Sunday, June 13, 2021
Homeಜಿಲ್ಲೆಶ್ರೀನಿವಾಸಪುರದಲ್ಲಿ ವಿಶ್ವ ಹಾಲು ದಿನಾಚರಣೆ

ಇದೀಗ ಬಂದ ಸುದ್ದಿ

ಶ್ರೀನಿವಾಸಪುರದಲ್ಲಿ ವಿಶ್ವ ಹಾಲು ದಿನಾಚರಣೆ

ಶ್ರೀನಿವಾಸಪುರ : ಶ್ರೀನಿವಾಸಪುರ ಪಟ್ಟಣದ ತಾಲ್ಲೂಕು ಸಹಕಾರ ಹಾಲು ಒಕ್ಕೂಟ ನಿಯಮಿತ ಕಛೇರಿಯಲ್ಲಿ ವಿಶ್ವ ಹಾಲು ದಿನಾಚರಣೆ ಹಾಗೂ ಕರ್ನಾಟಕದ ಕ್ಷೀರಬ್ರಹ್ಮ ಎಂ.ವಿ.ಕೃಷ್ಣಪ್ಪರವರ ಜನ್ಮ ದಿನಾಚರಣೆಯ ಆಚರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಪಟ್ಟಣದ ತಾಲ್ಲೂಕು ಹಾಲು ಒಕ್ಕೂಟ ಸಂಘದ ವತಿಯಿಂದ ಕಚೇರಿಯಲ್ಲಿ  ನಡೆದ ಈ ಕಾರ್ಯಕ್ರಮದಲ್ಲಿ  ಸರ್ಕಾರಿ ಆಸ್ಪತ್ರೆಯ ಒಳರೋಗಿಗಳಿಗೆ ಹಾಲನ್ನು ಹಂಚಲಾಯಿತು.  ಪ್ರತಿ ವರ್ಷದಂತೆ ಜೂನ್ 1 ರಂದು ವಿಶ್ವ ಹಾಲು ದಿನಾಚರಣೆ ಯನ್ನು ಆಚರಿಸುತ್ತಿದ್ದು ,ಇನ್ನು ಮುಂದೆ ಜೊತೆಗೆ ಕರ್ನಾಟಕದ ಕ್ಷೀರಬ್ರಹ್ಮ ಎಂ.ವಿ.ಕೃಷ್ಣಪ್ಪರವರ ಜನ್ಮ ದಿನಾಚರಣೆಯನ್ನು ಪ್ರತಿ ಜಿಲ್ಲೆ ಮತ್ತು ತಾಲ್ಲೂಕುಗಳಲ್ಲಿ ಹಾಲು ಒಕ್ಕೂಟ ಸಂಘಗಳಲ್ಲಿ ಆಚರಿಸಬೇಕೆಂದು ನಿರ್ದೇಶಕರಾದ ಹನುಮೇಶ್ ರವರು ಹೇಳಿದರು.

ನಂತರ ಕೋಚಿಮಲ್ ಹಾಲು ಒಕ್ಕೂಟದ ಮಾಜಿ ನಿರ್ದೇಶಕ ಮುನಿವೆಂಕಟಪ್ಪ, ಕೋಚಿಮಲ್ ಅಧಿಕಾರಿ ವರ್ಗ ಹಾಗೂ ಸಿಬ್ಬಂದಿ ಮತ್ತು ಹಾಲು ಡೈರಿಗಳ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳು ಸೇರಿ ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಒಳ ರೋಗಿಗಳಿಗೆ ನಂದಿನಿ ಹಾಲಿನ ಪಾಕೆಟ್ ಗಳನ್ನು ಹಂಚಿದರು. ಆಸ್ಪತ್ರೆಯ ವೈದ್ಯರಾದ ಶ್ರೀನಿವಾಸ್ ,THO ಡಾಕ್ಟರ್ ವಿಜಯ ಹಾಗೂ ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿ ಭಾಗಿಯಾಗಿ ಕಾರ್ಯಕ್ರಮದಲ್ಲಿ ಸಹಕರಿಸಿದರು.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img