Sunday, June 13, 2021
Homeಜಿಲ್ಲೆಬೆಂಗಳೂರುಮಾಲೀಕರೇ ಉದ್ಯೋಗಿಗಳಿಗೆ ಸಂಬಳ ನೀಡದಿದ್ದರೆ ಹುಷಾರ್...!

ಇದೀಗ ಬಂದ ಸುದ್ದಿ

ಮಾಲೀಕರೇ ಉದ್ಯೋಗಿಗಳಿಗೆ ಸಂಬಳ ನೀಡದಿದ್ದರೆ ಹುಷಾರ್…!

ಏಳು ತಿಂಗಳಿನಿಂದ ಸಂಬಳ ನೀಡದಿದ್ದ ಸಂಸ್ಥೆಯ ಮಾಲೀಕರನ್ನು ಅದೇ ಸಂಸ್ಥೆಯ ಉದ್ಯೋಗಿಗಳು ಅಫರಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಅಪಹರಣ ಪ್ರಕರಣ ಬೇಧಿಸಿರುವ ಪೋಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
ಅಲಸೂರು ಸಮೀಪದಲ್ಲಿ ಖಾಸಗಿ ಸಂಸ್ಥೆಯನ್ನು ನಡೆಸುತ್ತಿದ್ದ ಸುಜಯ್  ತನ್ನ ಉದ್ಯೋಗಿಗಳಿಗೆ ಕಳೆದ ಸೆಪ್ಟೆಂಬರ್ 2018ರಿಂದ ವೇತನ ಪಾವತಿಸಿರಲಿಲ್ಲ. ಇದರಿಂದ ನಿರಾಶೆಗೊಂಡ ಉದ್ಯೋಗಿಗಳು ತಮ್ಮ ಬಾಸ್ ಅನ್ನು ಅಪಹರಿಸಿ, ತಮ್ಮ ವೇತನ ಬಾಕಿ ಪಡೆದುಕೊಳ್ಳಲು ತೀರ್ಮಾನಿಸಿದ್ದರು.
ಎಚ್.ಎಸ್.ಆರ್. ಲೇಔಟ್ ನಲ್ಲಿರುವ ತಮ್ಮ ಸ್ನೇಹಿತರ ಮನೆಯಲ್ಲಿ ಮಾಲೀಕನನ್ನು ಇರಿಸಿದ್ದರು. ಅಲ್ಲಿ ಸುಜಯ್ ಗೆ ಚಿತ್ರಹಿಂಸೆ ನೀಡಿದ್ದಾರೆ. ತಮ್ಮ ಸಂಬಳ ಬಾಕಿ ನೀಡುವಂತೆ ಒತ್ತಾಯಿಸಿದ್ದಾರೆ. ಸುಜಯ್ ಉದ್ಯೋಗಿಗಳ ಸಂಬಳ ನಿಡುವುದಾಗಿ ಭರವಸೆ ನೀಡಿದ ಬಳಿಕ ಅಪಹರಣಕಾರರು ಅವರನ್ನು ಸುರಕ್ಷಿತವಾಗಿ ಬಿಟ್ಟಿದ್ದಾರೆ.ಅಪಹರಣಕಾರರಿಂದ ಬಿಡುಗಡೆಗೊಂಡ ಸುಜಯ್ ಅಲಸೂರು ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img