Saturday, July 31, 2021
Homeಜಿಲ್ಲೆಕೋಲಾರಕೆ. ಹೆಚ್. ಮುನಿಯಪ್ಪ ವಿರುದ್ಧ "ಸಿಡಿ"ದ ಬಾಂಬ್..!

ಇದೀಗ ಬಂದ ಸುದ್ದಿ

ಕೆ. ಹೆಚ್. ಮುನಿಯಪ್ಪ ವಿರುದ್ಧ “ಸಿಡಿ”ದ ಬಾಂಬ್..!

ಕೆಎಚ್ ಮುನಿಯಪ್ಪ ವಿರುದ್ಧದ ಮುಳಬಾಗಿಲು ಮಾಜಿ ಶಾಸಕ ಕೊತ್ತೂರು ಮಂಜುನಾಥ್ ಸಿಡಿ ಬಿಡುಗಡೆ ಮಾಡಿದ್ದಾರೆ. ಸಿಡಿಯಲ್ಲಿ ಕೆಎಚ್ ಮುನಿಯಪ್ಪ ಒಕ್ಕಲಿಗರ ವಿರುದ್ಧ ಮಾತನಾಡಿದ್ದಾರೆ. ಶಾಸಕ ಕೊತ್ತೂರು ಮಂಜುನಾಥ್ ಜಾತಿ ಪ್ರಮಾಣಪತ್ರ ಊರ್ಜಿತವಾಗಲು ಬಿಡಲ್ಲ ಎಂದು ಹೇಳಿದ್ದಾರೆ. ಜೆಡಿಎಸ್ ಶಾಸಕ ಕೆ.ಶ್ರಿನಿವಾಸಗೌಡರಿಗೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ತಪ್ಪಿಸಿದ್ದು ನಾನೇ ಎಂದು ಹೇಳಿದ್ದಾರೆ. ಎರಡು ಜಿಲ್ಲೆಗಳಲ್ಲಿ ಒಕ್ಕಲಿಗರ ಅಧಿಪತ್ಯ ಜಾಸ್ತಿಯಾಗಿದೆ ಎಂದು ಹೇಳಿರೋದು ಅಡಿಯೋದಲ್ಲಿ ದಾಖಲಾಗಿದೆ.

ದಲಿತ ಮುಖಂಡರೊಬ್ಬರ ಮನೆಯಲ್ಲಿ ಕಳೆದ ವಿಧಾನಸಭಾ ಚುನಾವಣೆ ಸಮಯದಲ್ಲಿ ಮಾತನಾಡಿರುವ ವಿಡಿಯೋ ಇದಾಗಿದೆ.  ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮುಳಬಾಗಿಲು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಆಭ್ಯರ್ಥಿಯಾಗಿ ಕೊತ್ತೂರು ಮಂಜುನಾಥ್ ನಾಮಪತ್ರ ಸಲ್ಲಿಸಿದ್ದರು. ನಾಮಪತ್ರ ಪರಿಶೀಲನೆ ನಡೆಯುವ ಒಂದು ದಿನದ ಮುಂಚೆ ಹೈಕೋರ್ಟ್ ನಲ್ಲಿ ಕೊತ್ತೂರು ಮಂಜುನಾಥ್  ಜಾತಿ ಪ್ರಮಾಣ ಪತ್ರ ತಿರಸ್ಕ್ರತವಾದ ಹಿನ್ನೆಲೆಯಲ್ಲಿ ನಾಮಪತ್ರ ತಿರಸ್ಕಾರವಾಗಿತ್ತು.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img