Sunday, September 19, 2021
Homeಜಿಲ್ಲೆಹಾಸನಕುಟುಂಬ ರಾಜಕಾರಣದ ಬಗ್ಗೆ ಗುಡುಗಿದ ಯಡಿಯೂರಪ್ಪ

ಇದೀಗ ಬಂದ ಸುದ್ದಿ

ಕುಟುಂಬ ರಾಜಕಾರಣದ ಬಗ್ಗೆ ಗುಡುಗಿದ ಯಡಿಯೂರಪ್ಪ

ನಮ್ಮ ಎದುರಾಳಿಗಳನ್ನು ಹಗುರವಾಗಿ ಕಾಣಬೇಡಿ ಅಂತ ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಹಾಸನದಲ್ಲಿ ದೇವೇಗೌಡರಿಗೆ ಟಾಂಗ್ ನೀಡಿದ್ದಾರೆ.  ಅರಸೀಕೆರೆಯಲ್ಲಿ ನಡೆದ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ಯಡಿಯೂರಪ್ಪ, ಜಾತಿ ವಿಷ ಬೀಜ ಬಿತ್ತುವ ಸಂಸ್ಕೃತಿ ನಮ್ಮದಲ್ಲ, ಅದು ಕುಟುಂಬ ರಾಜಕಾರಣದವರಿಗೆ ಮಾತ್ರ ಸಾಧ್ಯ ಅಂತ ಗುಡುಗಿದ್ದಾರೆ. ಕುಟುಂಬ ರಾಜಕಾರಣ ಅನ್ನೋದು ದೇವೇಗೌಡ ಆ್ಯಂಡ್​ ಕಂಪೆನಿ ಇದ್ದ ಹಾಗೇ ಎಂದು ಯಡಿಯೂರಪ್ಪ ಗುಡುಗಿದ್ದಾರೆ. ಸೂರ್ಯ-ಚಂದ್ರ ಇರುವುದು ಎಷ್ಟು ಸತ್ಯವೋ ಈ ಬಾರಿ ಮತ್ತೊಮ್ಮೆ ಮೋದಿ ಪ್ರಧಾನಿ ಆಗೋದು ಅಷ್ಟೇ ಸತ್ಯ ಎಂದು ಹೇಳಿದ್ದಾರೆ. ಏಪ್ರಿಲ್ 18ರಂದು ಲಕೋಟೆ ಮೇಲೆ ಬರೆದುಕೊಡ್ತೇನೆ. ಹಾಸನ ಲೋಕಸಭಾ ಕ್ಷೇತ್ರ ಗೆದ್ದೇ ಗೆಲ್ಲುತ್ತೇವೆ ಎಂದು ವಿಶ್ವಾಸವ್ಯಕ್ತಪಡಿಸಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img