Thursday, September 23, 2021
Homeದೇಶಮೋದಿ ಟಿವಿ ಪ್ರಚಾರಕ್ಕೆ ಹಣ ಎಲ್ಲಿಂದ ಬರುತ್ತೆ..? ರಾಹುಲ್ ಗಾಂಧಿ ಪ್ರಶ್ನೆ

ಇದೀಗ ಬಂದ ಸುದ್ದಿ

ಮೋದಿ ಟಿವಿ ಪ್ರಚಾರಕ್ಕೆ ಹಣ ಎಲ್ಲಿಂದ ಬರುತ್ತೆ..? ರಾಹುಲ್ ಗಾಂಧಿ ಪ್ರಶ್ನೆ

”ಟಿವಿಯಲ್ಲಿ ಕೇವಲ 30 ಸೆಕೆಂಡುಗಳ ಚುನಾವಣಾ ಜಾಹೀರಾತಿಗೆ ಲಕ್ಷಾಂತರ ರೂಪಾಯಿ ವ್ಯಯಿಸಬೇಕಾಗುತ್ತದೆ. ಆದ್ರೆ ಪ್ರಧಾನಿ ನರೇಂದ್ರ ಮೋದಿಯವರ ದೊಡ್ಡ ಮಟ್ಟದ ಟಿವಿ ಜಾಹೀರಾತು ಪ್ರಚಾರಕ್ಕೆ ಯಾರು ಹಣ ಕೊಡುತ್ತಿದ್ದಾರೆ ?” ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಪ್ರಶ್ನಿಸಿದ್ದಾರೆ.

ಫ‌ತೇಪುರ ಸಿಕ್ರಿಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ರಾಜ್‌ ಬಬ್ಬರ್‌ ಪರವಾಗಿ ನಡೆದ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ರಾಹುಲ್‌ ಗಾಂಧಿ “ಎಲ್ಲಿ ನೋಡಿದರೂ ನರೇಂದ್ರ ಮೋದಿ ಅವರ ಪಬ್ಲಿಸಿಟಿಯೇ ಕಂಡು ಬರುತ್ತಿದೆ. ಇದಕ್ಕೆಲ್ಲ ಹಣ ಎಲ್ಲಿಂದ, ಯಾರಿಂದ ಬರುತ್ತಿದೆ ? ಮೋದಿ ಜೇಬಿನಿಂದ ಹಣ ಬರುತ್ತಿಲ್ಲ” ಎಂದು ರಾಹುಲ್‌ ಗಾಂಧಿ ಕುಟುಕಿದ್ದಾರೆ.

”ಪ್ರಧಾನಿ ಮೋದಿ ಸಾರ್ವಜನಿಕರ ಹಣವನ್ನು ಲೂಟಿ ಮಾಡಿದ್ದಾರೆ. ಅದನ್ನು ದೇಶಭ್ರಷ್ಟ ಅರ್ಥಿಕ ಅಪರಾಧಿಗಳಾದ ನೀರವ್‌ ಮೋದಿ, ಮೆಹುಲ್‌ ಚೋಕ್ಸಿ ಮತ್ತು ವಿಜಯ್‌ ಮಲ್ಯ ಅವರಿಗೆ ನೀಡಿದ್ದಾರೆ” ಎಂದು ಆರೋಪಿಸಿದ್ರು.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img