Sunday, September 19, 2021
Homeದೇಶರಫೇಲ್ ಆದೇಶ ಮರುಪರಿಶೀಲಿಸಲು ಸುಪ್ರೀಂ ಒಪ್ಪಿಗೆ – ಕೇಂದ್ರಕ್ಕೆ ಹಿನ್ನಡೆ

ಇದೀಗ ಬಂದ ಸುದ್ದಿ

ರಫೇಲ್ ಆದೇಶ ಮರುಪರಿಶೀಲಿಸಲು ಸುಪ್ರೀಂ ಒಪ್ಪಿಗೆ – ಕೇಂದ್ರಕ್ಕೆ ಹಿನ್ನಡೆ

ರಫೇಲ್​​ ಒಪ್ಪಂದಕ್ಕೆ ಸಂಬಂಧಿಸಿದ ತನ್ನ ಆದೇಶವನ್ನು ಮರುಪರಿಶೀಲಿಸಲು ಸುಪ್ರೀಂ ಕೋರ್ಟ್​ ಒಪ್ಪಿಗೆ ನೀಡಿದೆ. ಕಳ್ಳತನವಾಗಿದ್ದ ರಫೇಲ್​​ ದಾಖಲೆಗಳನ್ನು ಪರಿಶೀಲಿಸಲು ಸುಪ್ರೀಂ ಕೋರ್ಟ್​ ಸಮ್ಮತಿ ನೀಡಿದ್ದು  ಕೇಂದ್ರ ಸರ್ಕಾರಕ್ಕೆ ಹಿನ್ನಡೆಯಾಗಿದೆ.

ಡಿಸೆಂಬರ್​​ನಲ್ಲಿ ಸುಪ್ರೀಂ ಕೋರ್ಟ್​ ರಫೇಲ್​​ ಡೀಲ್​ಗೆ ಸಂಬಂಧಿಸಿದಂತೆ ಮೋದಿ ಸರ್ಕಾರಕ್ಕೆ ಕ್ಲೀನ್​ ಚಿಟ್​ ನೀಡಿತ್ತು. ಈ ಆದೇಶವನ್ನು ಮರುಪರಿಶೀಲಿಸುವಂತೆ ಅನೇಕ ಅರ್ಜಿಗಳು ಸಲ್ಲಿಕೆಯಾಗಿದ್ದವು. ಆದ್ರೆ ಕೇಂದ್ರ ಸರ್ಕಾರ ಆದೇಶದ ಮರುಪರಿಶೀಲನೆಗೆ ಆಕ್ಷೇಪ ವ್ಯಕ್ತಪಡಿಸಿತ್ತು.  ರಕ್ಷಣಾ ಸಚಿವಾಲಯದಿಂದ ರಫೇಲ್​​​ ಒಪ್ಪಂದಕ್ಕೆ ಸಂಬಂಧಿಸಿದ ದಾಖಲೆಗಳು ಕಳ್ಳತನವಾಗಿದ್ದು, ಇದನ್ನು ಅರ್ಜಿದಾರರು ರಫೇಲ್​ ಡೀಲ್​​​ ಬಗ್ಗೆ ಆರೋಪ ಮಾಡುವಲ್ಲಿ ಬಳಸಿಕೊಂಡಿದ್ದಾರೆ ಎಂದು ಕೇಂದ್ರ ಸರ್ಕಾರ ಕೋರ್ಟ್​ಗೆ ಹೇಳಿತ್ತು.  ಕಳ್ಳತನವಾದ ದಾಖಲೆಗಳನ್ನು ಸಾಕ್ಷಿಯಾಗಿ ಪರಿಗಣಿಸುವ ವಿಚಾರದಲ್ಲಿ ಕೇಂದ್ರ ಸರ್ಕಾರ ಆಕ್ಷೇಪ ವ್ಯಕ್ತಪಡಿಸಿತ್ತು. ಈಗ ರಫೇಲ್​ ಆದೇಶದ ಮರುಪರಿಶೀಲನೆಗೆ ಕೋರ್ಟ್​ ಒಪ್ಪಿದ್ದು, ರಕ್ಷಣಾ ಸಚಿವಾಲಯದ ದಾಖಲೆಗಳ ಪರಿಶೀಲನೆಗೆ ಸಮ್ಮಿತಿ ಸೂಚಿಸಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img