೆಂಗಳೂರು ನೀಟ್ ಫಲಿತಾಂಶ ಪ್ರಕಟ: ರಾಜ್ಯಕ್ಕೆ ಫಣೀಂದ್ರ ಫಸ್ಟ್

ಇದೀಗ ಬಂದ ಸುದ್ದಿ

ಮುಂಬೈ-ನಾಗರಕೋಯಿಲ್ ರೈಲು ಮಾರ್ಗ ಬದಲು

 ಕಲಬುರಗಿ, ನ. 29 : ಮುಂಬೈ-ನಾಗರಕೋಯಿಲ್ ರೈಲು ಮಾರ್ಗ ಬದಲಾವಣೆ ಮಾಡಲಾಗಿದ್ದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಕೋವಿಡ್ ಪರಿಸ್ಥಿತಿ ಬಳಿಕ ಸಂಚಾರ ನಿಲ್ಲಿಸಿದ್ದ ರೈಲು ಡಿಸೆಂಬರ್ 7ರಿಂದ ಆರಂಭವಾಗಲಿದೆ.

ಲಿಫ್ಟ್​ನ ಎರಡು ಬಾಗಿಲ ಮಧ್ಯೆ ಸಿಲುಕಿ ಐದು...

ಮುಂಬೈ: ಲಿಫ್ಟ್​, ಎಸ್ಕಲೇಟರ್​ಗಳು ನಮ್ಮ ಜೀವನವನ್ನು ಎಷ್ಟು ಸುಲಭಗೊಳಿಸುತ್ತವೆಯೋ ಅಷ್ಟೇ ಅಪಾಯಕಾರಿ ಕೂಡ ಹೌದು. ಅದರಲ್ಲೂ ಪುಟ್ಟ ಮಕ್ಕಳಿರುವ ಕುಟುಂಬ ಲಿಫ್ಟ್​ ಬಳಸುವಾಗ ಎಷ್ಟೇ ಜಾಗೃತವಾಗಿದ್ದರೂ ಸಾಲದು. ಪೋಷಕರ ಅಜಾಗರೂಕತೆಯಿಂದಾಗಿ ಐದು...

ಭಾರತೀಯ ಪೋಸ್ಟ್ ಗಳ ಗುರಿಯಾಗಿಸಿಕೊಂಡು ಮತ್ತೆ ಪಾಕ್...

 ಶ್ರೀನಗರ: ಇಂಡೋ-ಪಾಕ್ ಗಡಿ ಎಲ್ ಒಸಿಯಲ್ಲಿ ಮತ್ತೆ ಪಾಕಿಸ್ತಾನ ಸೇನೆ ಉದ್ಧಟತನ ಮುಂದುವರೆದಿದ್ದು, ಮತ್ತೆ ಭಾರತೀಯ ಪೋಸ್ಟ್ ಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದೆ. ಗಡಿಯಲ್ಲಿನ ಭಾರತೀಯ ಸೇನೆಯ...

ಅಫ್ಘಾನಿಸ್ತಾನದಲ್ಲಿ ಪುಲ್ವಾಮ ಮಾದರಿಯ ದಾಳಿ : 30...

ಕಾಬೂಲ್: ಅಫ್ಘಾನಿಸ್ತಾನದ ಸೇನಾ ನೆಲೆಯ ಬಳಿ ನಡೆದ ಆತ್ಮಾಹುತಿ ಕಾರ್ ಬಾಂಬ್ ದಾಳಿಯಲ್ಲಿ ಕನಿಷ್ಠ 30 ಭದ್ರತಾ ಸಿಬ್ಬಂದಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪೂರ್ವ ಪ್ರಾಂತ್ಯದ...

SBI ನಲ್ಲಿ ಮಕ್ಕಳ ಖಾತೆ ತೆರೆಯುವುದು ಹೇಗೆ.?...

ಬ್ಯಾಂಕ್ ಖಾತೆ ತೆರೆಯಲು ವಯಸ್ಸಿನ ನಿರ್ಬಂಧವೇನೂ ಇಲ್ಲ ಎಂದು ಸಾರ್ವಜನಿಕ ಸ್ವಾಮ್ಯದ ಅತಿ ದೊಡ್ಡ ಬ್ಯಾಂಕ್ ಆದ ಎಸ್‌ಬಿಐ ತೋರುತ್ತಿದೆ. ಮಕ್ಕಳಿಗೆಂದೇ ವಿಶೇಷವಾದ ಉಳಿತಾಯ ಖಾತೆಯ ಆಯ್ಕೆಗಳನ್ನು ಎಸ್‌ಬಿಐ ತಂದಿದೆ.

ನೀಟ್ ಫಲಿತಾಂಶ ಪ್ರಕಟ: ರಾಜ್ಯಕ್ಕೆ ಫಣೀಂದ್ರ ಫಸ್ಟ್

ಬೆಂಗಳೂರು:ರಾಷ್ಟ್ರೀಯ ಅರ್ಹತಾ ಪ್ರವೇಶ ಫಲಿತಾಂಶ (ನೀಟ್) ಪ್ರಕಟವಾಗಿದ್ದು, ರಾಜಸ್ಥಾನ ಮೂಲದ ನಳಿನ್ ಖಂಡೆವಾಲಾ ದೇಶಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. ದೆಹಲಿ ಮೂಲದ ಭವೀಕ್ ಬನ್ಸಾಲ್ ದ್ವಿತೀಯ ಸ್ಥಾನ ಪಡೆದಿದ್ದು, ಉತ್ತರ ಪ್ರದೇಶ ಮೂಲದ ಅಕ್ಷತ್‍ಕೌಶಿಕ್ ತೃತೀಯ ಸ್ಥಾನ ಗಳಿಸಿದ್ದಾರೆ.ಕರ್ನಾಟಕದ ಡಿ.ಕೆ.ಫಣೀಂದ್ರ 36ನೇ ರ್ಯಾಂಕ್ ಪಡೆಯುವ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. ಈ ಬಾರಿ ನೀಟ್ ಪರೀಕ್ಷೆಗೆ 1410755 ವಿದ್ಯಾರ್ಥಿಗಳು ಹಾಜರಾಗಿದ್ದರು. ಅವರಲ್ಲಿ 797042 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ರಾಜಸ್ಥಾನ‌ದ ಜೈಪುರ ವಿದ್ಯಾರ್ಥಿ ನಳೀನ್ ಖಾಂದೆಲ್​ವಾಲ್​​​ ದೇಶಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. ದೆಹಲಿ ಮೂಲದ ಭವೀಕ್ ಬನ್ಸಾಲ್ ಮತ್ತು ಉತ್ತರ ಪ್ರದೇಶದ ಅಕ್ಷತ್ ಕೌಶಿಕದ 2 ಮತ್ತು 3 ನೇ ಸ್ಥಾನ ಗಳಿಸಿದ್ದಾರೆ. ಫಣೀಂದ್ರ ಡಿ ಕೆ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. ಪ್ರಗ್ಯಾ ಮಿತ್ರ ಎರಡನೇ ಸ್ಥಾನ ಪಡೆದಿದ್ದಾರೆ. ಫಣೀಂದ್ರ ದೇಶದಲ್ಲಿ 36 ನೇ ರ್ಯಾಂಕ್ ಪಡೆದಿದ್ದಾರೆ.

14,10755 ವಿದ್ಯಾರ್ಥಿಗಳು ನೀಟ್​ ಪರೀಕ್ಷೆಗೆ ಹಾಜರಾಗಿದ್ದರು. ಅವರಲ್ಲಿ 7,97,042 ಅಭ್ಯರ್ಥಿಗಳು ಉತ್ತಿರ್ಣರಾಗಿದ್ದಾರೆ. 1017 ವಿದ್ಯಾರ್ಥಿಗಳು ಕನ್ನಡದಲ್ಲಿ ಪರೀಕ್ಷೆ ತೆಗೆದುಕೊಂಡಿದ್ದರು. ಒಟ್ಟಾರೆ ಫಲಿತಾಂಶದಲ್ಲಿ ರಾಜಸ್ಥಾನ ಮೊದಲು, ದೆಹಲಿ ದ್ವಿತೀಯ ಹಾಗೂ ಆಂಧ್ರಪ್ರದೇಶ ಮೂರನೇ ಸ್ಥಾನ ಪಡೆದಿದೆ. ಕರ್ನಾಟಕ ರಾಜ್ಯ ಶೇ.63.51 ರಷ್ಟು ಫಲಿತಾಂಶ ಗಳಿಸಿದೆ.

ಫಲಿತಾಂಶ ಹಾಗೂ ನೀಟ್‌ ಕುರಿತ ಇತರೆ ಹೆಚ್ಚುವರಿ ಮಾಹಿತಿಗಾಗಿ ನೀಟ್‌ ಅಧಿಕೃತ ವೆಬ್‌ಸೈಟ್‌ www.ntaneet.nic.in ನಲ್ಲಿ ಮಾತ್ರ ಲಭ್ಯವಾಗಲಿದೆ. ಹೀಗಾಗಿ ಇತ್ತೀಚಿನ ಮಾಹಿತಿಗಾಗಿ ಆಗಾಗ ನೀಟ್‌ ಅಧಿಕೃತ ವೆಬ್‌ಸೈಟ್‌ www.ntaneet.nic.in ಗೆ ಭೇಟಿ ಕೊಡಿ.

ದೇಶಾದ್ಯಂತ ಮೇ 5 ರಂದು 156 ಕೇಂದ್ರಗಳಲ್ಲಿ ನೀಟ್​ ಪರೀಕ್ಷೆಯನ್ನು ನಡೆಸಲಾಗಿತ್ತು.  ಕರ್ನಾಟಕದಲ್ಲಿ ಹಂಪಿ ಎಕ್ಸ್​ಪ್ರೆಸ್​​ ರೈಲು ವಿಳಂಬ ಕಾರಣ ಮತ್ತು ಒಡಿಶಾ ಹಾಗೂ ಪಶ್ಚಿಮ ಬಂಗಾಳದಲ್ಲಿ ಫನಿ ಚಂಡಮಾರುತದ ಪರಿಣಾಮದಿಂದಾಗಿ ಈ ಎರಡು ರಾಜ್ಯಗಳಲ್ಲಿ ಮೇ 20 ರಂದು ನೀಟ್​ ಮರು ಪರೀಕ್ಷೆ ನಡೆಸಲಾಗಿತ್ತು.

TRENDING