Thursday, December 3, 2020
Home ಜಿಲ್ಲೆ ಹಿರಿಯೂರು ನಗರಸಭೆ: ಮೈತ್ರಿ ಅಭ್ಯರ್ಥಿಗಳಿಗೆ ಭರ್ಜರಿ ಗೆಲುವು

ಇದೀಗ ಬಂದ ಸುದ್ದಿ

ನೂತನ ಅಧ್ಯಕ್ಷರ ಅಧಿಕಾರ ಸ್ವೀಕಾರ ಸಮಾರಂಭ ಸಮಿತಿಗೆ...

ವಾಷಿಂಗ್ಟನ್‌: ಅಮೆರಿಕದ ನೂತನ ಅಧ್ಯಕ್ಷರ ಅಧಿಕಾರ ಸ್ವೀಕಾರ ಸಮಾರಂಭದ ಚಟುವಟಿಕೆಗಳ ನಿರ್ವಹಣೆಗಾಗಿ ರಚಿಸಿರುವ ನಾಲ್ವರು ಸದಸ್ಯರ 'ಅಧ್ಯಕ್ಷೀಯ ಉದ್ಘಾಟನಾ ಸಮಿತಿ(ಪಿಐಸಿ)'ಗೆ ಭಾರತೀಯ-ಅಮೆರಿಕನ್ ಮಜು ವರ್ಗೀಸ್ ಅವರನ್ನು ನೇಮಿಸಲಾಗಿದೆ.

ಗುಡ್ ನ್ಯೂಸ್ :ರಾಜ್ಯ ಸರ್ಕಾರದಿಂದ ಶೀಘ್ರವೇ ಹೊಸ...

ಬೆಂಗಳೂರು : ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ 2019-20 ನೇ ಸಾಲಿನ ಹೊಸ ಪಡಿತರ ಚೀಟಿಗಳನ್ನು ಈ ತಿಂಗಳ ಮೂರನೇ ವಾರದಿಂದ ವಿತರಿಸಲು ಆಹಾರ ಇಲಾಖೆ ಸಿದ್ಧತೆ ನಡೆಸಿದೆ.

ದೆಹಲಿಯಲ್ಲಿ ಭೂ ಕಂಪನ : ರಿಕ್ಟರ್ ಮಾಪಕದಲ್ಲಿ...

ನವದೆಹಲಿ : ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಮತ್ತೆ ಭೂಮಿ ಕಂಪಿಸಿದ್ದು, ರಿಕ್ಟರ್ ಮಾಪಕದಲ್ಲಿ 2.7 ರಷ್ಟು ದಾಖಲಾಗಿದೆ ಎಂದು ವರದಿಯಾಗಿದೆ. ದೆಹಲಿ ಘಾಜಿಯಾಬಾದ್ ನಲ್ಲಿ ಲಘು ಭೂಕಂಪನ...

ಕ್ರಿಸ್ ಮಸ್ ಹಬ್ಬದ ವಿಶೇಷವಾಗಿ 250 ಬಗೆಯ...

 ಟೋಕಿಯೋದಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಲೇ ಇದೆ. ಹೀಗಾಗಿ ಜಪಾನ್​ ರಾಜಧಾನಿಯ ಸಮೀಪದಲ್ಲಿರುವ ಅಂಗಡಿಯೊಂದು ಕ್ರಿಸ್​​ ಮಸ್​ ಹಬ್ಬದ ವಿಶೇಷವಾಗಿ 250 ಬಗೆಯ ಮಾಸ್ಕ್​ಗಳನ್ನ ಮಾರುಕಟ್ಟೆಗೆ ಪರಿಚಯಿಸಿದೆ. ಇದರಲ್ಲಿ ಅಲಂಕಾರಿಕ ದೀಪಗಳನ್ನ...

ದೇಶದ ರೈತರ ಹೋರಾಟಕ್ಕೆ ವಿದೇಶದಿಂದಲೂ ಸಿಕ್ಕಿದೆ ಬೆಂಬಲ...

ದೇಶದಲ್ಲಿ ಕೃಷಿ ಮಸೂದೆ ವಿರೋಧಿಸಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕುತ್ತಿರುವ ರೈತರಿಗೆ ವಿಶ್ವದ ಮೂಲೆ ಮೂಲೆಯಿಂದ ಬೆಂಬಲ ವ್ಯಕ್ತವಾಗುತ್ತಿದೆ. ಈಗಾಗಲೇ ಪ್ರತಿಭಟನೆ ಮಾಡುತ್ತಿದ್ದ ರೈತರಿಗೆ...

ಹಿರಿಯೂರು ನಗರಸಭೆ: ಮೈತ್ರಿ ಅಭ್ಯರ್ಥಿಗಳಿಗೆ ಭರ್ಜರಿ ಗೆಲುವು

ಹಿರಿಯೂರು : ಭಾರಿ ಕುತೂಹಲ ಕೆರಳಿದ್ದ ಹಿರಿಯೂರು ನಗರಸಭೆ ಚುನಾವಣೆಯಲ್ಲಿ ಕೊನೆಗೂ ಅಚ್ಚರಿ ಫಲಿತಾಂಶ ಪ್ರಕಟಗೊಂಡಿದೆ. ಕಾಂಗ್ರೆಸ್-ಜೆಡಿಎಸ್ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದು ಅಧಿಕಾರದ ಗದ್ದುಗೆ ಹಾದಿ ಸುಗಮವಾಗಿದೆ.

ಒಟ್ಟು 31 ವಾರ್ಡ್ ಗಳಲ್ಲಿ ಒಂದು ಸ್ಥಾನಕ್ಕೆ ಜೆಡಿಎಸ್ ಅಭ್ಯರ್ಥಿಯೊಬ್ಬರು ಅವಿರೋಧವಾಗಿ ಆಯ್ಕೆಯಾಗಿದ್ದರು. ಉಳಿದ 30 ಸ್ಥಾನಗಳಲ್ಲಿ ಜೆಡಿಎಸ್-ಕಾಂಗ್ರೆಸ್ ಮಿತ್ರಕೂಟ಻ಹಾಗೂ ಬಿಜೆಪಿ ಅಭ್ಯರ್ಥಿಗಳ ಮಧ್ಯೆ ತೀವ್ರ ಪೈಪೋಟಿ ನಡೆದಿತ್ತು. ಅಚ್ಚರಿ ಎಂಬಂತೆ ಕಾಂಗ್ರೆಸ್-13, ಜೆಡಿಎಸ್-3 (ಅವಿರೋಧ ಆಯ್ಕೆ 1 ಸ್ಥಾನ ಸೇರಿ),ಬಿಜೆಪಿ-6,ಪಕ್ಷೇತರರು 9 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದಾರೆ.

ಸರಳ ಬಹುಮತಕ್ಕೆ ಬೇಕಾಗಿರುವ 16 ಸ್ಥಾನಗಳನ್ನು ಕಾಂಗ್ರೆಸ್-ಜೆಡಿಎಸ್ ಮೈತ್ರಿ ಪಕ್ಷ ಪಡೆದಿದ್ದು, ಅಧಿಕಾರ ಗದ್ದುಗೆ ಹಿಡಿಯುವ ಹಾದಿ ಸಲೀಸಾಗಿದೆ.

ಸ್ಥಳೀಯ ಸಂಸ್ಥೆಯಲ್ಲಿ ಮೈತ್ರಿ ಸಕ್ಸಸ್ : ಲೋಕಸಭೆ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿ ಬಿ.ಎನ್.ಚಂದ್ರಪ್ಪ ಹಿರಿಯೂರು ಕ್ಷೇತ್ರದಲ್ಲಿ ಹಿನ್ನಡೆ ಸಾಧಿಸಿದ್ದು, ಬಿಜೆಪಿ ಲೀಡ್ ಪಡೆದಿತ್ತು. ಇದು ನಗರಸಭೆ ಚುನಾವಣಾ ಫಲಿತಾಂಶದ ಮೇಲೆ ಪರಿಣಾಮ ಬೀರಲಿದೆ ಎಂಬ ಲೆಕ್ಕಾಚಾರ ನಡೆದಿತ್ತು. ಕಳೆದ ಬಾರಿ ಜೆಡಿಎಸ್, ಕಾಂಗ್ರೆಸ್, ಪಕ್ಷೇತರರನ್ನು ತನ್ನ ತೆಕ್ಕೆಗೆ ಸೆಳೆಯುವ ಮೂಲಕ ಅಧಿಕಾರದ ಗದ್ದುಗೆ ಏರಿದ್ದ ಬಿಜೆಪಿ ಈ ಬಾರಿ ಸ್ವತಂತ್ರವಾಗಿ ಅಧಿಕಾರ ಪಡೆಯುವ ಕನಸು ಕಂಡಿತ್ತು. ಇದಕ್ಕೆ ಪೂರಕವಾಗಿ ಲೋಕಸಭೆ ಚುನಾವಣೆಯಲ್ಲಿ ಮುನ್ನಡೆ ದೊರೆತಿತ್ತು. ಇದರಿಂದ ಉತ್ಸಾಹಕರಾಗಿದ್ದ ಬಿಜೆಪಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಮತ್ತು ಮುಖಂಡರು, ಕಾರ್ಯಕರ್ತರು ಬಹಳ ಉತ್ಸಾಹದಿಂದ ಚುನಾವಣೆ ಎದುರಿಸಿದ್ದರು.

ಆದರೆ ಡಿಸಿಸಿ ಬ್ಯಾಂಕ್ ಚುನಾವಣೆ ಒತ್ತಡದಲ್ಲಿಯೂ ಕೊನೆಗಳಿಗೆಯಲ್ಲಿ ವಿಶ್ರಾಂತಿ ಇಲ್ಲದಂತೆ ಜೆಡಿಎಸ್ ಮುಖಂಡರನ್ನು ಜತೆಗೆ ಸೇರಿಸಿಕೊಂಡು ಕಾಲಿಗೆ ಚಕ್ರ ಕಟ್ಟಿಕೊಂಡು ಗೆಲುವಿಗಾಗಿ ಮಾಜಿ ಶಾಸಕ ಡಿ.ಸುಧಾಕರ್ ತಿರುಗಾಡಿದ್ದರು.

ಕೊನೆಗೂ ಫಲಿತಾಂಶ ಶುಕ್ರವಾರ ಮೈತ್ರಿ ಪಕ್ಷಗಳಿಗೆ ಶುಭ ತಂದಿದ್ದು, ಬಿಜೆಪಿ ಕನಸಿಗೆ ನೀರು ಎರಚಿದೆ. ಈ ಮೂಲಕ ವಿಧಾನಸಭೆ,ಲೋಕಸಭೆ ಚುನಾವಣೆಯಲ್ಲಿ ಹಿನ್ನಡೆ ಸಾಧಿಸಿದ್ದ ಕಾಂಗ್ರೆಸ್ ಮಾಜಿ ಶಾಸಕ ಡಿ.ಸುಧಾಕರ್ ಕ್ಷೇತ್ರದಲ್ಲಿ ಹಿಂದಿದ್ದ ಹಿಡಿತವನ್ನೇ ಮರುಸ್ಥಾಪಿಸಲು ನಗರಸಭೆ ಚುನಾವಣೆ ಫಲಿತಾಂಶದ ಮೂಲಕ ಚಾಲನೆ ನೀಡಿದ್ದಾರೆ ಎಂದು ಅಂದಾಜಿಸಲಾಗುತ್ತಿದೆ.

ಅಪರೇಷನ್ ಕಮಲ ನಡೆಸುತ್ತಾರಾ ಶಾಸಕಿ ಪೂರ್ಣಿಮಾ : 9 ಮಂದಿ ಪಕ್ಷೇತರರನ್ನು ತನ್ನ ತೆಕ್ಕೆಗೆ ತೆಗೆದುಕೊಂಡು ಜೆಡಿಎಸ್ ಪಕ್ಷದಿಂದ ಒಬ್ಬರನ್ನು ಆಪರೇಷನ್ ಕಮಲದ ಮೂಲಕ ತನ್ನ ತೆಕ್ಕೆಗೆ ಸೆಳೆದುಕೊಂಡು ನಗರಸಭೆ ಗದ್ದುಗೆ ಹಿಡಿಯುವ ಪ್ರಯತ್ನ ನಡೆಸುತ್ತಾರಾ ಎಂಬ ಪ್ರಶ್ನೆ ಉದ್ಭವವಾಗಿದೆ. ಕಾರಣ ಕಳೆದ ಬಾರಿ ಒಂದು ಸ್ಥಾನವಿಲ್ಲದಿದ್ದರೂ ಜೆಡಿಎಸ್, ಕಾಂಗ್ರೆಸ್, ಪಕ್ಷೇತರರನ್ನು ಆಪರೇಷನ್ ಕಮಲದ ಮೂಲಕ ತನ್ನ ತೆಕ್ಕೆಗೆ ತೆಗೆದುಕೊಂಡು ಅಧಿಕಾರದ ಗದ್ದುಗೆ ಹಿಡಿಯುವಲ್ಲಿ ಪೂರ್ಣಿಮಾ ಯಶಸ್ವಿಯಾಗಿದ್ದರು. ಈ ಬಾರಿಯೂ ಅದೇ ತಂತ್ರವನ್ನು ಮುಂದುವರಿಸುತ್ತಾರಾ ಅಥವಾ ನಿರೀಕ್ಷೆಯಷ್ಟು ಸ್ಥಾನ ಪಡೆಯದಿರುವುದರಿಂದ ಪ್ರತಿಪಕ್ಷವಾಗಿ ಉಳಿಯುತ್ತಾರಾ ಕಾದುನೋಡಬೇಕು.

TRENDING