
ಮೈಸೂರು : ಚಿಂತಕ ಹಾಗೂ ಹಿರಿಯ ಸಾಹಿತಿ ಪ್ರೊ.ಕೆ.ಎಸ್.ಭಗವಾನ್ಗೆ ಅನಾರೋಗ್ಯದ ಕಾರಣ ನಿನ್ನೆ ಸಂಜೆ ವಾಯುವಿಹಾರಕ್ಕೆ ತೆರಳಿದ್ದ ವೇಳೆ ಕುಸಿದುಬಿದ್ದು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ಇಂದು ಶಸ್ತ್ರ ಚಿಕಿತ್ಸೆ ನಡೆಯಲಿದೆ. ಸದ್ಯ ಅವರಿಗೆ ಐಸಿಯುನಲ್ಲಿಯೇ ಟ್ರೀಟ್ ಮೆಂಟ್ ಮುಂದುವರೆದಿದೆ.
ದಿಢೀರ್ ಅನಾರೋಗ್ಯಕ್ಕೀಡಾದ ಕೆ.ಎಸ್.ಭಗವಾನ್ ರವರು ಶುಕ್ರವಾರ ಸಂಜೆ ವಾಕಿಂಗ್ ಮಾಡುವ ವೇಳೆ ಕುಸಿದು ಬಿದ್ದರು. ತಕ್ಷಣ ಅವರ ಅಂಗರಕ್ಷಕರು ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದರು.