Sunday, June 13, 2021
Homeಜಿಲ್ಲೆಜೆಡಿಎಸ್ ಗೆ ಮುಂದುವರಿದ ಐಟಿ ಶಾಕ್ – ಸಿಎಂ ಆಪ್ತರ ನಿವಾಸದ ಮೇಲೆ ರೇಡ್

ಇದೀಗ ಬಂದ ಸುದ್ದಿ

ಜೆಡಿಎಸ್ ಗೆ ಮುಂದುವರಿದ ಐಟಿ ಶಾಕ್ – ಸಿಎಂ ಆಪ್ತರ ನಿವಾಸದ ಮೇಲೆ ರೇಡ್

ಮಾಜಿ ಪ್ರಧಾನಿ ಹೆಚ್​ಡಿ ದೇವೇಗೌಡರ ತಮ್ಮನ ಮಗ, ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಪಾಪಣ್ಣಿ ಎಂಬುವವರ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.  ಹರದನಹಳ್ಳಿಯಲ್ಲಿ ಪಾಪಣ್ಣಿ ವಾಸವಾಗಿದ್ದು, ಬೆಳ್ಳಂಬೆಳಗ್ಗೆ ಮೂರು ಇನ್ನೋವಾ ಕಾರಿನಲ್ಲಿ  ಆಗಮಿಸಿದ  15 ಅಧಿಕಾರಿಗಳ ತಂಡ ದಾಳಿ ನಡೆಸಿದೆ. ಅಧಿಕಾರಿಗಳು ಮಹತ್ವದ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ.

ಇನ್ನೊಂದೆಡೆ ಲೋಕೋಪಯೋಗಿ ಸಚಿವ ಹೆಚ್​ಡಿ ರೇವಣ್ಣ ಆಪ್ತ ಕಾರ್ಲೆ ಇಂದ್ರೇಶ್ ಎಂಬುವರ ಮನೆ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದು, ಮನೆಯಲ್ಲಿ ತೀವ್ರ  ಶೋಧ ನಡೆಸಿದ್ದಾರೆ.  ಇಂದ್ರೇಶ್​ ಗುತ್ತಿಗೆದಾರರಾಗಿ ಹಾಗೂ ಹಾಸನ ಜಿಲ್ಲಾ ಕೋ-ಆಪರೇಟಿವ್​ ಸೆಂಟ್ರಲ್​ ಬ್ಯಾಂಕ್​​​(HDCC) ನಲ್ಲಿ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಇನ್ನೊಂದೆಡೆ  ಮಂಡ್ಯದಲ್ಲಿ ಮತ್ತೆ ಐಟಿ ದಾಳಿ ಮುಂದುವರೆದಿದೆ. ಸಿಎಂ  ಕುಮಾರಸ್ವಾಮಿ ಹಾಗೂ  ಸಚಿವ ಡಿಸಿ ತಮ್ಮಣ್ಣ ಆಪ್ತ ಸಾದೊಳಲು ಸ್ವಾಮಿ ಕಂಪನಿ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಮದ್ದೂರು ಸಮೀಪದ ಸೋಮನಹಳ್ಳಿ ಕೈಗಾರಿಕಾ ವಲಯದಲ್ಲಿರುವ ಸೋಮೇಶ್ವರ ಫರ್ಟಿಲೈಜರ್ ಕಂಪನಿ ಮೇಲೆ ದಾಳಿ ನಡೆಸಿ, ಮಹತ್ವದ ದಾಖಲೆಗಳನ್ನ ಪರಿಶೀಲನೆ ನಡೆಸಲಾಗುತ್ತಿದೆ.

ಇನ್ನೊಂದೆಡೆ ಸಚಿವ ಪುಟ್ಟರಾಜು ಬೆಂಬಲಿಗನಿಗೂ ಐಟಿ ಶಾಕ್ ನೀಡಿದೆ. ಪಾಂಡವಪುರದ ಜಿ.ಪಂ ಸದಸ್ಯ, ಸಚಿವ ಪುಟ್ಟರಾಜು ಆಪ್ತ ತಿಮ್ಮೇಗೌಡರ ಮನೆ, ಕಚೇರಿ, ಪೆಟ್ರೋಲ್ ಬಂಕ್ ಹಾಗೂ ಸಾಮಿಲ್ ಮೇಲೆ ಏಕ ಕಾಲಕ್ಕೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಚುನಾವಣೆಗೆ ಹಣ ಸಂಗ್ರಹ, ಮುಂದಾಳತ್ವ ಹಾಗೂ ಚುನಾವಣಾ ಅಕ್ರಮದ ಆರೋಪದ ಹಿನ್ನೆಲೆ ದಾಳಿ ನಡೆದಿದೆ ಎನ್ನಲಾಗಿದೆ. ಇನ್ನೋವಾ ಕಾರಿನಲ್ಲಿ ಬಂದ 8 ಅಧಿಕಾರಿಗಳ ತಂಡದಿಂದ ದಾಳಿ ನಡೆಸಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img