Monday, January 18, 2021
Home ರಾಜಕೀಯ ವಯನಾಡಿನಲ್ಲಿ ರಾಹುಲ್ ಟೆಂಪಲ್ ರನ್

ಇದೀಗ ಬಂದ ಸುದ್ದಿ

ವಯನಾಡಿನಲ್ಲಿ ರಾಹುಲ್ ಟೆಂಪಲ್ ರನ್

ಇದೇ ಮೊದಲ ಬಾರಿಗೆ ದಕ್ಷಿಣ ಭಾರತದಿಂದ ಸ್ಪರ್ಧೆ ಮಾಡಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಕೇರಳದ ವಿವಿಧ ದೇಗುಲಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ.ಇಂದು ಕೇರಳದ ತಿರುನೇಲಿ ದೇಗುಲಕ್ಕೆ ಭೇಟಿ ನೀಡಿದ್ದ ರಾಹುಲ್ ಗಾಂಧಿ ವಿವಿಧ ಬಗೆಯ ಪೂಜಾ ಕೈಂಕರ್ಯಗಳಲ್ಲಿ ಭಾಗಿಯಾಗಿದ್ರು. ರಾಹುಲ್ ಗಾಂಧಿಗೆ ಕಾಂಗ್ರೆಸ್ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಸಾಥ್ ನೀಡಿದರು. ದೇಗುಲದ ಅರ್ಚಕರ ಸೂಚನೆಯಂತೆ ಬಿಳಿ ಪಂಚೆ ಮತ್ತು ಧೋತಿ ಧರಿಸಿದ್ದ ರಾಹುಲ್ ಗಾಂಧಿ ತಮ್ಮ ಪೂರ್ವಜರಿಗೆ, ತಂದೆ ರಾಜೀವ್ ಗಾಂಧಿ, ಅಜ್ಜಿ ಇಂದಿರಾಗಾಂಧಿಗೂ ಪೂಜೆ ಸಲ್ಲಿಸಿದರು. ಅಂತೆಯೇ ಪುಲ್ವಾಮ ಉಗ್ರ ದಾಳಿಯಲ್ಲಿ ಸಾವನ್ನಪ್ಪಿದ ಯೋಧರಿಗೂ ರಾಹುಲ್ ಗಾಂಧಿ ಪೂಜೆ ಸಲ್ಲಿಕೆ ಮಾಡಿದ್ದು ವಿಶೇಷವಾಗಿತ್ತು. 

ರಾಹುಲ್ ಗಾಂಧಿ ಕಳೆದ ಬಾರಿ ಕೇರಳಕ್ಕೆ ಭೇಟಿ ನೀಡಿದ್ದಾಗಲೇ ಈ ಪೂಜೆಗಳನ್ನು ಸಲ್ಲಿಸಬೇಕಾಗಿತ್ತಂತೆ. ಆದರೆ ಭದ್ರತಾ ದೃಷ್ಟಿಯಿಂದ ಅವರ ಭದ್ರತಾ ಅಧಿಕಾರಿಗಳು ಕಳೆದ ಬಾರಿ ಇದಕ್ಕೆ ಅನುಮತಿ ನೀಡಿರಲಿಲ್ಲ. ಹೀಗಾಗಿ ಇಂದು ಪೂರ್ವ ಸಿದ್ಧತೆಯೊಂದಿಗೆ ರಾಹುಲ್ ಗಾಂಧಿ ಸಕಲ ಪೂಜಾ ಕೈಂಕರ್ಯದಲ್ಲಿ ಭಾಗಿಯಾಗಿದ್ರು.

TRENDING