Thursday, September 23, 2021
Homeರಾಜಕೀಯ2ನೇ ಹಂತದಲ್ಲಿ 237 ಅಭ್ಯರ್ಥಿಗಳ ಅದೃಷ್ಟ ಪರೀಕ್ಷೆ

ಇದೀಗ ಬಂದ ಸುದ್ದಿ

2ನೇ ಹಂತದಲ್ಲಿ 237 ಅಭ್ಯರ್ಥಿಗಳ ಅದೃಷ್ಟ ಪರೀಕ್ಷೆ

ಎರಡನೇ ಹಂತದ ಚುನಾವಣೆಗೆ ಉತ್ತರ ಕರ್ನಾಟಕ ಭಾಗದ 14 ಲೋಕಸಭೆ ಕ್ಷೇತ್ರಗಳಿಗೆ ಅಖಾಡ ಸಜ್ಜಾಗಿದೆ. ನಾಮಪತ್ರ ವಾಪಸ್‌ ಪಡೆಯಲು ಕೊನೆಯ ದಿನವಾದ ನಿನ್ನೆ  282 ನಾಮಪತ್ರಗಳ ಪೈಕಿ 45 ಅಭ್ಯರ್ಥಿಗಳು ನಾಮಪತ್ರ ವಾಪಸ್‌ ಪಡೆದಿದ್ದು, ಅಂತಿಮವಾಗಿ 237 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ. ಬಹುತೇಕ ಎಲ್ಲ ಕ್ಷೇತ್ರಗಳಲ್ಲೂ ಬಿಜೆಪಿ ಮತ್ತು ಕಾಂಗ್ರೆಸ್‌- ಜೆಡಿಎಸ್‌ ಮೈತ್ರಿ ಅಭ್ಯರ್ಥಿ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ.

ಎರಡನೇ ಹಂತದ 14 ಕ್ಷೇತ್ರಗಳ ಪೈಕಿ ಬೆಳಗಾವಿಯಲ್ಲಿ ಅತೀ ಹೆಚ್ಚು 57 ಮತ್ತು ರಾಯಚೂರಿನಲ್ಲಿ ಅತೀ ಕಡಿಮೆ 5 ಮಂದಿ ಅಭ್ಯರ್ಥಿಗಳು ಕಣದಲ್ಲಿ ಇದ್ದಾರೆ. ಉಳಿದಂತೆ ಚಿಕ್ಕೋಡಿಯಲ್ಲಿ 11, ಬಾಗಲಕೋಟೆಯಲ್ಲಿ 14, ವಿಜಯಪುರ 12, ಕಲಬುರಗಿ 12, ಬೀದರ್‌ 22, ಕೊಪ್ಪಳ 14, ಬಳ್ಳಾರಿ 11, ಹಾವೇರಿ 10, ಧಾರವಾಡ 19, ಉತ್ತರ ಕನ್ನಡ 13, ದಾವಣಗೆರೆ 25 ಮತ್ತು ಶಿವಮೊಗ್ಗದಲ್ಲಿ 12 ಅಭ್ಯರ್ಥಿಗಳು ಅದೃಷ್ಟ ಪರೀಕ್ಷಿಸಲಿದ್ದಾರೆ. ಕಾಂಗ್ರೆಸ್ ನಿಂದ ಮಲ್ಲಿ
ಕಾರ್ಜುನ್ ಖರ್ಗೆ, ಈಶ್ವರ ಖಂಡ್ರೆ, ವಿ.ಎಸ್‌. ಉಗ್ರಪ್ಪರಂಥ ಪ್ರಮುಖರು ಅದಷ್ಟ ಪರೀಕ್ಷೆಗೆ ಇಳಿದಿದ್ದರೆ, ಬಿಜೆಪಿಯಿಂದ ಕೇಂದ್ರ ಸಚಿವರಾದ ರಮೇಶ ಜಿಗಜಿಣಗಿ, ಅನಂತಕುಮಾರ ಹೆಗಡೆ, ಉಮೇಶ ಜಾಧವ್ ಮೊದಲಾದವರು ಕಣದಲ್ಲಿದ್ದಾರೆ. 

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img