Wednesday, September 22, 2021
Homeದೇಶಇಮ್ರಾನ್ ಖಾನ್ ಪ್ರಧಾನಿ ಮೋದಿಯನ್ನ ಹೊಗಳಿದ್ದೇಕೆ...?

ಇದೀಗ ಬಂದ ಸುದ್ದಿ

ಇಮ್ರಾನ್ ಖಾನ್ ಪ್ರಧಾನಿ ಮೋದಿಯನ್ನ ಹೊಗಳಿದ್ದೇಕೆ…?

ಪ್ರಧಾನಿ ಮೋದಿ ಮತ್ತು ಭಾರತದ ವಿರುದ್ಧ ಕಿಡಿ ಕಾರುತ್ತಿದ್ದ ಪಾಕ್ ಪ್ರಧಾನಿ ಇಮ್ರಾನ್ ಖಾನ್ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿ ಆಗಬೇಕು ಎಂದು ಹೇಳಿದ್ದಾರೆ. ಇದರ ಬೆನ್ನಲ್ಲೇ ಪಾಕಿಸ್ತಾನದಲ್ಲಿರುವ 400 ದೇಗುಲ ಪುನರುಜ್ಜೀವನಕ್ಕೆ ಪಾಕ್ ಸರ್ಕಾರ ನಿರ್ಧರಿಸಿದೆ.
ಭಾರತ-ಪಾಕಿಸ್ತಾನ ಬೇರ್ಪಟ್ಟಾಗ ಬಹುತೇಕ ಹಿಂದೂಗಳು ಪಾಕ್ ತೊರೆದಿದ್ದರು. ಈ ವೇಳೆ ಪಾಕ್ ನಲ್ಲಿದ್ದ ಬಹುತೇಕ ದೇವಾಲಯಗಳ ಜಾಗ ಖಾಸಗಿಯವರ ಪಾಲಾಗಿತ್ತು. ಇನ್ನು ಕೆಲವು ದೇವಸ್ಥಾನಗಳು ಮದರಸಾ ಆಗಿ ಪರಿವರ್ತನೆ ಆಗಿದ್ದವು. 
ಇದೀಗ ಪಾಕಿಸ್ತಾನ ಸರ್ಕಾರ ಇಂಥ ದೇವಸ್ಥಾನಗಳನ್ನು ಪುನಃ ತೆರೆಯಲು ಮತ್ತು ಪೂಜೆಗೆ ಅವಕಾಶ ಮಾಡಿಕೊಟ್ಟು ಅವುಗಳನ್ನು ಹಿಂದೂ ಸಮುದಾಯಕ್ಕೆ ಹಸ್ತಾಂತರಿಸಲು ಮುಂದಾಗಿದೆ. ಈ ಪ್ರಕ್ರಿಯೆ ಐತಿಹಾಸಿಕವಾದ ಸಿಯಾಲ್ ಕೋಟ್ ಮತ್ತು ಪೇಶಾವರ ದೇವಸ್ಥಾನಗಳ ಹಸ್ತಾಂತರ ಮೂಲಕ ಆರಂಭಗೊಂಡಿದೆ. ಇಮ್ರಾನ್ ಖಾನ್ ಮೋದಿ ಹೊಗಳಿದ್ದರ ಉದ್ದೇಶ ಏನಿರಬಹುದು ಎಂಬುದು ತೀವ್ರ ಕುತೂಹಲ ಕೆರಳಿಸಿದೆ,

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img