Thursday, November 26, 2020
Home ಜಿಲ್ಲೆ ರಂಜಾನ್ ಹಬ್ಬದ ಪ್ರಯುಕ್ತ ಬಾದಾಮಿಯಲ್ಲಿ ಶಾಂತಿ ಸಭೆ

ಇದೀಗ ಬಂದ ಸುದ್ದಿ

ಮಹಾಮಾರಿ ಕೊರೊನಾಗೆ ಸುಡಾನ್ ಮಾಜಿ ಪ್ರಧಾನಿ `ಸಾದಿಕ್...

ಜಗತ್ತನ್ನೇ ನರಳಿಸುತ್ತಿರುವ ಕೊರೊನಾ ಸೋಂಕಿನ ಎದುರು ಎಂತಹ ನಾಯಕನಾದರೂ ಮಂಡಿಯೂರಬೇಕು ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಸುಡಾನ್‌ನ ಮಾಜಿ ಪ್ರಧಾನಿ ಸಾದಿಕ್ ಅಲ್-ಮೆಹ್ದಿ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ. 84 ವರ್ಷದ ಮೆಹ್ದಿ...

ಸ್ಟೀಮರ್​ ಬೋಟ್​ನಿಂದ 8 ಟ್ರಕ್ ನದಿ ಪಾಲು

ಕೋಲ್ಕತ: ಸೋಮವಾರ ದೊಡ್ಡ ಸ್ಟೀಮರ್​ ಬೋಟ್​ನಿಂದ ಆಕಸ್ಮಿಕವಾಗಿ ನದಿ ಪಾಲಾಗಿದ್ದ ಕಾರ್ಮಿಕರು ಮತ್ತು 8 ಟ್ರಕ್​ಗಳಲ್ಲಿ ಈವರೆಗೆ ಎರಡು 3 ಟ್ರಕ್​ ಅನ್ನು ಹೊರತೆಗೆಯಲಾಗಿದ್ದು, ಕಾರ್ಮಿಕನೊಬ್ಬನ ಮೃತದೇಹ ಪತ್ತೆಯಾಗಿದೆ.

ಕೆನರಾ ಬ್ಯಾಂಕ್ ನೇಮಕಾತಿ: ಸ್ಪೆಷಲಿಸ್ಟ್ ಅಧಿಕಾರಿ ಹುದ್ದೆಗೆ...

 ಬೆಂಗಳೂರು : ಉದ್ಯೋಗಾಕಾಂಕ್ಷಿಗಳಿಗೆ ಕೆನೆರಾ ಬ್ಯಾಂಕ್ ಸಿಹಿಸುದ್ದಿ ನೀಡಿದ್ದು, 220 ಕೆನರಾ ಬ್ಯಾಂಕ್ ಸ್ಪೆಷಲಿಸ್ಟ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಹುದ್ದೆ ಹೆಸರು: ಕೆನರಾ ಬ್ಯಾಂಕ್ ಸ್ಪೆಷಲಿಸ್ಟ್...

ಫೋಟೋ ವೈರಲ್ : ಮಗಳ ಜೊತೆ ಹೆಜ್ಜೆ...

 'ತಾಯಿಗೆ ತಕ್ಕ ಮಗ' ಚಿತ್ರದ ಬಳಿಕ ಅಜಯ್ ರಾವ್ ನಟನೆಯ ಯಾವ ಚಿತ್ರವೂ ಇನ್ನು ಥಿಯೇಟರ್‌ಗೆ ಬಂದಿಲ್ಲ. ಸಾಲು ಸಾಲು ಚಿತ್ರಗಳಲ್ಲಿ ಬ್ಯುಸಿಯಿದ್ದು, ಚಿತ್ರೀಕರಣ ಮಾಡುವುದರಲ್ಲಿ ತೊಡಗಿಕೊಂಡಿದ್ದಾರೆ.

‘ಪ್ಲಾಸ್ಮಾ’ ದಾನ ಮಾಡಿ 350 ರೋಗಿಗಳ ಜೀವ...

ನವದೆಹಲಿ: ಇವರು ಮಾಡಿರುವ ಕೆಲಸ ಹೊಗಳಿಕೆಗೂ ಮೀರಿದ್ದು, ಏಕೆಂದರೆ ದೆಹಲಿ ಪೊಲೀಸ್ ಸಿಬ್ಬಂದಿ ತಮ್ಮ ಪ್ಲಾಸ್ಮಾ ದಾನ ಮಾಡುವ ಮೂಲಕ 350 ಮಂದಿಯ ಜೀವ ಉಳಿಸಿದ್ದಾರೆ. 42...

ರಂಜಾನ್ ಹಬ್ಬದ ಪ್ರಯುಕ್ತ ಬಾದಾಮಿಯಲ್ಲಿ ಶಾಂತಿ ಸಭೆ

ಬಾಗಲಕೋಟೆ : ಜಿಲ್ಲೆಯ ಬಾದಾಮಿ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಹಳ್ಳಿಗಳ ಹಿಂದೂ ಮತ್ತು ಮುಸ್ಲಿಂ ಮುಖಂಡರು ರಂಜಾನ್ ಹಬ್ಬದ ಪ್ರಯುಕ್ತ ಶಾಂತಿ ಸಭೆಯನ್ನು ಏರ್ಪಡಿಸಿದ್ದರು. ಈ ಸಭೆಯ ನೇತೃತ್ವ ವಹಿಸಿದ ಸಿಪಿಐ ಕೆ.ಎಸ್.ಹಟ್ಟಿ ಮಾತನಾಡಿ ನಮ್ಮ ಬಾದಾಮಿ ಪಟ್ಟಣಕ್ಕೆ ಹಿಂದಿನ ಕಾಲದಿಂದಲೂ ಇಲ್ಲಿಯವರೆಗೆ ಚಾಲುಕ್ಯರ ನಾಡಿಗೆ ತನ್ನದೇ ಆದ ಇತಿಹಾಸವಿದೆ ಮತ್ತು ಇಲ್ಲಿ ಜಾತಿ,ಬೇಧ,ಭಾವಗಳನ್ನು ಮರೆತು ಎಲ್ಲ ಧರ್ಮದವರು ಒಂದೇ ಎಂದು ಕರೆಯಲಾಗುತ್ತದೆ, ಯಾಕಪ್ಪ ಅಂದ್ರೆ ಯಾವುದೇ ಧರ್ಮದಲ್ಲಿ ಹಬ್ಬ ಹರಿದಿನಗಳು ಬಂದ್ರೆ ಸಾಕು ನೋಡಿ ಇಲ್ಲಿ ಎಲ್ಲರೂ ಕೂಡಿಕೊಂಡು ಶಾಂತಿಯುತವಾಗಿ ಹಬ್ಬವನ್ನು ಆಚರಣೆ ಮಾಡುತ್ತಾರೆ. ಅದರಲ್ಲಿ ವಿಶೇಷವಾಗಿ ಮುಸಲ್ಮಾನರ ಪವಿತ್ರ ಹಬ್ಬವಾದ ರಂಜಾನ್ ಹಬ್ಬವನ್ನು ಆಚರಿಸಿರುವುದು ಒಂದು ವಿಶೇಷವಾಗಿದೆ. ವರ್ಷದಲ್ಲಿ ಒಂದು ತಿಂಗಳ ಕಾಲ ಉಪವಾಸವನ್ನು ಹಬ್ಬವನ್ನು ಆಚರಿಸುತ್ತಾರೆ. ಈಗಿನ ಬಿಸಿಲಿನ ತಾಪಕ್ಕೆ ಒಂದು ಹನಿ ನೀರನ್ನು ಕುಡಿಯದೆ ತಿಂಗಳ ಕಾಲ ಉಪವಾಸ ಮಾಡುವುದು ಸಿದ್ದ ಸಾಧಾರಣ ವಿಷಯವಲ್, ಇವರನ್ನು ಮೆಚ್ಚಲೇಬೇಕು. ಬಾದಾಮಿ ತಾಲೂಕಿನಲ್ಲಿ ಹಿಂದೂ ಮತ್ತು ಮುಸಲ್ಮಾನರಲ್ಲಿ ಯಾವುದೇ ಬೇಧವನ್ನು ಮರೆತು ಶಾಂತಿಯುತವಾಗಿ ರಂಜಾನ್ ಹಬ್ಬವನ್ನು ವಿಜೃಂಭಣೆಯಿಂದ ಆಚರಣೆ ಮಾಡಿ ಎಂದು ಹೇಳಿದರು.

ನಂತರ ಠಾಣೆಯ ಪಿಎಸ್ಐ ಪ್ರಕಾಶ ಬಣಕಾರ ಮಾತನಾಡಿ, ನಾನು ಎಷ್ಟೋ ಠಾಣೆಗಳನ್ನು ನೋಡಿದ್ದೇನೆ ಎಲ್ಲಿ ನೋಡಿದರೂ ಧರ್ಮಗಳ ನಡುವೆ ಜಾತಿಗಳ ನಡುವೆ ಜಗಳಗಳು ಇದ್ದೇ ಇರುತ್ತವೆ. ಆದರೆ ನಮ್ಮ ಬಾದಾಮಿ ಪೊಲೀಸ್ ಠಾಣೆಯಲ್ಲಿ ಯಾವುದೇ ಧರ್ಮಗಳ ನಡುವೆ ಜಗಳಗಳು ದ್ವೇಷಗಳು ನೋಡೇ ಇಲ್ಲ. ಈಗಿನ ಯುವ ಪೀಳಿಗೆಯು ಧರ್ಮಕ್ಕೆ ಜಗಳ ಹಚ್ಚೊ ಪ್ರಚೋದನಾಕಾರಿಯಾಗುವ ಸಂದೇಶಗಳನ್ನು ಫೇಸ್ ಬುಕ್,ವಾಟ್ಸ್ಆಪ್ ಗಳ ಮುಖಾಂತರ ಹರಿಬಿಟ್ಟು ಜಗಳವನ್ನು ಹಚ್ಚುವ ಕೆಲಸಗಳನ್ನು ಮಾಡುತ್ತಿದ್ದಾರೆ. ಇಂತಹವುಗಳಿಗೆ ಅವಕಾಶವನ್ನು ಕೊಡದೆ ಬಾದಾಮಿ ತಾಲೂಕಿನಲ್ಲಿ ಎಲ್ಲರೂ ಒಂದೇ ಎಲ್ಲಾ  ಧರ್ಮದವರಿಗೂ ದೇವರು ಬೇರೆ ಇರಬಹುದು, ಆದರೆ ಎಲ್ಲಾ ದೇವರಿಗೂ ನಾಮ ಒಂದೇ ಎಂದು ಹೇಳಿದ್ದರು ಮತ್ತು ಈ ಮನುಷ್ಯ ಜಾತಿ,ದುರಾಸೆಗಳಿಗೆ ಹೆಚ್ಚು ಆಸ್ಪದ ಮಾಡಿಕೊಡುತ್ತದೆ, ಅದನ್ನ ಎಲ್ಲವನ್ನೂ ಹೋಗಲಾಡಿಸಿ ಮನುಷ್ಯನನ್ನು ದೃಢವಾದ ಸಂಕಲ್ಪವನ್ನು ಹೊಂದಿರಬೇಕು ಎಂದು ಮಾತನಾಡಿದ್ದರು.

ಹಿಂದೂ ಮತ್ತು ಮುಸ್ಲಿಂ ಮುಖಂಡರುಗಳು ಮಾತನಾಡಿ ಹಿಂದೂ ಧರ್ಮದ ಹಬ್ಬಗಳು ಬಂದರೆ ನಾವು ಅವರವರ ಮನೆಗಳಿಗೆ ತೆರಳಿ ಹಬ್ಬವನ್ನು ಆಚರಣೆ ಮಾಡುತ್ತೇವೆ. ಮುಸ್ಲಿಂ ಧರ್ಮದ ಹಬ್ಬಗಳು ಬಂದ್ರೆ ಅವರ ಮನೆಗಳಿಗೆ ತೆರಳಿ ಊಟ ಉಪಚಾರವನ್ಜು ಮಾಡುತ್ತೇವೆ, ಅಷ್ಟೆ ಅಲ್ಲದೆ ನಾವು ಹೋಗದಿದ್ದರೆ ನಮ್ಮ ಮನೆಗಳಿಗೆ ಟಿಫನ್,ಕ್ಯಾರಿಯರ್ ಮುಖಾಂತರ ತಾವು ಮಾಡಿದ ಸಿಹಿ ತಿಂಡಿತಿನಿಸುಗಳನ್ನು ಕೊಟ್ಟು ಕಳಿಸುವ ಮನೋಭಾವ ನಮ್ಮ ಬಾದಾಮಿ ತಾಲೂಕಿನ ಎಲ್ಲರಲ್ಲಿ ಇದೆ ಎಂದು ಹೇಳುವುದಕ್ಕೆ ನಮಗೆ ಹೆಮ್ಮೆಯಾಗುತ್ತದೆ ಎಂದು ಹೇಳಿದರು.

TRENDING