Sunday, May 16, 2021
Homeಜಿಲ್ಲೆಮೈಸೂರುಮೈಸೂರು ಅರಮನೆಗೆ ಹುಸಿ ಬಾಂಬ್ ಕರೆ

ಇದೀಗ ಬಂದ ಸುದ್ದಿ

ಮೈಸೂರು ಅರಮನೆಗೆ ಹುಸಿ ಬಾಂಬ್ ಕರೆ

ಮೈಸೂರು: ಮೈಸೂರು ಅರಮನೆಗೆ ಬಾಂಬ್ ಹಾಕಲಾಗಿದೆ ಎಂದು ವ್ಯಕ್ತಿಯೊಬ್ಬ ಇಲ್ಲಿನ ಭದ್ರತಾ ಸಿಬ್ಬಂದಿಗೆ ದೂರವಾಣಿ ಮೂಲಕ ತಿಳಿಸಿದ್ದು, ಅರಮನೆಯ ಸುತ್ತಾ ಪೊಲೀಸರು ಹೈ ಅಲರ್ಟ್ ಆಗಿ ತಪಾಸಣೆ ನಡೆಸಿದರು.

ಇಂದು ಬೆಳಗ್ಗೆ ಅನಾಮದೇಯ ವ್ಯಕ್ತಿಯೊಬ್ಬ ಅರಮನೆಗೆ ಬಾಂಬ್ ಹಾಕಲಾಗಿದೆ ಎಂದು ತಿಳಿಸಿದ್ದು, ತಕ್ಷಣ ಜಾಗೃತರಾದ ಪೊಲೀಸರು ಶ್ವಾನ ದಳ, ಬಾಂಬ್ ಸ್ಕ್ವಾಡ್ ಮೂಲಕ ತಪಾಸಣೆ ನಡೆಸಿದ್ದಾರೆ. ಯಾವುದೇ ಸ್ಫೋಟಕ ವಸ್ತುಗಳು ಪತ್ತೆಯಾಗಿಲ್ಲ ಎಂದು ತಿಳಿದು ಬಂದಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img