Sunday, May 16, 2021
Homeರಾಜ್ಯಮಂತ್ರಾಲಯ ಮಠದಲ್ಲಿ ಮಹಿಳೆಗೆ ದೆವ್ವ ಬಿಡಿಸಿದ ಶ್ರೀಗಳು . ಈ ವೈರಲ್ ವೀಡಿಯೋ ನೋಡಿ.

ಇದೀಗ ಬಂದ ಸುದ್ದಿ

ಮಂತ್ರಾಲಯ ಮಠದಲ್ಲಿ ಮಹಿಳೆಗೆ ದೆವ್ವ ಬಿಡಿಸಿದ ಶ್ರೀಗಳು . ಈ ವೈರಲ್ ವೀಡಿಯೋ ನೋಡಿ.

ಮಂತ್ರಾಲಯ : ರಾಯರು ನೆಲೆಸಿರುವ ಪರಮ ಪಾವನ ಕ್ಷೇತ್ರ ಮಂತ್ರಾಲಯ. ಶ್ರೀ ಗುರು ರಾಘವೇಂದ್ರರ ದಿವ್ಯ ಸಾನಿಧ್ಯವದು.ಕಷ್ಟ ಎಂದು ರಾಯರನ್ನು ನೆನೆದು ರಾಯರ ದರ್ಶನ ಪಡೆದವರ ಅದೆಷ್ಟೋ ಜನರ ಸಂಕಷ್ಟಗಳನ್ನು ಪರಿಹರಿಸುವ ಶ್ರೀ ರಾಘವೇಂದ್ರ ಸ್ವಾಮಿಗಳ ಮಹಿಮೆ ಅಪಾರ. ಅವರ ನಂಬಿದ ಭಕ್ತರ ಕೈ ಹಿಡಿದು ಅಂಧಾಕರದಿಂದ,ಜ್ಞಾನದ ಬೆಳಕಿನಡೆಗೆ ನಡೆಸುವವರು ಎಂದು ನಂಬಿರುವ ಭಕ್ತರು ಕೋಟಿಗಳ ಸಂಖ್ಯೆಯಲ್ಲಿದ್ದಾರೆ.

ಈ ಕ್ಷೇತ್ರವನ್ನು ನೋಡುವುದೇ ಒಂದು ಮಹಾ ಭಾಗ್ಯ. ರಾಯರ ದರ್ಶನಕ್ಕಾಗಿ ಪ್ರತಿನಿತ್ಯ ಸಾವಿರಾರು ಜನ ಭಕ್ತರು ಮಂತ್ರಾಲಯಕ್ಕೆ ಭೇಟಿ ನೀಡುತ್ತಾರೆ. ಇಂತಹ ಪುಣ್ಯ ಕ್ಷೇತ್ರದಲ್ಲಿ ನಡೆಯಿತೆನ್ನಲಾದ ಒಂದು ಅಶ್ಚರ್ಯಕರ ಘಟನೆಯ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಎಲ್ಲೆಡೆ ಇದು ಶ್ರೀ ಗುರು ರಾಯನ ಸನ್ನಿಧಿಯಲ್ಲಿ ನಡೆದ ಪವಾಡವೇ ಎಂದು ಹೇಳುತ್ತಿದ್ದಾರೆ. ರಾಯರ ಸನ್ನಿಧಿಯಲ್ಲಿ ಅಂತಹುದೇ ಸನ್ನಿವೇಶ ವಿಡಿಯೋದಲ್ಲಿ ರೆಕಾರ್ಡ್ ಆಗಿದ್ದು ಸನ್ನಿಧಾನದಲ್ಲಿ ಮೈಮೇಲೆ ದೆವ್ವ ಬಂದ ಮಹಿಳೆಯೊಬ್ಬರಿಗೆ ಶ್ರೀಗಳು ಮಂತ್ರ ಜಲವನ್ನು ಪ್ರೋಕ್ಷಣೆ ಮಾಡಿ,ಆಕೆ ಕೆಲ ಹೊತ್ತು ವಿಚಿತ್ರವಾಗಿ ವರ್ತಿಸಿ,ಕಡೆಗೆ ಆ ಬಾಧೆಯಿಂದ ಮುಕ್ತಿ ಹೊಂದಿ ಸಾಮಾನ್ಯ ಸ್ಥಿತಿಗೆ ಬಂದಿದ್ದನ್ನು ನೋಡಬಹುದು.

ಅದು ಆಕೆಯ ಮಾನಸಿಕ ತೊಂದರೆಯೋ,ಅಥವಾ ಪೀಡೆ ಪಿಶಾಚಿಗಳ ಕಾಟವೋ ಒಟ್ಟಾರೆ ಆಕೆ ರಾಯರ ಸನ್ನಿದಿಯಲ್ಲಿ ಮರಳಿ ಸಹಜ ಸ್ಥಿತಿಗೆ ಬಂದಿರುವ ದೃಶ್ಯಗಳು ವಿಡಿಯೋ ಮೂಲಕ ವೈರಲ್ ಆಗಿದೆ

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img