Wednesday, September 22, 2021
Homeರಾಜ್ಯಎಂ. ಬಿ. ಪಾಟೀಲ್ ಪತ್ರದ ಹಿಂದೆ ಬಿಜೆಪಿ ಕೈವಾಡ..?

ಇದೀಗ ಬಂದ ಸುದ್ದಿ

ಎಂ. ಬಿ. ಪಾಟೀಲ್ ಪತ್ರದ ಹಿಂದೆ ಬಿಜೆಪಿ ಕೈವಾಡ..?

ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಪ್ರತ್ಯೇಕ ಧರ್ಮ ವಿವಾದ  ಮತ್ತೆ ಚರ್ಚೆಗೆ ಬಂದಿದೆ. 2018 ರ ವಿಧಾನಸಭಾ ಚುನವಾಣೆಗೂ ಮುನ್ನ ವೀರಶೈವ-ಲಿಂಗಾಯತ ಧರ್ಮವನ್ನು ಒಡೆದು ಲಿಂಗಾಯತ ಪ್ರತ್ಯೇಕ ಧರ್ಮ ಮಾಡುವುದರಿಂದ ಯಾವ ರೀತಿ ಲಾಭ ಆಗಲಿದೆ ಎಂದು ಗೃಹ ಸಚಿವ ಎಂ ಬಿ. ಪಾಟೀಲ್ ಆಗಿನ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರಿಗೆ ಪತ್ರವನ್ನ ಬರೆದಿದ್ದರು ಎನ್ನಲಾಗಿದೆ. ಈ ಪತ್ರ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಗ್ಲೋಬಲ್ ಕ್ರಿಶ್ಚಿಯನ್ ಕೌನ್ಸಿಲ್ ಹಾಗೂ ವರ್ಲ್ಡ್ ಇಸ್ಲಾಮಿಕ್ ಆರ್ಗನೈಸೇಷನ್ ಅನುಮತಿಯಂತೆ ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟಕ್ಕೆ ಕಾಂಗ್ರೆಸ್ ಮುಂದಾಗಿದೆ ಎಂಬುದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.  ಬಿಎಲ್​​ಡಿಈ ಅಸೋಸಿಯೇಷನ್ ಲೆಟರ್ ಹೆಡ್ ನಲ್ಲಿ ದಿನಾಂಕ 10-7-2017 ರಂದು ಪತ್ರ ಬರೆಯಲಾಗಿದೆ. ಇಂತಹ ಯಾವುದೇ ಪತ್ರವನ್ನ ನಾನು ಬರೆದಿಲ್ಲ ಅಂತ ಗೃಹ ಸಚಿವ ಎಂ. ಬಿ ಪಾಟೀಲ್ ಸ್ಪಷ್ಟಪಡಿಸಿದ್ದಾರೆ.

ಪತ್ರ ನಕಲಿಯಾಗಿದ್ದು  ಈ ಕುರಿತು ತನಿಖೆ ನಡೆಸಲಾಗುವುದು’ ಎಂದು ಪ್ರತಿಕ್ರಿಯಿಸಿದ್ದಾರೆ. ಈ ಪತ್ರವನ್ನ ಬಿಜೆಪಿ ರಾಜ್ಯ ಐಟಿ ಸೇಲ್ ತನ್ನ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img