Thursday, January 21, 2021
Home ರಾಜ್ಯ ದೊಡ್ಡಿಗಳಿಗೆ ವಿದ್ಯುತ್ ನೀಡಲು ಪ್ರಧಾನಿ ಮೋದಿ ಆದೇಶ ಪತ್ರ

ಇದೀಗ ಬಂದ ಸುದ್ದಿ

ದೊಡ್ಡಿಗಳಿಗೆ ವಿದ್ಯುತ್ ನೀಡಲು ಪ್ರಧಾನಿ ಮೋದಿ ಆದೇಶ ಪತ್ರ

ರಾಯಚೂರು : ದೊಡ್ಡಿಗಳಿಗೆ ವಿದ್ಯುತ್ ನೀಡುವಂತೆ ಬರೆದ ಪತ್ರಕ್ಕೆ ಬೆಳಕು ನೀಡಿದ ಪ್ರಧಾನಿ ಮೋದಿ ಉತ್ತರಿಸಿದ್ದಾರೆ.

ಜಿಲ್ಲೆಯ ಲಿಂಗಸುಗೂರು ತಾಲ್ಲೂಕಿನ ದೇವರ ಭೂಪೂರು ಗ್ರಾಮದ ಯುವಕ ಅಮರೇಶ ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದಿದ್ದ.

ಗಲಗಿನ ದೊಡ್ಡಿ, ಕಾಳಪ್ಪನ ದೊಡ್ಡಿ ಹಾಗೂ ಗುಳೆದರ ದೊಡ್ಡಿಗಳಿಗೆ ವಿದ್ಯುತ್ ಸಂಪರ್ಕ ನೀಡುವಂತೆ ಮನವಿ ಮಾಡಿದ್ದ.

ಪತ್ರಕ್ಕೆ ಸ್ಪಂದಿಸಿ ಉತ್ತರ ನೀಡಿದ ಪ್ರಧಾನಿ ಮೋದಿ ಮೂರು ದೊಡ್ಡಿಗೆ ವಿದ್ಯುತ್ ನೀಡುವಂತೆ ಆದೇಶಿಸಿದ್ದಾರೆ. ಈ ಮೂರು ದೊಡ್ಡಿಗಳಿಗೆ ಕೇಂದ್ರ ಗ್ರಾಮೀಣ ವಿದ್ಯುತ್ ನಿಗಮದಿಂದ ವಿದ್ಯುತ್ ಸಂಪರ್ಕ ನೀಡಲಾಗುತ್ತಿದೆ.  ಈಗಾಗಲೇ ಜೆಸ್ಕಾಂ ಇಲಾಖೆಯಿಂದ ವಿದ್ಯುತ್ ಸಂಪರ್ಕ ಕಾರ್ಯ ಪ್ರಾರಂಭವಾಗಿದೆ. ಕೇಂದ್ರ ಸರಕಾರದ ಸೌಭಾಗ್ಯ ಯೋಜನೆ ಅಡಿಯಲ್ಲಿ ಮೀಟರ್ ಅಳವಡಿಕೆ ಕಾರ್ಯ ಆರಂಭ.  ಪ್ರಧಾನಿ ಮೋದಿ ಪ್ರತ್ಯುತ್ತರಕ್ಕೆ ಸಂತಸ ವ್ಯಕ್ತಪಡಿಸಿದ ದೊಡ್ಡಿ ಗ್ರಾಮಸ್ಥರು ಹಾಗೂ ಯುವಕ ಅಮರೇಶ ಕುಣಿದಾಡಿದರು.

TRENDING