Sunday, June 13, 2021
Homeಜಿಲ್ಲೆಶಿವಳ್ಳಿ ಭಾವಚಿತ್ರಕ್ಕೆ ಹೆಚ್ಚಿದ ಬೇಡಿಕೆ

ಇದೀಗ ಬಂದ ಸುದ್ದಿ

ಶಿವಳ್ಳಿ ಭಾವಚಿತ್ರಕ್ಕೆ ಹೆಚ್ಚಿದ ಬೇಡಿಕೆ

ಕುಂದಗೋಳ : ಪೌರಾಡಳಿತ ಸಚಿವರಾಗಿದ್ದ ಸಿ.ಎಸ್.ಶಿವಳ್ಳಿ ಅವರು ನಿಧನರಾಗಿ ಸುಮಾರು ಮೂರು ತಿಂಗಳು ಕಳೆದಿದ್ದರೂ ಕೂಡ ಅವರ ಭಾವಚಿತ್ರದ ಬೇಡಿಕೆಯು ದಿನದಿಂದ ದಿನಕ್ಕೆ ವೃದ್ಧಿಸುತ್ತಲೇ ಇದೆ.

ಕುಂದಗೋಳ ವಿಧಾನಸಭಾ ಕ್ಷೇತ್ರದ ಜನತೆ ಮಾತ್ರವಲ್ಲದೇ ಧಾರವಾಡ ಜಿಲ್ಲೆಯಾದ್ಯಂತ ಶಿವಳ್ಳಿ ಅಭಿಮಾನಿಗಳು ಶಿವಳ್ಳಿಯವರ ಭಾವಚಿತ್ರದ ಖರೀದಿಗೆ ಮುಂದಾಗುತ್ತಿರುವುದು ಶಿವಳ್ಳಿಯವರ ಮೇಲಿನ ಗೌರವ ಪ್ರೀತಿಗೆ ಹಿಡಿದ ಕೈಗನ್ನಡಿಯಾಗಿದೆ.  ಕುಂದಗೋಳದ ತಹಶೀಲ್ದಾರ ಕಚೇರಿ ಬಳಿಯ ರಾಜು ಪೋಟೋ ಪ್ರೇಮ್ ವರ್ಕ್ಸ್ ನಲ್ಲಿ  ದಿ.ಸಿ.ಎಸ್.ಶಿವಳ್ಳಿಯವರ ಭಾವಚಿತ್ರಕ್ಕೆ ಎಲ್ಲಿಲ್ಲದ ಬೇಡಿಕೆ ಬಂದಿದೆ‌.  ಅಲ್ಲದೇ ಧಾರವಾಡ ಜಿಲ್ಲೆಯ ವಿವಿಧ ಗ್ರಾಮಗಳಿಂದ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಶಿವಳ್ಳಿಯವರ ಅಭಿಮಾನಿಗಳು ‌ಸಿ.ಎಸ್.ಶಿವಳ್ಳಿಯವರ ಭಾವಚಿತ್ರ ಖರೀದಿಗಾಗಿಯೇ ಕುಂದಗೋಳಕ್ಕೆ ಆಗಮಿಸುತ್ತಿರುವುದು ವಿಶೇಷವಾಗಿದೆ.

ಹೌದು, ಫೋಟೋ ಅಂಗಡಿಗಳಲ್ಲಿ ದೇವರ ಪೋಟೊಗಳಿರುವುದು ಸರ್ವೆಸಾಮಾನ್ಯ. ಅಲ್ಲದೇ ದೇವರ ಪೋಟೋಗಳಿಗೆ ಸಂದರ್ಭಕ್ಕೆ ಅನುಸಾರವಾಗಿ ಬೇಡಿಕೆ ಹೆಚ್ಚುತ್ತದೆ.  ಆದರೆ ಕುಂದಗೋಳ ನಗರದ ತಹಶೀಲ್ದಾರ್ ಕಚೇರಿ ಬಳಿಯ ರಾಜು ಪೋಟೋ ಪ್ರೇಮ್ ವರ್ಕ್ಸ್ ನಲ್ಲಿ ದೇವರ ಪೋಟೊಗಳಿಗಿಂತ ಶಿವಳ್ಳಿಯವರ ಪೋಟೊಗಳಿಗೆ ಬೇಡಿಕೆ ಹೆಚ್ಚಿದೆ.

ಒಟ್ಟಾರೆಯಾಗಿ ಕುಂದಗೋಳ ತಾಲೂಕಿನ ಮನೆಮಗನಾಗಿದ್ದ ಶಿವಳ್ಳಿಯವರ ನಿಧನಕ್ಕೆ ಇಂದಿಗೂ ಕೂಡ ಜನರು ಶೋಕ ಸಾಗರದಲ್ಲಿ ಮುಳುಗಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img