Monday, January 18, 2021
Home ಜಿಲ್ಲೆ ಬಾಗಲಕೋಟೆ ಬತ್ತಿ ಹೋದ ಕೃಷ್ಣಾ ನದಿ - ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ 2 ಟಿಎಂಸಿ ನೀರು...

ಇದೀಗ ಬಂದ ಸುದ್ದಿ

ಬತ್ತಿ ಹೋದ ಕೃಷ್ಣಾ ನದಿ – ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ 2 ಟಿಎಂಸಿ ನೀರು ಕೊಡಿ..

ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಕೃಷ್ಣಾ ನದಿ ಮತ್ತು ಹಿಪ್ಪರಗಿ ಬ್ಯಾರೇಜ್ ನೀರಿಲ್ಲದೆ ಖಾಲಿ ಖಾಲಿಯಾಗಿದೆ.  

 ಕೃಷ್ಣಾ ನದಿ ಬರಿದಾಗಿರುವುದರಿಂದ ನದಿ ಪಕ್ಕದ ಗ್ರಾಮಗಳ ಜನರು ಹಾಗೂ ಜಾನುವಾರುಗಳಿಗೆ ನೀರಿನ ಅಭಾವ ಉಂಟಾಗಿದೆ. ರಾಜ್ಯ ಸರ್ಕಾರ ಎಚ್ಚೆತ್ತುಕೊಂಡು ಮಹಾರಾಷ್ಟ್ರ ಸರ್ಕಾರಕ್ಕೆ ಮನವಿ ಮಾಡಿ ಕೊಯ್ನಾ ಜಲಾಶಯದಿಂದ 2 ಟಿಎಂಸಿ ನೀರು  ಕೂಡಲೇ ಬಿಡುಗಡೆ ಮಾಡಬೇಕೆಂದು  ನಿರಾಣಿ ಸಕ್ಕರೆ ಕಾರ್ಖಾನೆಯ ನಿರ್ದೇಶಕ ಸಂಗಮೇಶ್ ನಿರಾಣಿ ಆಗ್ರಹಿಸಿದ್ದಾರೆ. ನದಿ ಸುತ್ತಮುತ್ತಲಿನ ಗ್ರಾಮಸ್ಥರು  ಮತ್ತು  ಹಿಪ್ಪರಗಿ ಗ್ರಾಮದಲ್ಲಿ ಸಭೆ ಸೇರಿ ಚರ್ಚಿಸಿ, ಜಮಖಂಡಿ ಉಪ ವಿಭಾಗಾಧಿಕಾರಿಗಳಿಗೆ ಮನವಿ  ಸಲ್ಲಿಸಿದ್ರು. ಇದೇ ವೇಳೆ ನದಿಗೆ ತೆರಳಿ ನದಿ ಬರಿದಾಗಿರೋದನ್ನು ವೀಕ್ಷಿಸಿದರು.

TRENDING