Thursday, September 23, 2021
Homeದೇಶನಿರುದ್ಯೋಗಿ ಕನ್ಹಯ್ಯ ಕುಮಾರ್ ದುಡ್ಡು ಗಳಿಸಿದ್ದಾದ್ರೂ ಹೇಗೆ..?

ಇದೀಗ ಬಂದ ಸುದ್ದಿ

ನಿರುದ್ಯೋಗಿ ಕನ್ಹಯ್ಯ ಕುಮಾರ್ ದುಡ್ಡು ಗಳಿಸಿದ್ದಾದ್ರೂ ಹೇಗೆ..?

ದೆಹಲಿಯ ಜೆಎನ್​ಯು ವಿಶ್ವವಿದ್ಯಾಲಯದ ವಿದ್ಯಾರ್ಥಿ ಒಕ್ಕೂಟದ ಮಾಜಿ ಮುಖಂಡ ಕನ್ಹಯ್ಯ ಕುಮಾರ್​ ಸಿಪಿಐ ಪಕ್ಷದ ಅಭ್ಯರ್ಥಿಯಾಗಿ ಬೇಗುಸರಾಯ್ ಲೋಕಸಭಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದಾರೆ. ಚುನಾವಣಾಧಿಕಾರಿಗೆ ಸಲ್ಲಿಸಿರುವ ಅಫಿಡವಿಟ್​ನಲ್ಲಿ ಕಳೆದ ಎರಡು ವರ್ಷದಲ್ಲಿ 8.5 ಲಕ್ಷ ರೂಪಾಯಿ ಆದಾಯ ಗಳಿಸಿದ್ದಾಗಿ ಘೋಷಿಸಿಕೊಂಡಿದ್ದಾರೆ. ತಾನೊಬ್ಬ ನಿರುದ್ಯೋಗಿ ಅಂತಾನೂ ಅಫಿಡವಿಟ್​ನಲ್ಲಿ ಉಲ್ಲೇಖಿಸಿದ್ದಾರೆ.
ಜೀವನ ಸಾಗಿಸಲು ಅರೆಕಾಲಿಕ ಬರಹಗಾರನಾಗಿ ಹಾಗೂ ಕೆಲ ಕಾಲೇಜುಗಳಿಗೆ ಅತಿಥಿ ಉಪನ್ಯಾಸಕನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ನಾನು ಬರೆದ ‘ಬಿಹಾರ್​ ಟು ತಿಹಾರ್​’ ಪುಸ್ತಕ ಮಾರಾಟದಿಂದ ಕಳೆದೆರೆಡು ವರ್ಷದಿಂದ ಆದಾಯ ಗಳಿಸುತ್ತಿದ್ದೇನೆ ಅಂತಾ ಕನ್ಹಯ್ಯ ಕುಮಾರ್​ ಅಫಿಡವಿಟ್​ನಲ್ಲಿ ಉಲ್ಲೇಖಿಸಿದ್ದಾರೆ. ಕೈಯಲ್ಲಿ 24,000 ರೂಪಾಯಿ ನಗದು , ಬ್ಯಾಂಕ್ ಖಾತೆಯಲ್ಲಿ 3,57, 848 ರೂಪಾಯಿ ಠೇವಣಿ ಹೊಂದಿದ್ದೇನೆ. ಸ್ವಂತ ಕೃಷಿ ಭೂಮಿ ಇಲ್ಲ , ಅಪ್ಪ ರೈತನಾಗಿದ್ದು, ಅಮ್ಮ ಅಂಗನವಾಡಿ ಕಾರ್ಯಕರ್ತೆಯಾಗಿದ್ದಾರೆ ಎಂದು ಕನ್ನಯ್ಯ ಅಫಿಡವಿಟ್‍ನಲ್ಲಿ ಉಲ್ಲೇಖಿಸಿದ್ದಾರೆ. ಕನ್ಹಯ್ಯ ಕುಮಾರ್​ ವಿರುದ್ದ 5 ಪ್ರಕರಣಗಳಿವೆ.
2016ರಲ್ಲಿ ಜೆಎನ್​ಯು ವಿಶ್ವವಿದ್ಯಾಲಯದ ಆವರಣದಲ್ಲಿ ಉಗ್ರ ಅಫ್ಜಲ್​ ಗುರು ಪರ ಘೋಷಣೆ ಕೂಗಿ ದೇಶದ್ರೋಹದ ಆಧಾರದ ಮೇಲೆ ಕನ್ಹಯ್ಯ ಕುಮಾರ್ ಬಂಧಿತನಾಗಿ ಪ್ರಚಾರಕ್ಕೆ ಬಂದಿದ್ದರು.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img