Wednesday, September 22, 2021
Homeಜಿಲ್ಲೆಚಿತ್ರದುರ್ಗನಿಮ್ಮ ವೋಟ್ ಬ್ಯಾಂಕ್ ಭಾರತದಲ್ಲಿದೆಯೋ.. ಪಾಕ್ ನಲ್ಲಿದೆಯೋ ? ಹೆಚ್ಡಿಕೆಗೆ ಮೋದಿ ಪ್ರಶ್ನೆ

ಇದೀಗ ಬಂದ ಸುದ್ದಿ

ನಿಮ್ಮ ವೋಟ್ ಬ್ಯಾಂಕ್ ಭಾರತದಲ್ಲಿದೆಯೋ.. ಪಾಕ್ ನಲ್ಲಿದೆಯೋ ? ಹೆಚ್ಡಿಕೆಗೆ ಮೋದಿ ಪ್ರಶ್ನೆ

ಕೋಟೆ ನಾಡಲ್ಲಿ “ಮೋದಿ” ರಣಕಹಳೆ

ಕರ್ನಾಟಕದ ಮುಖ್ಯಮಂತ್ರಿಯ ವೋಟ್ ಬ್ಯಾಂಕ್ ಭಾರತದಲ್ಲಿದೆಯೋ ಅಥವಾ ಪಾಕಿಸ್ತಾನದಲ್ಲಿದೆಯೋ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರಶ್ನಿಸಿದ್ದಾರೆ. ಉಗ್ರರ ಮೇಲೆ ವೈಮಾನಿಕ ದಾಳಿ ನಡೆಸಿದ್ರೆ ಪಾಕ್ ಗೆ ನೋವು, ಇಲ್ಲಿ ಕಾಂಗ್ರೆಸ್ ಜೆಡಿಎಸ್ ಗೆ ಕಣ್ಣೀರು ಅಂತ ಲೇವಡಿ ಮಾಡಿದ್ರು.

 ಇದೇ ವೇಳೆ ನ್ಯಾಷನಲ್ ಹೆರಾಲ್ಡ್ ಆರೋಪಿಗಳಿಗೆ ತಕ್ಕ ಶಿಕ್ಷೆ ಆಗಲಿದೆ ಅಂತ ಪ್ರಧಾನಿ ಮೋದಿ ಹೇಳಿದ್ದಾರೆ.  ಚಿತ್ರದುರ್ಗದಲ್ಲಿ ಬಿಜೆಪಿ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಮೋದಿ ದೇಶದ ಕನಸು, ಭಾವನೆಗಳ ಜೊತೆ ಕಾಂಗ್ರೆಸ್ ಚೆಲ್ಲಾಟವಾಡಿದೆ ಅಂತ ಆರೋಪಿಸಿದ್ರು. 2 ಜಿ ಹಗರಣ, ಸಿಡಬ್ಲ್ಯುಜಿ ಹಗರಣ, ಸಾಲಮನ್ನಾ ಹಗರಣ ಸೇರಿದಂತೆ ಹಲವು ಹಗರಣಗಳಲ್ಲಿ ಕಾಂಗ್ರೆಸ್ ನಾಯಕರು ಭಾಗಿಯಾಗಿದ್ದಾರೆ. ನಮ್ಮ ಸೇನೆ, ವಿದೇಶಾಂಗ ನೀತಿಯನ್ನ ಕಾಂಗ್ರೆಸ್ ಬಲಹೀನ ಮಾಡಿದೆ ಅಂತ ಮೋದಿ ಗಂಭೀರ ಆರೋಪ ಮಾಡಿದ್ದಾರೆ. ನಿಮ್ಮ ಮತವನ್ನ ದೇಶದಲ್ಲಿ ಬಲಿಷ್ಠ ಸರ್ಕಾರ ರಚಿಸಲು ನೀಡಿ ಅಂತ ಕರೆ ನೀಡಿದ್ರು. ಇದೇ ವೇಳೆ ಕಾಂಗ್ರೆಸ್ ನ ನ್ಯಾಯ್ ಯೋಜನೆ ಬಗ್ಗೆಯೂ ಮೋದಿ ಟೀಕಿಸಿದ್ರು. 

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img