Thursday, September 23, 2021
Homeಜಿಲ್ಲೆಧಾರವಾಡದೇವೇಗೌಡರು ಪಾಕ್ ಗೆ ಸೀರೆ ಕೊಂಡೊಯ್ಯಲಿಲ್ಲ ! – ಪ್ರಧಾನಿಗೆ ಕುಮಾರಸ್ವಾಮಿ ತಿರುಗೇಟು

ಇದೀಗ ಬಂದ ಸುದ್ದಿ

ದೇವೇಗೌಡರು ಪಾಕ್ ಗೆ ಸೀರೆ ಕೊಂಡೊಯ್ಯಲಿಲ್ಲ ! – ಪ್ರಧಾನಿಗೆ ಕುಮಾರಸ್ವಾಮಿ ತಿರುಗೇಟು

ದೇವೇಗೌಡರು ಪ್ರಧಾನಿಯಾಗಿದ್ದಾಗ ದೇಶ ಶಾಂತವಾಗಿತ್ತು. ದೇವೇಗೌಡರು ಪಾಕಿಸ್ತಾನದ ಪ್ರಧಾನಿಗೆ ಕೊಡಲು ನಿಮ್ಮಂತೆ ಸೀರೆ ತೆಗೆದುಕೊಂಡು ಹೋಗಿರಲಿಲ್ಲ ಎಂದು ಪ್ರಧಾನಿ ಮೋದಿಗೆ ಸಿಎಂ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ. ಹುಬ್ಬಳ್ಳಿಯಲ್ಲಿ   ಮಾತನಾಡಿದ ಕುಮಾರಸ್ವಾಮಿ ನಾನು ಮಂಡ್ಯದಲ್ಲಿ ₹ 150 ಕೋಟಿ ಖರ್ಚು ಮಾಡಿದ್ದರೆ ಐಟಿ ಅಧಿಕಾರಿಗಳು ಏನೂ ದನ ಕಾಯುತ್ತಿದ್ರಾ ಅಂತಾ ಪ್ರಶ್ನಿಸಿದ್ದಾರೆ. ಮಂಡ್ಯದಲ್ಲಿ ನಿಖಿಲ್ 2 ಲಕ್ಷ ಅಂತರದಿಂದ ಗೆಲುವು ಸಾಧಿಸಲಿದ್ದಾರೆ ಅಂತ ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 

ಪ್ರಧಾನಿ ತರಹ ನಾನು ಬೊಗಳೆ ಮಾತನಾಡುವುದಿಲ್ಲ. ವಾಜಪೇಯಿ ಕರೆದುಕೊಂಡು ಬಂದು ಹುಬ್ಬಳ್ಳಿ- ಅಂಕೋಲಾ ರೈಲ್ವೆ ಯೋಜನೆಗೆ ಗುದ್ದಲಿ ಪೂಜೆ ಮಾಡಿಸಿದ್ರಿ. ಈಗ ಎಲ್ಲಿ ಹೋಯಿತು ಹುಬ್ಬಳ್ಳಿ-ಅಂಕೋಲ ರೈಲ್ವೆ ಯೋಜನೆ? ಎಂದು ಸಿಎಂ ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.  ಅವನ್ಯಾವನೋ ಗಣಿ ಕಳ್ಳ ನನ್ನ ಬಗ್ಗೆ ಆರೋಪ ಮಾಡ್ತಾನೆ. ಸಿಎಂ ಕಮಿಷನ್ ತೆಗೆದುಕೊಂಡ ಹಣದಿಂದ ಚುನಾವಣೆ ಮಾಡ್ತಾರೆ ಎಂದು ಆರೋಪ ಮಾಡ್ತಾನೆ ಎಂದು ಏಕವಚನದಲ್ಲೇ ಶ್ರೀರಾಮುಲು ವಿರುದ್ಧ ಕುಮಾರಸ್ವಾಮಿ ಗುಡುಗಿದ್ರು.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img