Thursday, September 23, 2021
Homeರಾಜ್ಯನಾಳೆ ಯಡಿಯೂರಪ್ಪ ಅಸಲಿ ಡೈರಿ ಬಿಡುಗಡೆ..!

ಇದೀಗ ಬಂದ ಸುದ್ದಿ

ನಾಳೆ ಯಡಿಯೂರಪ್ಪ ಅಸಲಿ ಡೈರಿ ಬಿಡುಗಡೆ..!

ಬಿಜೆಪಿ ಹಿರಿಯ ಮುಖಂಡ ಈಶ್ವರಪ್ಪ ಮಾಜಿ ಆಪ್ತ ಹಾಗೂ ಸಹಾಯಕ ವಿನಯ್ ಹೊಸ ಬಾಂಬ್ ಸಿಡಿಸಿದ್ದಾರೆ. ಯಡಿಯೂರಪ್ಪ ಕುರಿತ ಅಸಲಿ ಡೈರಿ ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ. ಈ ಕುರಿತಂತೆ ಸೂಕ್ತ ರಕ್ಷಣೆ ಕೋರಿ ಪೋಲೀಸ್ ಮೊರೆ ಹೋಗಿದ್ದಾರೆ.

ಅಮೃತಹಳ್ಳಿ ಪೋಲೀಸ್ ಠಾಣೆಗೆ ಆಗಮಿಸಿ ಭದ್ರತೆ ಕೋರಿರುವ ವಿನಯ್ ನಾಳೆ ಯಡಿಯೂರಪ್ಪ ಅವರ ಅಸಲಿ ಡೈರಿ ಬಿಡುಗಡೆ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದಾರೆ. ನನಗೆ ಪ್ರಾಣ ಬೆದರಿಕೆ ಇದ್ದು ಗನ್ ಮ್ಯಾನ್ ಒದಗಿಸುವಂತೆ ಕೋರಿದ್ದಾರೆ. ನನ್ನ ಬಳಿ ಯಡಿಯೂರಪ್ಪಗೆ ಸಂಬಂಧಿಸಿದ ಡೈರಿ ಇದ್ದು ಅದಕ್ಕೆ ರಕ್ಷಣೆ ಬೇಕು ಎಂದು ವಿನಯ್ ಮನವಿ ಮಾಡಿದ್ದಾರೆ. 2017 ರಲ್ಲಿ 11 ಜನರಿಂದ ವಿನಯ್ ಅಪಹರಣ ಯತ್ನ ನಡೆದಿತ್ತು.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img