Wednesday, September 22, 2021
Homeದೇಶ‘ಪಿಎಂ ನರೇಂದ್ರ ಮೋದಿ’ ಚಿತ್ರದ ನಿಷೇಧ 'ನಮೋ ಟಿವಿ'ಗೂ ಅನ್ವಯ !

ಇದೀಗ ಬಂದ ಸುದ್ದಿ

‘ಪಿಎಂ ನರೇಂದ್ರ ಮೋದಿ’ ಚಿತ್ರದ ನಿಷೇಧ ‘ನಮೋ ಟಿವಿ’ಗೂ ಅನ್ವಯ !

ಪ್ರಧಾನಿ ನರೇಂದ್ರ ಮೋದಿ ಜೀವನಾಧಾರಿತ “ಪಿಎಂ ನರೇಂದ್ರ ಮೋದಿ” ಚಿತ್ರದ ಮೇಲಿನ ನಿಷೇಧ ನಮೋ ಟಿವಿ ಪ್ರಸಾರಕ್ಕೂಅನ್ವಯವಾಗುತ್ತದೆ ಎಂದು ಚುನಾವಣಾ ಆಯೋಗದ ಹಿರಿಯ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ.
‘ಪಿಎಂ ನರೇಂದ್ರ ಮೋದಿ’ಚಿತ್ರ ನಿಷೇಧಿಸಿ ಚುನಾವಣಾ ಆಯೋಗ ಹೊರಡಿಸಿರುವ ಆದೇಶದಲ್ಲಿನ ಒಂದು ಪ್ಯಾರಾಗ್ರಾಫ್ ಅನ್ನು ಹಿರಿಯ ಅಧಿಕಾರಿ ಉಲ್ಲೇಖೀಸಿದ್ದು, ಅದರಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿ ಇರುವಲ್ಲಿ ಯಾವುದೇ ಅಭ್ಯರ್ಥಿಯ ಫೋಟೋ, ಪೋಸ್ಟರ್‌, ಜಾಹೀರಾತುಗಳು, ಆತನ ಚುನಾವಣೆಗೆ ಅನುಕೂಲ ಕಲ್ಪಿಸುವ ಉದ್ದೇಶದಲ್ಲಿ ಆ ಪ್ರದೇಶದಲ್ಲಿನ ವಿದ್ಯುನ್ಮಾನ ಮಾಧ್ಯಮದಲ್ಲಿ ಪ್ರದರ್ಶಿಸುವಂತಿಲ್ಲ ಎಂಬ ನಿರ್ಬಂಧ ವಿಧಿಸಲಾಗಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img