Wednesday, September 22, 2021
Homeರಾಜಕೀಯರಾಹುಲ್ ಪ್ರಧಾನಿಯಾದ್ರೆ ಸಕ್ರಿಯ ರಾಜಕಾರಣಕ್ಕೆ – ದೇವೇಗೌಡ !

ಇದೀಗ ಬಂದ ಸುದ್ದಿ

ರಾಹುಲ್ ಪ್ರಧಾನಿಯಾದ್ರೆ ಸಕ್ರಿಯ ರಾಜಕಾರಣಕ್ಕೆ – ದೇವೇಗೌಡ !

ಸಕ್ರಿಯ ರಾಜಕಾರಣದಿಂದ ನಾನು ನಿವೃತ್ತನಾಗುವುದಿಲ್ಲ ಎಂದು ಜೆಡಿಎಸ್‌ ಪರಮೋಚ್ಚ ನಾಯಕ, ಮಾಜಿ ಪ್ರಧಾನಿ, ಎಚ್‌ ಡಿ ದೇವೇಗೌಡ ಸ್ಪಷ್ಚಪಡಿಸಿದ್ದಾರೆ. ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಒಂದೊಮ್ಮೆ ದೇಶದ ಪ್ರಧಾನಿಯಾದರೆ ನಾನು ಅವರ ಪಕ್ಕದಲ್ಲೇ ಕೂತು ಸಕ್ರಿಯ ರಾಜಕಾರಣದಲ್ಲಿ ನಿರತನಾಗಿರುತ್ತೇನೆ ಎಂದು ಹೇಳಿದ್ದಾರೆ. ಮತ್ತೆ ನಾನು ಪ್ರಧಾನಿಯಾಗುವ ಅಗತ್ಯವೇನೂ ಇಲ್ಲ ಎಂದು ತಿಳಿಸಿದ್ದಾರೆ.

ಮೂರು ವರ್ಷಗಳ ಹಿಂದೆ ನಾನಿನ್ನು ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ದೆ. ಆದರೆ ಈಗ ಬದಲಾದ ಪರಿಸ್ಥಿತಿ ನನ್ನನ್ನು ಚುನಾವಣೆಗೆ ಸ್ಪರ್ಧಿಸುವಂತೆ ಮಾಡಿದೆ. ನನಗೆ ಯಾವುದೇ ಮಹಾತ್ವಾಕಾಂಕ್ಷೆ ಇಲ್ಲ. ಆದರೆ ಸಕ್ರಿಯ ರಾಜಕಾರಣದಿಂದ ನಾನು ನಿವೃತ್ತನಾಗುವುದಿಲ್ಲ ಎಂದು ಹಿಂದೆಯೂ ಅನೇಕ ಬಾರಿ ಹೇಳಿದ್ದೆ. ಈಗ ಮತ್ತೆ ಅದನ್ನೇ ಹೇಳುತ್ತಿದ್ದೇನೆ ಎಂದು ಪುನರುಚ್ಚರಿಸಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img