Wednesday, September 22, 2021
Homeಜಿಲ್ಲೆಬೆಂಗಳೂರುಭೂ ವ್ಯಾಜ್ಯಗಳಲ್ಲಿ ಪೊಲೀಸರು ತಲೆಹಾಕಬೇಡಿ - ನೀಲಮಣಿ ರಾಜು ಖಡಕ್ ಆದೇಶ

ಇದೀಗ ಬಂದ ಸುದ್ದಿ

ಭೂ ವ್ಯಾಜ್ಯಗಳಲ್ಲಿ ಪೊಲೀಸರು ತಲೆಹಾಕಬೇಡಿ – ನೀಲಮಣಿ ರಾಜು ಖಡಕ್ ಆದೇಶ

ಭೂ ವ್ಯಾಜ್ಯಗಳ ಕುರಿತು ಪೊಲೀಸರು ಅನುಸರಿಸಬೇಕಾದ ಕ್ರಮಗಳ ಬಗ್ಗೆ ಪೊಲೀಸ್ ಮಹಾ ನಿರ್ದೇಶಕಿ ನೀಲಮಣಿ ರಾಜು ಸುತ್ತೋಲೆ ಹೊರಡಿಸಿದ್ದಾರೆ. ಭೂ ದಾಖಲೆಗಳು ಯಾರ ಹೆಸರಿನಲ್ಲಿವೆಯೋ ಆತನಿಗೇ ರಕ್ಷಣೆ ನೀಡಬೇಕು. ಸಂಬಂಧಿಸಿದ ವ್ಯಾಜ್ಯ ನ್ಯಾಯಾಲಯದಲ್ಲಿಯೇ ಪರಿಹಾರವಾಗಬೇಕು ಎಂದು ಡಿಜಿ ಐಜಿ ಸ್ಪಷ್ಟ ನಿರ್ದೇಶನ ನೀಡಿದ್ದಾರೆ.

ಜಿಪಿಎ ಮೂಲಕ ಕೃಷಿ ಅಥವಾ ಕೃಷಿಯೇತರ ಭೂಮಿಯ ಸ್ವಾಧೀನ ಪಡೆಯಲು ಬಯಸುವ ವ್ಯಕ್ತಿಗೆ ರಕ್ಷಣೆ ನೀಡುವಂತಿಲ್ಲ ಎಂದೂ  ತಾಕೀತು ಮಾಡಿದ್ದಾರೆ.

ಜಮೀನು ಮಾರಾಟದ ಒಪ್ಪಂದ ಪತ್ರ, ಅಡ್ವಾನ್ಸ್ ಹಣ ನೀಡಿರುವ ದಾಖಲೆಗಳ ಆಧಾರದ ಮೇಲೆ ಒಂದು ವೇಳೆ, ನಿಜವಾದ ಮಾಲೀಕನನ್ನ ಹೊರ ಹಾಕಿದರೆ ಸಂಬಂಧಪಟ್ಟ ಪೊಲೀಸರು ಕರ್ತವ್ಯ ಲೋಪದ ಆರೋಪ ಎದುರಿಸಬೇಕಾಗುತ್ತದೆ.

ಜಮೀನಿಗೆ ಸಂಬಂಧಿಸಿದಂತೆ ಯಾರೇ ನ್ಯಾಯಾಲಯದ ತಡೆ ಆದೇಶ ಪ್ರತಿ ಅಥವಾ ಯಾವುದೇ ಆದೇಶ ಪ್ರತಿ ತಂದಲ್ಲಿ ಸ್ಥಳೀಯ ತಹಸೀಲ್ದಾರ್ ಜೊತೆ ಚರ್ಚಿಸಿ ಲಿಖಿತ ಸೂಚನೆ ಪಡೆಯತಕ್ಕದ್ದು.

ಕೃಷಿ ಜಮೀನಿನ ಗಡಿ ವಿಚಾರಕ್ಕೆ ಸಂಬಂಧಿಸಿದಂತೆ ತಕರಾರುಗಳು ಬಂದಾಗ ಸ್ಥಳೀಯ ತಹಸೀಲ್ದಾರ್​ ಜೊತೆ ತೆರಳಿ ಸರ್ವೆ ಮಾಡಿಸಿ, ನಿರ್ಧರಿಸಬೇಕು.  ಸಂಬಂಧಿಸಿದವರಿಗೆ ರಕ್ಷಣೆ ನೀಡಬೇಕು.

ಕೃಷಿಯೇತರ ಜಮೀನಿನ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಸ್ಥಳೀಯ ನಗರ ಸಭೆ ಅಥವಾ ಸಂಬಂಧಪಟ್ಟ ಇಲಾಖೆಯಿಂದ ಸರ್ವೆ ಮಾಡಿಸಿ ನಿರ್ಧರಿಸಿ ಅದರ ಅಧಿಕಾರ ಹೊಂದಿದ ವ್ಯಕ್ತಿಗೆ ರಕ್ಷಣೆ ನೀಡಬೇಕು.

ಕೃಷಿಯೇತರ ಜಮೀನಿನ ಅಧಿಕಾರದ ಕುರಿತು ಎರಡೂ ಕಡೆಯವರು ಪಹಣಿ ದಾಖಲೆಗಳನ್ನ ಹಾಜರುಪಡಿಸಿದಾಗ ಪರಿಶೀಲಿಸಿ ಸುಳ್ಳು ದಾಖಲೆ ನೀಡಿದವರ ವಿರುದ್ಧ ದೂರು ದಾಖಲಿಸಿಕೊಳ್ಳಬೇಕು.

ನ್ಯಾಯಾಲಯದ ಆದೇಶ ಪಾಲಿಸಲು ಸಾಧ್ಯವಾಗದಿದ್ದ ಪಕ್ಷದಲ್ಲಿ ಅಭಿಯೋಜಕ ಸಹಾಯಕ ನಿರ್ದೇಶಕರು, ಕಾನೂನು ಸಲಹೆಗಾರರ ಸಲಹೆ ಪಡೆದು, ನ್ಯಾಯಾಲಯಕ್ಕೆ ಸೂಕ್ತ ಕಾರಣಗಳ ವರದಿ ನೀಡಬೇಕು.

ಕೃಷಿ/ಕೃಷಿಯೇತರ ಭೂಮಿಯನ್ನ ಅಕ್ರಮವಾಗಿ ಸ್ವಾಧೀನದಲ್ಲಿರಿಸಿಕೊಂಡಿರುವುದು ತನಿಖೆಯಲ್ಲಿ ಸಾಬೀತಾದರೆ ಅಂತವರ ವಿರುದ್ಧ ಕ್ರಮ ಕೈಗೊಂಡು ತಕ್ಷಣ ತೆರವುಗೊಳಿಸಬೇಕು.

ಕೃಷಿಯೇತರ ಭೂಮಿ/ಕಟ್ಟಡವನ್ನ ಬಾಡಿಗೆ/ಭೋಗ್ಯಕ್ಕೆ ಪಡೆದವರು ಒಪ್ಪಂದ ಮುಗಿದ ಬಳಿಕ ನವೀಕರಿಸದೇ ಅಕ್ರಮವಾಗಿ ಇರುವ ಕುರಿತು ದೂರು ಬಂದಲ್ಲಿ ದಾಖಲಿಸಿಕೊಂಡು ಕ್ರಮ ಕೈಗೊಳ್ಳಬೇಕು.

ಒಂದೇ ಸ್ವತ್ತನ್ನ ಹಲವರಿಗೆ ಮಾರಾಟ ಮಾಡಿದ ದೂರುಗಳು ಬಂದರೆ ಪ್ರಥಮ ಖರೀದಿದಾರ ಆ ಸ್ವತ್ತಿನ ಮಾಲೀಕನಾಗುತ್ತಾನೆ. ಉಳಿದವರು ವಂಚಿತರಾಗಿದ್ದು ಅವರ ದೂರನ್ನ ದಾಖಲಿಸಿಕೊಂಡು ಕ್ರಮ ಕೈಗೊಳ್ಳತಕ್ಕದ್ದು  ನೀಲಮಣಿ ರಾಜು ಸುತ್ತೋಲೆಯಲ್ಲಿ ಖಡಕ್​ ಆದೇಶ ನೀಡಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img