Monday, January 18, 2021
Home ಜಿಲ್ಲೆ ರಾಯಚೂರು ಸಿಎಂಗೆ ಏಕವಚನದಲ್ಲಿ ನಿಂದಿಸಿದ ಬಿಜೆಪಿ ಶಾಸಕ ...!

ಇದೀಗ ಬಂದ ಸುದ್ದಿ

ಸಿಎಂಗೆ ಏಕವಚನದಲ್ಲಿ ನಿಂದಿಸಿದ ಬಿಜೆಪಿ ಶಾಸಕ …!

ಸಿಎಂ ಕುಮಾರಸ್ವಾಮಿ ವಿರುದ್ಧ ಆಕ್ಷೇಪಾರ್ಹ ಪದ ಬಳಸಿ ಬಿಜೆಪಿ ಶಾಸಕ ಕೆ.ಶಿವನಗೌಡ  ನಾಯಕ ವಾಗ್ದಾಳಿ ನಡೆಸಿದ್ದಾರೆ. ರಾಯಚೂರು ಲೋಕಸಭೆ ಚುನಾವಣೆ ಪ್ರಚಾರದ ವೇಳೆ ಮಾತನಾಡಿ ಗಂಡನಿಲ್ಲದ ಹೆಣ್ಣು ಮಗಳನ್ನು ಸೋಲಿಸಲು ಕುಮಾರಸ್ವಾಮಿ ಒಂದು ಬೂತ್ ಗೆ 5 ಲಕ್ಷ ರೂ. ನೀಡಿದ್ದಾರೆ. ಇಂಥವರನ್ನು ರಾಜ್ಯದ ಮುಖ್ಯಮಂತ್ರಿ ಅಂತಾರಾ? ಅಂತ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಅಂಬರೀಶ್​ ನನ್ನ ನೆಚ್ಚಿನ ಗುರು. ಸುಮಲತಾ ನನ್ನ ಅಕ್ಕನಂತೆ. ಅವರನ್ನು ಸೋಲಿಸಲು ಮಂಡ್ಯದಲ್ಲಿ 150 ಕೋಟಿ ಖರ್ಚು ಮಾಡುತ್ತಿದ್ದಾರೆ. ಆ ದುಡ್ಡೇನು ಅವರಪ್ಪನ ಮನೆಯದ್ದಾ? ಕುಮಾರಸ್ವಾಮಿ ರಾಜ್ಯವನ್ನು ಲೂಟಿ ಮಾಡಿದ ಹಣವಿದು ಅಂತ ಕಿಡಿಕಾರಿದ್ದಾರೆ.  

TRENDING