Saturday, July 31, 2021
Homeಜಿಲ್ಲೆನಾನು ಮತ್ತೇ ಸಿಎಂ ಆದ್ರೆ 10 ಕೆಜಿ ಅಕ್ಕಿ ಉಚಿತವಾಗಿ ನೀಡ್ತೀನಿ – ಸಿದ್ದರಾಮಯ್ಯ

ಇದೀಗ ಬಂದ ಸುದ್ದಿ

ನಾನು ಮತ್ತೇ ಸಿಎಂ ಆದ್ರೆ 10 ಕೆಜಿ ಅಕ್ಕಿ ಉಚಿತವಾಗಿ ನೀಡ್ತೀನಿ – ಸಿದ್ದರಾಮಯ್ಯ

ನಾನು ಮತ್ತೇ ಸಿಎಂ ಆದ್ರೆ 10 ಕೆಜಿ ಅಕ್ಕಿ ಉಚಿತವಾಗಿ ನೀಡ್ತೀನಿ ಅಂತ ಮಾಜಿ ಸಿಎಂ ಸಿದ್ದರಾಮಯ್ಯ ಘೋಷಿಸಿದ್ದಾರೆ. ಈ ಮೂಲಕ ಮತ್ತೆ ಸಿಎಂ ಆಗೋ ಆಸೆಯನ್ನ ಸಿದ್ದರಾಮಯ್ಯ ಬಿಚ್ಚಿಟ್ಟಿದ್ದಾರೆ.

ನಾನು ಸಿಎಂ ಆಗಿದ್ದಾಗ 5 ವರ್ಷ ಆಡಳಿತ ನಡೆಸಿದ್ದೇನೆ. ಪ್ರಮಾಣ ವಚನ ಸ್ವೀಕಾರ ಮಾಡಿದ ಅರ್ಧ ಗಂಟೆಯಲ್ಲಿ ಅನ್ನಭಾಗ್ಯ ಜಾರಿ ಮಾಡಿದೆ. ಮೋದಿ ಎಲ್ಲಾದ್ರೂ ಅಕ್ಕಿ ಕೊಟ್ರಾ, ಅದರ ಬದಲು ಮನ್ ಕಿ ಬಾತ್ ಅಂತಾರೆ. ಮನ್ ಕಿ ಬಾತ್ ನಿಂದ  ಬಡವರ ಹೊಟ್ಟೆ ತುಂಬಲ್ಲ ಅಂತ ಕಿಡಿ ಕಾರಿದ್ದಾರೆ.

ಪ್ರಧಾನಿ ಮೋದಿ ಸ್ವಾತಂತ್ರ್ಯ ಹೋರಾಟ ಪ್ರಾರಂಭವಾದಾಗ ಹುಟ್ಟೇ ಇರಲಿಲ್ಲ. ಕಾಂಗ್ರೆಸ್ ಪಕ್ಷ ಸ್ವಾತಂತ್ರ್ಯ ತರಲಿಲ್ಲ ಅಂದ್ರೆ ಮೋದಿ ಹೇಗೆ ಪ್ರಧಾನಿಯಾಗ್ತಿದ್ರು? ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. 

ದೇಶಕ್ಕಾಗಿ ಬಿಜೆಪಿಯವರು ಯಾರಾದ್ರೂ ಸತ್ತಿದ್ದಾರಾ? ತೋರ್ಸಿ ನೋಡೋಣ. ಪಾಕಿಸ್ತಾನ ಸೋತ್ರೆ ಕಾಂಗ್ರೆಸ್ ನವರಿಗೆ ಕಣ್ಣೀರು ಬರ್ತದೆ ಅಂತೀರಾ? ಪಾಕಿಸ್ತಾನಕ್ಕೆ ಹೋಗಿ ಬಿರಿಯಾನಿ ತಿಂದು ಬರ್ಲಿಲ್ವಾ, ನಿಮಗೆ ನಾಚಿಕೆ ಆಗೋಲ್ವಾ? ಅಂತ ಗುಡುಗಿದ್ದಾರೆ.

ಮಹಾತ್ಮಾ ಗಾಂಧಿಯವರನ್ನು ಕೊಂದ ನಾಥೂರಾಮ್ ಗೋಡ್ಸೆ  ವಂಶಕ್ಕೆ ಸೇರಿದ ಮೋದಿಯಿಂದ ದೇಶಭಕ್ತಿ ಕಲಿಯಬೇಕಾಗಿಲ್ಲ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img