Sunday, September 19, 2021
HomeದೇಶDRDO ದ ನಿರ್ಭಯ್ ಕ್ಷಿಪಣಿ ಪರೀಕ್ಷೆ ಸಕ್ಸಸ್

ಇದೀಗ ಬಂದ ಸುದ್ದಿ

DRDO ದ ನಿರ್ಭಯ್ ಕ್ಷಿಪಣಿ ಪರೀಕ್ಷೆ ಸಕ್ಸಸ್

ಭಾರತ  ಮತ್ತೊಂದು ಮೈಲಿಗಲ್ಲು ಸೃಷ್ಟಿಸಿದೆ. ಒಡಿಶಾ ಕರಾವಳಿ ತೀರದಿಂದ ನಿರ್ಭಯ್​​ ಹೆಸರಿನ ಸಬ್​​ ಸೋನಿಕ್​ ಕ್ರೂಸ್​​ ಮಿಸೈಲ್​​​​​ ಪರೀಕ್ಷೆ ನಡೆಸಿ ಭಾರತ ಯಶಸ್ವಿಯಾಗಿದೆ. ನಿರ್ಭಯ್,​​ ದೇಶದ ಮೊಟ್ಟಮೊದಲ ದೇಸಿ ನಿರ್ಮಿತ ದೂರವ್ಯಾಪಿ ಕ್ರೂಸ್​​ ಕ್ಷಿಪಣಿಯಾಗಿದ್ದು 1000 ಕಿ.ಮೀ ಸ್ಟ್ರೈಕ್​​ ರೇಂಜ್​ ಹೊಂದಿದೆ. ಬೆಂಗಳೂರು ಮೂಲದ ಏರೋನಾಟಿಕಲ್ ಡೆವಲಪ್​ಮೆಂಟ್​​ ಎಸ್ಟಾಬ್ಲಿಷ್​​ಮೆಂಟ್​​​ ಲ್ಯಾಬ್  ಈ ಕ್ಷಿಪಣಿಯನ್ನ ಅಭಿವೃದ್ಧಿಪಡಿಸಿದೆ.

ಸಾಮಾನ್ಯ ಅಸ್ತ್ರಗಳು ಹಾಗೂ ಅಣ್ವಸ್ತ್ರಗಳನ್ನು ಹೊತ್ತೊಯ್ಯುವಂತೆ ಕ್ಷಿಪಣಿಯನ್ನ ವಿನ್ಯಾಸಗೊಳಿಸಲಾಗಿದೆ. ಅಣ್ವಸ್ತ್ರ ಸಾಮರ್ಥ್ಯ ಹೊಂದಿರೋ ನಿರ್ಭಯ್​​ ಗಂಟೆಗೆ ಸುಮಾರು 740ರಿಂದ 864 ಕಿ.ಮೀ ವೇಗದಲ್ಲಿ ಕ್ರಮಿಸಬಲ್ಲುದು.  DRDO ಸಾಧನೆಗೆ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img